ದಯವಿಟ್ಟು ಸಾಕು ನಿಲ್ಲಿಸಿ ಎಲ್ಲರು, ಈಗಲೇ ತುಂಬಾ ನೊಂದಿದ್ದೇನೆ ಮತ್ತೆ ನೋವು ಕೊಡಬೇಡಿ ಎಂದ ಅಶ್ವಿನಿ ಪುನೀತ್. ಸಾಕು ನಿಲ್ಲಿಸಿ ಕನ್ನಡಿಗರೇ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಪರಮಾತ್ಮ ಚಿತ್ರದಲ್ಲಿ ಹೇಳಿದಂತೆ ಜೊತೆಗಿರದ ಜೀವ ಎಂದಿಗಿಂತ ಸನಿಹ. ಈಗ ಅವರನ್ನು ನಾವು ದೈಹಿಕವಾಗಿ ಕಳೆದುಕೊಂಡಿರಬಹುದು ಆದರೆ ಮಾನಸಿಕವಾಗಿ ಇಂದಿಗೂ ಕೂಡ ನಮ್ಮ ಮನಸ್ಸಿನ ಆಳದಲ್ಲಿ ಸದಾಕಾಲ ಅಮರರಾಗಿದ್ದಾರೆ. ಅವರನ್ನು ನೆನಸಿಕೊಳ್ಳದ ದಿನವೇ ಇಲ್ಲ ಎಂದು ಹೇಳಬಹುದಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಅಕಾಲಿಕವಾಗಿ ಕಳೆದುಕೊಂಡು ಅಭಿಮಾನಿಗಳು ಕಂಗೆಟ್ಟಿದ್ದಾರೆ.

ಪುನೀತ್ ರಾಜಕುಮಾರ್ ರವರ ನಿಧನಕ್ಕೆ ಬಾಲಿವುಡ್ ನಿಂದ ಹಿಡಿದು ದಕ್ಷಿಣ ಭಾರತದ ಎಲ್ಲಾ ಗಣ್ಯರು ಶ್ರದ್ಧಾಂಜಲಿ ಕೋರಿದ್ದಾರೆ ಇನ್ನು ಕೆಲವರು ಬೆಂಗಳೂರಿಗೆ ಅವರ ಸಮಾಧಿಯ ಮುಂದೆ ಬಂದು ನಮನವನ್ನು ಮಾಡಿದ್ದಾರೆ. ಕೆಲವರು ಅವರ ಸಮಾಧಿಯ ಮುಂದೆ ಬಂದು ಮದುವೆ ಆಗುವ ನಿರ್ಧಾರವನ್ನು ಕೂಡ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಂತಿಮದರ್ಶನಕ್ಕೆ 25 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ದರು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 12ನೇ ದಿನದ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಅಧಿಕ ಮಂದಿ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದರು. ಇದರಿಂದಲೇ ಗೊತ್ತಾಗುತ್ತದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದ್ದಷ್ಟು ದಿನವೂ ಸಂಪಾದಿಸಿದ್ದು ಇದೇ ಜನರ ಪ್ರೀತಿ ಎಂಬುದಾಗಿ. ಇನ್ನು ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಈಗಲೇ ತುಂಬಾ ನೊಂದಿದ್ದೇನೆ ಮತ್ತೇ ನೋವು ಕೊಡಬೇಡಿ ಎಂಬುದಾಗಿ ಕಣ್ಣೀರು ಹಾಕಿದ್ದಾರೆ‌. ಹಾಗಿದ್ದರೆ ಅಶ್ವಿನಿ ಅವರು ಕಣ್ಣೀರು ಹಾಕುವುದಕ್ಕೆ ಯಾರು ಕಾರಣ ಮತ್ತು ಏನು ಕಾರಣ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನ ವಾಗಿರುವ ಸುದ್ದಿಯನ್ನು ಕೇಳುತ್ತಿದ್ದಂತೆ ಇದುವರೆಗೂ ಕೂಡ ರಾಜ್ಯಾದ್ಯಂತ 14ಮಂದಿ ಜೀವವನ್ನು ತ್ಯಾಗ ಮಾಡಿ ಅವರ ಹಿಂದೆ ಹೊರಟು ಬಿಟ್ಟಿದ್ದಾರೆ. ಇದು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಾಕಷ್ಟು ನೋ’ವನ್ನುಂಟು ಮಾಡಿದೆ.

ಇದಕ್ಕಾಗಿ ಅಶ್ವಿನಿ ಅವರು ಯಾರು ಕೂಡ ತಪ್ಪು ನಿರ್ಧಾರವನ್ನು ಮಾಡಬೇಡಿ ಈಗಾಗಲೇ ನಾವು ಸಾಕಷ್ಟು ನೊಂದಿದ್ದೇವೆ ಇನ್ನೂ ಕೂಡ ನೋವು ನೀಡಬೇಡಿ ಎಂದಿದ್ದಾರೆ. ನಿಮ್ಮನ್ನೇ ನಂಬಿಕೊಂಡು ನಿಮ್ಮ ಕುಟುಂಬ ಹಾಗೂ ತಂದೆ-ತಾಯಿಗಳು ಇರುತ್ತಾರೆ ಅವರಿಗೆ ಇಂತಹ ಆ’ಘಾತವನ್ನು ನೀಡಬೇಡಿ ಎಂಬುದಾಗಿ ಅಶ್ವಿನಿ ಅವರು ಹೇಳಿಕೊಂಡಿದ್ದಾರೆ. ಅಶ್ವಿನಿ ಅವರು ಹೇಳಿರುವ ಈ ಮಾತು ಖಂಡಿತವಾಗಿ ಒಪ್ಪುವಂಥದ್ದು.

ಇತ್ತೀಚಿಗಷ್ಟೇ ರಾಘಣ್ಣ ಅವರು ಕೂಡ ಚನ್ನಪಟ್ಟಣದಲ್ಲಿ ಅಪ್ಪುಗಾಗಿ ಜೀವವನ್ನು ಕಳೆದುಕೊಂಡಿರುವ ವೆಂಕಟೇಶ್ ಎಂಬ ಅಭಿಮಾನಿಯ ಮನೆಗೆ ಹೋಗಿ ಅವರ ಪೋಷಕರನ್ನು ಸಂತೈಸಿದ್ದಾರೆ. ಅಭಿಮಾನಕ್ಕಾಗಿ ಯಾರೂ ಕೂಡ ಹೀಗೆ ಮಾಡಬೇಡಿ ಹೀಗೆ ಮಾಡುತ್ತ ಹೋದರೆ ಭೂಮಿಯ ಮೇಲೆ ಯಾರೂ ಕೂಡ ಉಳಿದುಕೊಳ್ಳುವುದಿಲ್ಲ ಎಂಬುದಾಗಿ ಕೂಡ ಬುದ್ಧಿ ಮಾತನ್ನು ಹೇಳಿಬಂದಿದ್ದಾರೆ. ಅಭಿಮಾನಿಗಳಾಗಿ ಅವರ ಹೆಸರಿನಲ್ಲಿ ಇನ್ನು ಮುಂದೆ ಒಳ್ಳೆ ಕೆಲಸಗಳನ್ನು ಮಾಡೋಣ ಅದರ ಮೂಲಕವಾದರೂ ಕೂಡ ಅವರಿಗೆ ನಮ್ಮ ಅಭಿಮಾನದ ಗೌರವವನ್ನು ಸಲ್ಲಿಸಬಹುದಾಗಿದೆ ಗೆಳೆಯರೇ.

Post Author: Ravi Yadav