ಅಪ್ಪು ಮಾಡುತ್ತಿದ್ದ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಲು ಸಿದ್ದರಾದರೇ ಡಿ ಬಾಸ್, ಅಂದು ಅಪ್ಪು ಇಂದು ಡಿ ಬಾಸ್ ಮಾಡಲು ಹೊರಟಿರುವುದಾದರೂ ಏನು ಗೊತ್ತೇ??

ಅಪ್ಪು ಮಾಡುತ್ತಿದ್ದ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಲು ಸಿದ್ದರಾದರೇ ಡಿ ಬಾಸ್, ಅಂದು ಅಪ್ಪು ಇಂದು ಡಿ ಬಾಸ್ ಮಾಡಲು ಹೊರಟಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖ ಖಂಡಿತವಾಗಿಯೂ ಸದ್ಯದ ಮಟ್ಟಿಗೆ ಮಾಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ ಅಂತಹ ಒಳ್ಳೆಯ ಮನುಷ್ಯನನ್ನು ಕಳೆದುಕೊಂಡಿರುವುದಕ್ಕೆ ಯಾವುದಕ್ಕೂ ಕೂಡ ಸರಿಸಾಟಿಯಲ್ಲ. ಪುನೀತ್ ರಾಜಕುಮಾರ್ ಅವರು ಕೇವಲ ನಟನಾಗಿ ಮಾತ್ರವಲ್ಲದೆ ಒಬ್ಬ ಸಮಾಜದ ಜವಾಬ್ದಾರಿಯುತ ನಾಗರಿಕನಾಗಿ ಕೂಡ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ.

ಗೋಶಾಲೆ ಅನಾಥಾಶ್ರಮ ವೃದ್ಧಾಶ್ರಮ ಉಚಿತ ಶಾಲೆ ಹಾಗೂ 1800 ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕೂಡ ನೀಡುತ್ತಿದ್ದರು. ಇಂತಹ ಅದೆಷ್ಟೋ ಸಮಾಜ ಸೇವೆಗಳನ್ನು ಮಾಡಿಕೊಂಡು ಅದನ್ನು ಯಾರ ಬಳಿಯೂ ಕೂಡ ಹೇಳದೆ ಗೌಪ್ಯವಾಗಿಟ್ಟಿದ್ದರು ನಮ್ಮ ಅಪ್ಪು. ಇನ್ನು ಅಪ್ಪು ಅವರು ನೋಡಿಕೊಳ್ಳುತ್ತಿದ್ದ 1800 ಮಕ್ಕಳನ್ನು ನಟ ವಿಶಾಲ್ ರವರು ನೋಡಿಕೊಳ್ಳುತ್ತೇನೆ ಎಂಬುದಾಗಿ ಕೂಡ ಹೇಳಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಮನೆಗೆ ಪುಣ್ಯತಿಥಿ ಸ್ಮರಣೆಯ ಸಂದರ್ಭದಲ್ಲಿ ಹೋಗಿದ್ದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮನೆಯಲ್ಲಿ ಅಶ್ವಿನಿ ಹಾಗೂ ಶಿವಣ್ಣ ಮತ್ತು ರಾಘಣ್ಣ ನವರಿಗೆ ಸಂತೈಸಿ ಬಂದಿದ್ದರು. ಇನ್ನು ಅಪ್ಪು ಅವರ ಸಮಾಧಿಯ ಮುಂದೆ ಹೋಗಿ ನಮಿಸಿ ಭಾವುಕರು ಕೂಡ ಆಗಿದ್ದರು. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನೋಡಿಕೊಳ್ಳುತ್ತಿದ್ದ ಗೋಶಾಲೆಯನ್ನು ತಾನೇ ನೋಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ ನಮ್ಮ ಡಿ ಬಾಸ್ ಎಂಬ ಮಾಹಿತಿ ತಿಳಿದು ಬಂದಿದೆ. ಆಪ್ತ ಮೂಲಗಳಿಂದ ಈ ಮಾಹಿತಿ ತಿಳಿದು ಬಂದಿದ್ದು, ಅಧಿಕೃತ ಘೋಷಣೆ ಒಂದೇ ಬಾಕಿ ಇರುವುದಾಗಿ ತಿಳಿದು ಬಂದಿದೆ. ಇನ್ನು ಇದಕ್ಕೆ ಅಪ್ಪು ಕುಟುಂಬ ಅನುಮತಿ ನೀಡುವುದೇ ಅಥವಾ ಅಪ್ಪು ಕುಟುಂಬವೇ ಈ ಕಾರ್ಯಗಳನ್ನು ಮುಂದುವರೆಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಅಪ್ಪು ಹಾಗೂ ದಚ್ಚು ಮೊದಲಿನಿಂದಲೂ ಕೂಡ ಸ್ನೇಹಿತರಾಗಿದ್ದರು ಚಿತ್ರರಂಗದಲ್ಲಿ ಒಂದೇ ಸಮಯಕ್ಕೆ ಕಾಲಿಟ್ಟವರು ಕೂಡ ಆಗಿದ್ದರು. ಈಗ ತಮ್ಮ ಗೆಳೆಯ ಅಪ್ಪುವಿನ ಕನಸನ್ನು ತನ್ನ ಜವಾಬ್ದಾರಿಯನ್ನುವಂತೆ ನಿರ್ವಹಿಸಲು ಹೊರಟಿರುವ d-boss ರವರಿಗೆ ನಮ್ಮೆಲ್ಲರ ಧನ್ಯವಾದಗಳು.