ದಿನಗಳು ಕಳೆದರು ಮರೆಯಾಗುತ್ತಿಲ್ಲ ನೋವು, ಹಾಲು ತುಪ್ಪ ಕಾರ್ಯಕ್ರಮದಲ್ಲೂ ನೋವಲ್ಲಿ ಮಕ್ಕಳು. ಇಂತಹ ಪರಿಸ್ಥಿತಿ ಯಾರಿಗೂ ಬೇಡ.

ನಮಸ್ಕಾರ ಸ್ನೇಹಿತರೇ ಅಪ್ಪು ರವರು ನಮ್ಮನ್ನೆಲ್ಲ ಬಿಟ್ಟು ಹೋದಮೇಲೆ ಭೂಮಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡುವುದು ತಪ್ಪು ಎಂದು ಅನಿಸಿಬಿಟ್ಟಿದೆ. ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೋಟ್ಯಂತರ ರೂಪಾಯಿ ಹಣವನ್ನು ಬಡ ಮಕ್ಕಳಿಗೆ ಹಾಗೂ ಅಶಕ್ತರ ಸಹಾಯಕ್ಕೆ ತೆಗೆದಿಟ್ಟಿರುತ್ತಿದ್ದರು. ಇಂತಹ ಒಳ್ಳೆ ಕೆಲಸ ಮಾಡಿದ್ದಕ್ಕೆ ಪುನೀತ್ ರಾಜಕುಮಾರ್ ರವರಿಗೆ ವಿಧಿಯ ಕೆಟ್ಟ ಕಣ್ಣು ಬಿಟ್ಟ ಎಂಬುದಾಗಿ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಯಾಕೆಂದರೆ ಪುನೀತ್ ರಾಜಕುಮಾರ್ ರವರಂತಹ ಒಳ್ಳೆಯವರು ಭೂಮಿಯ ಮೇಲೆ ನಿಲ್ಲದೆ ಸ್ವರ್ಗಸ್ಥರಾಗಿ ಬಿಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 5ನೇ ದಿನದ ಹಾಲು ತುಪ್ಪ ಕಾರ್ಯಕ್ರಮ ನಡೆದಿರುವುದು ನಿಮಗೆಲ್ಲಾ ಗೊತ್ತಿದೆ. ಕಾರಿನಿಂದ ಬಂದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ದೊಡ್ಡಮನೆ ಕುಟುಂಬಸ್ಥರು 4 ಬಿಎಂಟಿಸಿ ಬಸ್ಸುಗಳಲ್ಲಿ ಸಮಾಧಿ ಬಳಿ ಬಂದಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮನೆಮಂದಿಯಲ್ಲಾ ನಮ್ಮ ಮನೆ ಮಗನಿಗೆ ಏನು ಇಷ್ಟವೋ ಅವನು ಸಮಾಧಿಗೆ ಇಟ್ಟು ಹಾಲು ತುಪ್ಪ ಕಾರ್ಯಕ್ರಮವನ್ನು ಮಾಡಿ ಮುಗಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ನಿ ಅಶ್ವಿನಿ ಇಬ್ಬರು ಹೆಣ್ಣುಮಕ್ಕಳು ರಾಘಣ್ಣ ಶಿವಣ್ಣ ಹಾಗೂ ಅವರ ಮಕ್ಕಳು ಎಲ್ಲರೂ ಕೂಡ ಭಾಗವಹಿಸಿದ್ದರು. ಇನ್ನು ಬಾಡಿಗಾರ್ಡ್ ಹಾಗೂ ಸಹಾಯಕರು ಎಲ್ಲರೂ ಕೂಡ ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದರು. ಹಾಲು ತುಪ್ಪ ಕಾರ್ಯಕ್ರಮ ಆದನಂತರ ನಾಳೆಯಿಂದ ಸಾರ್ವಜನಿಕರಿಗೆ ಸಮಾಧಿಯನ್ನು ನೋಡುವ ಅವಕಾಶ ಮಾಡಿಕೊಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಯಾಕೆಂದರೆ ಕಳೆದ ಬಾರಿ ಅಣ್ಣಾವ್ರನ್ನು ಸಮಾಧಿ ಮಾಡಿದಾಗ ಕುಟುಂಬದವರಿಗಿಂತ ಮುಂಚೆ ಬಂದು ಹಾಲುತುಪ್ಪ ಕಾರ್ಯಕ್ರಮವನ್ನು ಮಾಡಿ ಸಮಾಧಿಯ ಮಣ್ಣನ್ನು ಕೂಡ ಪೂಜೆ ಮಾಡಿಕೊಳ್ಳುವ ಸಲುವಾಗಿ ತೆಗೆದುಕೊಂಡು ಹೋಗಿದ್ದಾರಂತೆ.

ಹೀಗಾಗಿಯೇ ಕುಟುಂಬಸ್ಥರು ಹಾಲುತುಪ್ಪ ಪೂಜೆ ಸಲ್ಲಿಸಿದ ಮೇಲೆ ಬೇರೆಯವರಿಗೆ ಸಮಾಧಿ ದರ್ಶನ ಮಾಡುವ ಅವಕಾಶವನ್ನು ಒದಗಿಸಲಾಗಿತ್ತು. ಇನ್ನು ಈ ಸಂದರ್ಭದಲ್ಲಿ ಒಬ್ಬ ಹೆಣ್ಣುಮಗಳು ಅಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಹೌದು ಗೆಳೆಯರೇ ಸ್ಟಾರ್ ಪುನೀತ್ ರಾಜಕುಮಾರ್ ಅವರ ವೈಯಕ್ತಿಕ ಬಾಡಿಗಾರ್ಡ್ ಚಲಪತಿ ಅವರ ಮಗಳು ಅಪ್ಪು ಅವರನ್ನು ಕಳೆದುಕೊಂಡ ದುಃಖದಲ್ಲಿ ಕಳೆದ ಆರು ದಿನಗಳಿಂದ ಸರಿಯಾಗಿ ಊಟ ಮಾಡಿಲ್ಲ.

ಅಪ್ಪು ಅವರ ಕಣ್ಣೆದುರೆ ಬೆಳೆದುಬಂದಿದ್ದ ಪುಟ್ಟ ಹೆಣ್ಣು ಮಗಳು ಅಪ್ಪು ರವರ ಸಮಾಧಿ ಬಳಿ ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣೀರು ಬತ್ತಿ ಹೋಗುವಂತೆ ಅತ್ತಿದ್ದಾಳೆ. ಈ ಸಂದರ್ಭ ಕಂಠೀರವ ಸ್ಟುಡಿಯೋ ದಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ.

ಇನ್ನು ಆಕೆಯನ್ನು ಸಂತೈಸಿ ಮನೆಗೆ ಕರೆದುಕೊಂಡು ಹೋಗಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಸಿನಿಮಾದಲ್ಲಿ ನಟಿಸುವ ನಟನೆಯಿಂದ ಮಾತ್ರವಲ್ಲದೇ ಸಮಾಜದಲ್ಲಿ ಅವರು ನೀಡಿರುವ ಕೊಡುಗೆಗಳಿಂದಾಗಿ ಕೂಡ ಸ್ಟಾರ್ ಆಗಿರುವ ಜನನಾಯಕ. ಇಂತಹ ದಿವ್ಯ ಚೇತನವನ್ನು ಕಳೆದುಕೊಂಡಿರುವ ಕರುನಾಡು ಖಂಡಿತವಾಗಿಯೂ ಭಾಗಶಹ ತಬ್ಬಲಿ ಆಗಿದೆ. ಇಡೀ ಭಾರತವೇ ಅವರ ನಿಧನಕ್ಕೆ ಕಂಬನಿಯನ್ನು ಸುರಿಸಿದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Post Author: Ravi Yadav