ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಿಜ ಹೇಳ್ತೇನೆ ದೇವರಾಣೆ ಅಪ್ಪು ಮಾಡಿದ ಈ ಕೆಲಸ ನನಗೆ ಗೊತ್ತಿರಲಿಲ್ಲ ಎಂದ ಶಿವಣ್ಣ, ಮತ್ತೆ ನೆನೆಸಿಕೊಂಡು ಕಣ್ಣೀರು ಹಾಕಿದ ಅಶ್ವಿನಿ.

22

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಕೇವಲ ಅವರ ಕುಟುಂಬಸ್ಥರು ಮಾತ್ರವಲ್ಲದೆ ಇಡೀ ಕರ್ನಾಟಕವೇ ಅನಾಥವಾಗಿದೆ. ಕನ್ನಡ ಚಿತ್ರರಂಗದ ಆಲ್-ರೌಂಡರ್ ನಟನಾಗಿ ಎಲ್ಲರ ಮನಗೆದ್ದಿದ್ದ ಅಂತಹ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಇನ್ನು ಯಾರಿಗೂ ಕೂಡ ಯುವರತ್ನ ಅವರ ಕೊನೆಯ ಚಿತ್ರವಾಗಿರುತ್ತದೆ ಎಂಬುದನ್ನು ಊಹಿಸಲು ಕೂಡ ಸಾಧ್ಯವಾಗಿರಲಿಲ್ಲ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಈಗಾಗಲೇ ತಂದೆತಾಯಿ ಸಮಾಧಿಯ ಪಕ್ಕದಲ್ಲೇ ಸಮಾಧಿ ಮಾಡಿದ್ದಾರೆ. ಇನ್ನು ನಿನ್ನೆಯಷ್ಟೇ 5ನೇ ದಿನದ ಹಾಲುತುಪ್ಪ ಕಾರ್ಯಕ್ರಮವನ್ನು ಕೂಡ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅಪ್ಪು ಕುರಿತಂತೆ ಈ ವಿಷಯ ನನಗೆ ಗೊತ್ತಿಲ್ಲ ಎಂಬುದಾಗಿ ಶಿವಣ್ಣ ಹೇಳಿದ್ದರು. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹಲವಾರು ಗೋಶಾಲೆ ಅನಾಥಾಶ್ರಮ ವೃದ್ಧಾಶ್ರಮ ಹಾಗೂ ಸಾವಿರಾರು ಮಕ್ಕಳ ಉಚಿತ ಶಿಕ್ಷಣವನ್ನು ನೋಡಿಕೊಳ್ಳುತ್ತಿದ್ದರು.

ಈ ಕುರಿತಂತೆ ಸ್ವತಹ ಅವರ ಸಹೋದರ ರಾಗಿರುವ ಶಿವಣ್ಣನವರಿಗೆ ಕೂಡ ಗೊತ್ತಿರಲಿಲ್ಲವಂತೆ. ಈ ಹಿಂದೆ ಅಪ್ಪಾಜಿ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಕಂದ ಎಂಬ ಮಾತನ್ನು ಅಪ್ಪು ನಿಜ ಜೀವನದಲ್ಲಿ ಕೂಡ ನಡೆದುಕೊಂಡಿದ್ದಾನೆ ಎಂಬುದಾಗಿ ಹೆಮ್ಮೆ ಪಟ್ಟುಕೊಂಡಿದ್ದಾರೆ. ಇನ್ನು ಈ ವಿಡಿಯೋ ಹಾಗೂ ಶಿವಣ್ಣನ ಮಾತುಗಳನ್ನು ನೋಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಅವರು ಕೂಡ ಕಣ್ಣೀರು ಹಾಕಿದ್ದಾರೆ. ಈ ವಿಷಯದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಾವು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ಯಾರ ಬಳಿ ಕೂಡ ಹೇಳಿಕೊಳ್ಳುತ್ತಿರಲಿಲ್ಲ ಅವರಿಗೆ ಪ್ರಚಾರದ ಅಗತ್ಯತೆ ಇರಲಿಲ್ಲ ಕೇವಲ ತಮ್ಮ ಮನ ತೃಪ್ತಿಗಾಗಿ ಮಾಡುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಹಾಗು ಅಣ್ಣಾವ್ರು ಹೇಳಿದಂತೆ ಬಲಗೈ ಕೊಟ್ಟದ್ದು ಎಡಗೈ ಗೆ ತಿಳಿಯಬಾರದು ಎಂಬ ಹಾದಿಯಲ್ಲಿ ನಡೆದ್ದಿದ್ದರು ಅಪ್ಪು ಎಂಬುದು ತಿಳಿದು ಬರುತ್ತಿದೆ.

Get real time updates directly on you device, subscribe now.