ಚೀನಾಕ್ಕೆ ಮತ್ತೊಂದು ಶಾಕ್ ನೀಡಲು ರೆಡಿಯಾದ ಮೋದಿ, ಈ ಬಾರಿ ಮಾಡಿರುವ ಮಹತ್ವದ ಯೋಜನೆ ಏನು ಗೊತ್ತೇ??

ಚೀನಾಕ್ಕೆ ಮತ್ತೊಂದು ಶಾಕ್ ನೀಡಲು ರೆಡಿಯಾದ ಮೋದಿ, ಈ ಬಾರಿ ಮಾಡಿರುವ ಮಹತ್ವದ ಯೋಜನೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ವಿಶ್ವದ ಶ್ರೇಷ್ಠ ರಾಷ್ಟ್ರವಾಗುತ್ತಾ ತನ್ನ ದಾಪುಗಾಲು ಹಾಕುತ್ತಿದೆ. ಆರ್ಥಿಕತೆಗೆ ಪೆಟ್ಟು ನೀಡುವ ಯಾವುದೇ ರಾಷ್ಟ್ರಗಳ ಕುತಂತ್ರತೆಯನ್ನು ಲೆಕ್ಕ ಹಾಕದೇ, ಅವರಿಗೆ ಅವರದೇ ಆದ ಭಾಷೆಯಲ್ಲಿ ಉತ್ತರ ನೀಡುತ್ತಿದೆ. ಸದಾ ಕಾಲ ಭಾರತದೊಂದಿಗೆ ಗಡಿಯಲ್ಲಿ ಖ್ಯಾತೆ ತೆಗೆಯುತ್ತಿದ್ದ ಚೀನಾಗೆ ಕಳೆದ ವರ್ಷ ಕೆಲವು ಮೊಬೈಲ್ ಅಪ್ಲಿಕೇಶನ್ ಗಳನ್ನ ನಿಷೇಧಿಸುವ ಮೂಲಕ ದೊಡ್ಡ ಶಾಕ್ ನೀಡಿತ್ತು. ಭಾರತ ಹೇಳಿ ಕೇಳಿ , ಚೀನಾ ನಿರ್ಮಿತ ವಸ್ತುಗಳ ದೊಡ್ಡ ಮಾರುಕಟ್ಟೆ. ಚೀನಿ ನಿರ್ಮಿತ ಅಪ್ಲಿಕೇಶನ್ ಗಳನ್ನ ಭಾರತದಲ್ಲಿ ಯಥೇಚ್ಛವಾಗಿ ಜನ ಉಪಯೋಗಿಸುತ್ತಿದ್ದರು. ಯಾವಾಗ ಭಾರತ ಸರ್ಕಾರ ಆ ಮೊಬೈಲ್ ಅಪ್ಲಿಕೇಶನ್ ಗಳನ್ನ ನಿಷೇಧಿಸಿತೋ, ಆಗ ಚೀನಾದ ಅಪ್ಲಿಕೆಶನ್ ಗಳ ಮಾರುಕಟ್ಟೆಯು ಕುಸಿಯಿತು. ಚೀನಾ ಬಾಲ ಮುದುರಿಕೊಂಡು ಅಲ್ಲಿಯೆ ಇರುವಂತಾಯಿತು. ಇದೇ ವೇಳೇ ಭಾರತದಲ್ಲಿಯೂ ಸಹ ಸ್ವದೇಶಿ ನಿರ್ಮಿತ ಮೊಬೈಲ್ ಅಪ್ಲಿಕೇಶನ್ ಗಳು ಸಹ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಯೋಜನೆಯಡಿಯಲ್ಲಿ ನಿರ್ಮಾಣವಾಗುವಂತೆ ಆಯಿತು.

ಈದೀಗ ಬಂದಿರುವ ವಿಷಯವೇನೆಂದರೇ, ಸದ್ಯ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಿ ನಿರ್ಮಿತ ಮೊಬೈಲ್ ಗಳನ್ನೇ ಜನರು ಹೆಚ್ಚು ಬಳಸುತ್ತಿದ್ದಾರೆ. ಉದಾಹರಣೆ ವಿವೋ, ಒಪ್ಪೋ, ಒನ್ ಪ್ಲಸ್, ಕ್ಸಿಯೋಮಿ ಮೊಬೈಲ್ ಗಳು ಭಾರತೀಯ ಮಾರುಕಟ್ಟೆಯ ಅರ್ಧದಷ್ಟನ್ನು ಆವರಿಸಿಕೊಂಡಿವೆ. ಈ ಎಲ್ಲಾ ಮೊಬೈಲ್ ಕಂಪನಿಗಳು ಚೀನಾ ಮೂಲದವು.

ಈಗ ಭಾರತ ಸರ್ಕಾರ ಈ ಚೀನಾದ ಮೊಬೈಲ್ ಕಂಪನಿಗಳಿಗೆ, ಈ ಮೊಬೈಲ್ ತಯಾರಿಸಲು ಬಳಸುವ ಬಿಡಿ ಭಾಗಗಳ ವಿವರಗಳನ್ನು ಶೀಘ್ರದಲ್ಲಿ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ. ಚೀನಾ ಕಂಪನಿಗಳಿಂದ ಮಾರಾಟವಾಗುವ ಈ ಮೊಬೈಲ್ ಗಳು ಭಾರತೀಯ ಮೊಬೈಲ್ ಬಳಕೆದಾರರಿಗೆ ಎಷ್ಟು ಸುರಕ್ಷಿತ ಎಂಬ ವಿವರವನ್ನು ತಿಳಿಯಲು ಈ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಲಾಗಿದೆ. ಅದಲ್ಲದೇ ಇದು ಭಾರತೀಯ ಗ್ರಾಹಕರ ದತ್ತಾಂಶಗಳ ಸುರಕ್ಷತೆಗೆ ಎಷ್ಟರ ಮಟ್ಟಿಗೆ ಮಾಡಲಿದೆ ಎಂಬುದರ ವಿವರವನ್ನು ನೀಡುವಂತೆ ಕೋರಿದೆ.

ಒಟ್ಟಿನಲ್ಲಿ ಕಳೆದ ವರ್ಷ ಚೀನಿ ನಿರ್ಮಿತ ಮೊಬೈಲ್ ಅಪ್ಲಿಕೇಶನ್ ಗಳನ್ನ ಭಾರತದಲ್ಲಿ ನಿಷೇಧಿಸುವ ಮೂಲಕ ಚೀನಾ ಆನಲೈನ್ ಮಾರುಕಟ್ಟೆಗೆ ಹೊಡೆತ ನೀಡಿದ್ದ ಭಾರತ, ಮುಂದಿನ ದಿನಗಳಲ್ಲಿ ಚೀನಿ ನಿರ್ಮಿತ ಮೊಬೈಲ್ ಗಳನ್ನ ಭಾರತದಲ್ಲಿ ನಿಷೇಧಿಸುವ ಮೂಲಕ ಭಾರತೀಯ ಮೊಬೈಲ್ ಮಾರುಕಟ್ಟೆಯನ್ನ, ಚೀನಾದಿಂದ ಮುಕ್ತಗೊಳಿಸುವ ಬಗ್ಗೆ ಚಿಂತಿಸುತ್ತಿದ್ದೆ. ಆಗ ದೇಶಿಯ ಮೊಬೈಲ್ ಕಂಪನಿಗಳಿಗೆ ಶುಕ್ರದೆಸೆ ಬರಲಿದ್ದು, ಭಾರತದಲ್ಲಿ ಮೊಬೈಲ್ ಹಾಗೂ ಅದರ ಬಿಡಿಭಾಗಗಳ ಕ್ಷೇತ್ರದಲ್ಲಿ ಆಮದಿನ ಪ್ರಮಾಣ ಕಡಿಮೆಯಾಗಿ ರಫ್ತಿನ ಪ್ರಮಾಣ ಜಾಸ್ತಿಯಾಗಬಹುದು. ಇದು ಭಾರತದ ಜಿಡಿಪಿಯ ಬೆಳವಣಿಗೆಗೂ ಸಹ ಕಾರಣವಾಗಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.