ಶೃಂಗೇರಿಯ ಶಾರದಾ ಪೀಠದಲ್ಲಿ ನಡೆಯುವ ಅನ್ನಪ್ರಸಾದದ ವೈಶಿಷ್ಟತೆ ಏನು ಗೊತ್ತಾ?? ನಿಮಗೆ ತಿಳಿಯದ ಆಸಕ್ತಿಕರ ಮಾಹಿತಿ

ಶೃಂಗೇರಿಯ ಶಾರದಾ ಪೀಠದಲ್ಲಿ ನಡೆಯುವ ಅನ್ನಪ್ರಸಾದದ ವೈಶಿಷ್ಟತೆ ಏನು ಗೊತ್ತಾ?? ನಿಮಗೆ ತಿಳಿಯದ ಆಸಕ್ತಿಕರ ಮಾಹಿತಿ

ನಮಸ್ಕಾರ ಸ್ನೇಹಿತರೇ ಭಾರತದ ಹಲವಾರು ಪುಣ್ಯಕ್ಷೇತ್ರಗಳಲ್ಲಿ ಕರ್ನಾಟಕದ ಶೃಂಗೇರಿ ಕೂಡ ಒಂದು. ಹೌದು ಶೃಂಗೇರಿಯ ಶಾರದಾ ಪೀಠ ಶಂಕರಾಚಾರ್ಯರ 4 ಪೀಠಗಳಲ್ಲಿ ಒಂದಾಗಿದೆ. ಹೌದು ಶಂಕರಾಚಾರ್ಯರು ಭಾರತದಾದ್ಯಂತ 4 ದಿಕ್ಕಿನಲ್ಲಿ 4 ಪೀಠಗಳನ್ನು ಸ್ಥಾಪಿಸಿದರು. ಅದರಲ್ಲಿ ಶೃಂಗೇರಿಯ ಶಾರದಾ ಪೀಠ ಕೂಡ ಒಂದು. ಶಾರದಾಂಬೆಯ ಸನ್ನಿಧಿಯಲ್ಲಿ ಇದೀಗ ಶೃಂಗೇರಿ ಪುಣ್ಯಕ್ಷೇತ್ರವಾಗಿ ಗುರುತಿಸಿಕೊಂಡಿದೆ.

ಇನ್ನು ಅಲ್ಲಿ ಬರುವ ಲಕ್ಷಾಂತರ ಭಕ್ತರು ಶಾರದಾಂಬೆಯ ಚರಣಕ್ಕೆ ನಮಸ್ಕರಿಸಿ ವಿವಿಧ ಹರಕೆಗಳನ್ನು ಕೂಡ ಕಟ್ಟಿಕೊಳ್ಳುತ್ತಾರೆ. ಹೌದು ತುಂಗಾ ನದಿಯ ತಟದಲ್ಲಿರುವ ಈ ದೇವಸ್ಥಾನ ಚಿಕ್ಕಮಗಳೂರಿನಿಂದ ಸುಮಾರು 85 ಕಿಲೋಮೀಟರ್ ದೂರದಲ್ಲಿದೆ. ಇನ್ನು ಈ ದೇವಸ್ಥಾನದಲ್ಲಿ ಕೆತ್ತಲಾಗಿರುವ ಹಲವಾರು ಕಲಾಕೃತಿಗಳು ವಿವಿಧ ರಾಜರ ಆಸ್ಥಾನ ಹಾಗೂ ಸಂಸ್ಕೃತಿಯ ಬಗ್ಗೆ ಪ್ರತಿಬಿಂಬಿಸುತ್ತದೆ. ಇನ್ನು ಇಲ್ಲಿ ನಿರ್ಮಿಸಿರುವ ವಿದ್ಯಾಶಂಕರ ದೇವಾಲಯವು, ಚೋಳ, ದ್ರಾವಿಡ, ನಾಗರಾ ಹಾಗೂ ಚಾಲುಕ್ಯ ಶೈಲಿಗಳ ಸಂಯೋಜನೆ ಜನರನ್ನು ಆಕರ್ಷಿಸುತ್ತಿದೆ.

ಈ ಬೆಟ್ಟಕ್ಕೆ ಶೃಂಗೇರಿ ಎಂಬ ಹೆಸರು ರಿಷಿಯಾರಣ್ಯಂಗಾ-ಗಿರಿ ಎಂಬ ಒಂದು ಬೆಟ್ಟದಿಂದ ಬಂದಿದೆ. ಇನ್ನು ಇಲ್ಲಿ ಇರುವ ಶಾರದಾಂಬೆಯನ್ನು ಶಾರದಾದೇವಿ, ಜ್ಞಾನ ಸ್ವರೂಪಿಣಿ ಹಾಗೂ ವಿದ್ಯಾಧಿದೇವತೆ ಎಂಬೆಲ್ಲ ಹೆಸರುಗಳಿಂದ ಕರೆಯುವುದುಂಟು. ಅಷ್ಟೇ ಅಲ್ಲದೆ ಇಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯುವುದರಿಂದ ಈ ದೇವಿಯನ್ನು ಅನ್ನಪೂರ್ಣ ಎಂದು ಕೂಡ ಕರೆಯುವುದುಂಟು.

ಇನ್ನು ಬಲ್ಲ ಮೂಲಗಳು ತಿಳಿಸುವ ಪ್ರಕಾರ ಈ ದೇವಾಲಯದಲ್ಲಿ ಸುಮಾರು 600 ವರ್ಷಗಳಿಂದ ಅನ್ನಪ್ರಸಾದ ನಡೆಯುತ್ತಾ ಬಂದಿದೆಯಂತೆ. ಇನ್ನು ಶಾರದಾ ಪೀಠದ ಪ್ರಥಮ ಜಗದ್ಗುರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಿಗೆ ಅನ್ನಛತ್ರ ನಡೆಸಲು 64 ವೃತ್ತಿಗಳನ್ನು ವಿಶ್ವನಾಥಪುರದ ಅಗ್ರಹಾರದಲ್ಲಿ ನೀಡಿದ್ದರ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಹೀಗೆ ಅಲ್ಲಿಂದ ಮುಂದುವರೆದ ಈ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಶಾರದಾ ಪೀಠದ ಶ್ರೀ ಭಾರತೀತೀರ್ಥ ಪ್ರಸಾದ ಭೋಜನ ಶಾಲೆಯನ್ನು ಸುಮಾರು 1999 ರಲ್ಲಿ ಪ್ರಾರಂಭಿಸಲಾಯಿತು ಎಂದು ಹೇಳಲಾಗಿದೆ.

ಇನ್ನು ಇಲ್ಲಿ ಆಧಾರಸ್ಥಂಭವಿಲ್ಲದೆ ಭೋಜನಾಲಯವನ್ನು ನಿರ್ಮಿಸಲಾಗಿದೆ. ಇನ್ನು ಅನ್ನ ಪ್ರಸಾದದಲ್ಲಿ ವಿಶಿಷ್ಟ ಪಾಕಗಳ ಮೂಲಕ ಹಾಗೂ ಶುಚಿತ್ವದಿಂದಲೇ ಸಾಕಷ್ಟು ಭಕ್ತರನ್ನು ಸೆಳೆದಿದೆ. ಶಾರದ ದೇವಿಯ ಸನ್ನಿಧಾನದಲ್ಲಿ ಪ್ರತಿನಿತ್ಯ ಸುಮಾರು ಐದು ಸಾವಿರ ಜನ ಅನ್ನ ಪ್ರಸಾದವನ್ನು ಸೇವಿಸಿ ಸಂತೃಪ್ತಗೊಳ್ಳುತ್ತಾರೆ. ಇನ್ನು ಈ ಸಂಖ್ಯೆ ನವರಾತ್ರಿಯ ದಿನಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ದಾಟುತ್ತದೆ.

ದಿನನಿತ್ಯ ಶಾರದಾದೇವಿಯ ಶಾಲಾ-ಕಾಲೇಜುಗಳ 10 ಸಾವಿರ ವಿದ್ಯಾರ್ಥಿಗಳು ಅನ್ನಪ್ರಸಾದವನ್ನು ಸವಿಯುತ್ತಾರೆ. ಶಾರದಾದೇವಿಯ ಸನ್ನಿಧಾನದಲ್ಲಿ ಪ್ರತಿನಿತ್ಯ ಸುಮಾರು 10 ರಿಂದ 12 ಕ್ವಿಂಟಲ್ ಅಕ್ಕಿ, ಇನ್ನು ವಿಶೇಷ ಸಂದರ್ಭಗಳಲ್ಲಿ ಇದು ಸುಮಾರು 30ರಿಂದ 35 ಕ್ವಿಂಟಲ್ ಹೋಗಿರುತ್ತದೆ. ಅಷ್ಟೇ ಅಲ್ಲದೆ 4 ರಿಂದ 5 ಕ್ವಿಂಟಲ್ ತರಕಾರಿ, 400 ರಿಂದ 500 ತೆಂಗಿನಕಾಯಿ, ಎರಡರಿಂದ ಐದು ಕ್ವಿಂಟಲ್ ಬೇಳೆ, ಸಾಂಬಾರು ಪದಾರ್ಥಗಳು ಸುಮಾರು ಇಪ್ಪತ್ತೈದು ಕೆಜಿ ಬೇಕೇಬೇಕು ಎಂದು ಹೇಳುತ್ತಾರೆ.

ಇನ್ನು ಪಾಕಶಾಲೆಯಲ್ಲಿ ಸುಮಾರು 17 ಬಾಯ್ಲರ್ ಗಳಿದ್ದು, 1 ಬೌಲರ್ ನಲ್ಲಿ ಸುಮಾರು 50 ಕೆಜಿ ಅನ್ನ ರೆಡಿಯಾಗುತ್ತದೆ. ಹೀಗೆ ಪ್ರತಿನಿತ್ಯ 7 ಬಾಯ್ಲರ್ ಗಳಲ್ಲಿ ಒಟ್ಟು 3.5 ಕ್ವಿಂಟಲ್ ಅನ್ನ ತಯಾರಾಗುತ್ತದೆ. ಉಳಿದ ಹತ್ತು ಬಾಯ್ಲರ್ ಗಳಲ್ಲಿ ಸಾರು, ಸಾಂಬಾರು ಹಾಗೂ ಪಾಯಸ ಮತ್ತು ಮಜ್ಜಿಗೆ ತಯಾರಾಗುತ್ತದೆ. ಇನ್ನು ಜಾತ್ರೆ ಹಾಗೂ ಹಬ್ಬದ ಸಂದರ್ಭಗಳಲ್ಲಿ ‌ ಸಿಹಿತಿಂಡಿ, ಪಲ್ಯ, ಪುಳಿಯೋಗರೆ ಹೀಗೆ ವಿವಿಧ ಪಾಕಗಳನ್ನು ತಯಾರಿಸಲಾಗುತ್ತದೆ. ಪ್ರತಿದಿನ ಮುಂಜಾನೆ ಹಾಗೂ ರಾತ್ರಿ ವೇಳೆ ಎರಡು ಸಮಯ ಭೋಜನವನ್ನು ನೀಡಲಾಗುತ್ತದೆ. ಇನ್ನು ಇಲ್ಲಿ ನೂರು ಜನ ಅಡುಗೆ ಮಾಡುವವರಿದ್ದಾರೆ. ಏಕಕಾಲದಲ್ಲಿ 3500 ಜನ ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಕೂಡ ಇಲ್ಲಿದೆ. ನೋಡಿದ್ರಲ್ಲ ಸ್ನೇಹಿತರೇ ಇಂತಹ ಪುಣ್ಯಕ್ಷೇತ್ರದಲ್ಲಿ ಭಕ್ತರಿಗಾಗಿ ಎಷ್ಟೊಂದು ಸುವ್ಯವಸ್ಥಿತ ಅನ್ನಪ್ರಸಾದ ನೀಡಲಾಗುತ್ತದೆ ಎಂದು. ಇನ್ನು ಈ ಸುದ್ದಿ ನೀವು ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.