ಮ್ಯಾಥ್ಯೂ ಹೇಡನ್ ಪ್ರಕಾರ, ಭಾರತದ ಈ ಇಬ್ಬರೂ ಬ್ಯಾಟ್ಸಮನ್ ಗಳು ಪಾಕಿಸ್ತಾನದ ಪಾಲಿಗೆ ಡೇಂಜರ್ ಅಂತೇ – ಆ ಇಬ್ಬರೂ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮ್ಯಾಥ್ಯೂ ಹೇಡನ್ ವಿಶ್ವ ಕ್ರಿಕೇಟ್ ಜಗತ್ತಿನ ದೈತ್ಯ ಬ್ಯಾಟ್ಸಮನ್. ಆಸ್ಟ್ರೇಲಿಯಾ ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವಲ್ಲಿ ಹೇಡನ್ ಪಾತ್ರ ಅತಿ ದೊಡ್ಡದು. ಕ್ರಿಕೇಟ್ ಜೀವನದ ನಿವೃತ್ತಿ ನಂತರ ವೀಕ್ಷಕ ವಿವರಣೆಗಾರರಾಗಿ ಐಪಿಎಲ್ ನಲ್ಲಿ ಮಿಂಚುತ್ತಿದ್ದ ಹೇಡನ್, ಸದ್ಯ ಟಿ 20 ವಿಶ್ವಕಪ್ ಟೂರ್ನಮೆಂಟ್ ಅಂಗವಾಗಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತಿಚೆಗಷ್ಟೇ ಮುಗಿದ ಐಪಿಎಲ್ ನಲ್ಲಿ ವೀಕ್ಷಕ ವಿವರಣೆ ಜೊತೆ ಪಿಚ್ ರಿಪೋರ್ಟ್ ನ್ನು ಸಹ ಮ್ಯಾಥ್ಯೂ ಹೇಡನ್ ಮಾಡುತ್ತಿದ್ದರು.

ಇನ್ನು ಭಾನುವಾರ ನಡೆಯಲಿರುವ ಪಾಕಿಸ್ತಾನ ಹಾಗೂ ಭಾರತದ ಪಂದ್ಯದ ಬಗ್ಗೆ ಮಾತನಾಡಿರುವ ಹೇಡನ್, ಪಾಕಿಸ್ತಾನದ ಪಾಲಿಗೆ ಭಾರತದ ಈ ಇಬ್ಬರು ಬ್ಯಾಟ್ಸಮನ್ ಗಳು ಕಂಟಕಪ್ರಾಯವಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಭರವಸೆಯ ಬ್ಯಾಟ್ಸಮನ್ ಗಳಾಗಿರುವ ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ ಈ ಇಬ್ಬರೂ ಬ್ಯಾಟ್ಸಮನ್ ಗಳನ್ನ ಎದುರಿಸಲು ಪಾಕ್ ಬೌಲರ್ ಗಳು ಪರದಾಡಬಹುದು. ನಾನು ಕೆ.ಎಲ್.ರಾಹುಲ್ ಬಾಲಕನಾಗಿದ್ದ ಸಮಯದಿಂದಲೂ ಅವರ ಆಟ ನೋಡುತ್ತಾ ಬಂದಿದ್ದೇನೆ. ಅವರ ಸಂಕಷ್ಟಗಳನ್ನು ಬಲ್ಲೆ. ಆದರೇ ಅವೆಲ್ಲವನ್ನು ದಾಟಿ ಅವರಿಗ ಪರಿಪಕ್ವ ಬ್ಯಾಟ್ಸಮನ್ ಆಗಿ ಬದಲಾಗಿದ್ದಾರೆ. ಐಪಿಎಲ್ ನಲ್ಲಿ ಸಹ ಉತ್ತಮ ಫಾರ್ಮ್ ನಲ್ಲಿ ಇದ್ದರು. ಪಾಕ್ ವಿರುದ್ದವೂ ಅವರ ಉತ್ತಮ ಫಾರ್ಮ್ ಮುಂದುವರಿಯಬಹುದು ಎಂದು ಹೇಳಿದ್ದಾರೆ.

ಇನ್ನು ರಿಷಭ್ ಪಂತ್ ರವರ ಆಟವನ್ನು ಸಹ ನಾನು ಹತ್ತಿರದಿಂದ ಗಮನಿಸಿದ್ದೇನೆ. ಅವರ ಧೈರ್ಯ, ಮುನ್ನುಗ್ಗುವ ಛಾತಿ, ಎಲ್ಲವೂ ಟಿ 20 ಕ್ರಿಕೇಟ್ ಗೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ಅವರು ಸಹ ಪಾಕ್ ತಂಡಕ್ಕೆ ಕಂಟಕಪ್ರಾಯರಾಗಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಬಗ್ಗೆಯೂ ಉತ್ತಮ ಮಾತನಾಡಿರುವ ಹೇಡನ್, ಈತ ಭಾರತದ ಬೌಲರ್ ಗಳಿಗೆ ಕಂಟಕಪ್ರಾಯನಾಗುತ್ತಾನೆ. ನಾಯಕತ್ವದ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುತ್ತಾ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾನೆ ಎಂದು ಹೇಳಿದರು. ಯು.ಎ‌.ಇ ಪಿಚ್ ಗಳು ಸ್ಪರ್ಧಾತ್ಮಕ ಕ್ರಿಕೇಟ್ ಗೆ ಹೆಸರುವಾಸಿಯಾಗಿದ್ದು, ಫಲಿತಾಂಶ ಕೊನೆಯ ಓವರ್ ನಲ್ಲಿ ನಿರ್ಧಾರವಾಗುವುದೇ ಹೆಚ್ಚು ಎಂದು ಸಹ ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav