ಭಾರತದ ಮುಂದೆ ಮತ್ತೊಮ್ಮೆ ಮಂಡಿಯೂರಿದ ಬಿಟನ್, ನವ ಭಾರತದ ದಿಟ್ಟ ನಿರ್ಧಾರಗಳಿಗೆ ಹಿಂದೆ ಹೆಜ್ಜೆ ಇಟ್ಟಿದ್ದು ಹೇಗೆ ಗೊತ್ತೇ??

ಭಾರತದ ಮುಂದೆ ಮತ್ತೊಮ್ಮೆ ಮಂಡಿಯೂರಿದ ಬಿಟನ್, ನವ ಭಾರತದ ದಿಟ್ಟ ನಿರ್ಧಾರಗಳಿಗೆ ಹಿಂದೆ ಹೆಜ್ಜೆ ಇಟ್ಟಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೂರ್ಯ ಮುಳುಗದ ನಾಡನ್ನ ಸ್ಥಾಪಿಸಬೇಕೆಂದು ಮಹಾತ್ವಾಕಾಂಕ್ಷೆ ಹೊಂದಿದ್ದ ಆಂಗ್ಲರಿಗೆ ಮೊದಲು ಪಾಠ ಕಲಿಸಿದ್ದು ಭಾರತ. ಮಹಾತ್ಮಾ ಗಾಂಧೀಜಿ ತಮ್ಮ ಅಹಿಂಸಾ ಮಾರ್ಗದಿಂದ ಬ್ರಿಟೀಷರನ್ನ ಭಾರತ ಬಿಟ್ಟು ತೊಲಗುವಂತೆ ಮಾಡಿದರು. ಅಂದಿನಿಂದ ಇಂದಿನವರೆಗೂ ಸಾಕಷ್ಟು ನೀರು ಹರಿದಿದೆ. ಭಾರತ ಮತ್ತು ಬ್ರಿಟನ್ ಸರ್ಕಾರದ ನಡುವೆ ಹಲವಾರು ವ್ಯಾಪಾರ ವಹಿವಾಟಿನ ಸಂಭಂದಗಳು ವೃದ್ಧಿಯಾಗಿವೆ. ವಿದೇಶಿ ವಿನಿಮಯಗಳು ಸಹ ನಡೆದಿವೆ. ಪ್ರಪಂಚದಲ್ಲಿ ಭಾರತವೂ ಸಹ ಬ್ರಿಟನ್ ಸರ್ಕಾರಕ್ಕೆನೂ ಕಡಿಮೆಯಿಲ್ಲ ಎಂಬಂತೆ ಮುಂದುವರೆಯುತ್ತಾ ಸಾಗುತ್ತಿದೆ. ಈ ಮಧ್ಯೆ ಕೋವಿಡ್ ಬಂದ ನಂತರವಂತೂ ಪ್ರಪಂಚ ಸಂಪೂರ್ಣ ಬದಲಾಗಿದೆ. ವಿದೇಶಗಳಿಂದ ಆಗಮಿಸುವವರ ಹಾಗೂ ವಿದೇಶಕ್ಕೆ ಹೋಗುವವರ ಮೇಲೋಂದು ಕಣ್ಣನ್ನ ಸದಾ ಇಟ್ಟಿರುತ್ತದೆ.

ಕೆಲವು ದಿನಗಳ ಹಿಂದೆ ಭಾರತ ಸರ್ಕಾರ ವಿದೇಶ ಪ್ರಯಾಣದ ಮಾರ್ಗಸೂಚಿಯನ್ನು ಪ್ರಕಟಿಸಿ, ಸಂಪೂರ್ಣ ಲಸಿಕೆ , ಎರಡು ಡೋಸ್ ಪಡೆದವರಿಗೆ ಕ್ವಾರಂಟೈನ್ ನಿಯಮಗಳನ್ನು ಕೊಂಚ ಸಡಿಲಿಸಿತ್ತು. ಆದರೇ ದುರಂಹಕಾರದ ಪರಮಾವಧಿ ಎಂದು ಕರೆಸಿಕೊಳ್ಳುವ ಬ್ರಿಟನ್ ಸರ್ಕಾರ ಭಾರತದಿಂದ ಬಂದ ಪ್ರಜೆಗಳು ಕಡ್ಡಾಯವಾಗಿ ಎರಡು ಲಸಿಕೆ ಹಾಕಿಸಿಕೊಂಡರೂ, ಅವರು ಬ್ರಿಟನ್ ಗೆ ಬಂದರೇ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಬೇಕು ಎಂಬ ನಿಯಮ ರೂಪಿಸಿತು. ಇದು ಪರೋಕ್ಷವಾಗಿ ಭಾರತದಲ್ಲಿ ನೀಡಲಾಗುತ್ತಿರುವ ಲಸಿಕೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದವು ಎಂಬ ಸಂದೇಶ ನೀಡುತ್ತಿತ್ತು. ಇದು ಸಹಜವಾಗಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅವಮಾನವಾಗುವಂತಹ ನಿರ್ಧಾರವಾಗಿತ್ತು. ಭಾರತ ಸರ್ಕಾರ ಈ ಬಗ್ಗೆ ಮನವಿ ಮಾಡಿದರೂ , ಬ್ರಿಟನ್ ಸರ್ಕಾರ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟನ್ ಸರ್ಕಾರಕ್ಕೆ ಭಾರತ ಸರ್ಕಾರ ಪಾಠ ಕಲಿಸಲು ತಯಾರಾಯಿತು.

ವಿದೇಶದಿಂದ ಬಂದವರ ಮಾರ್ಗಸೂಚಿಯನ್ನ ಕೊಂಚ ಬದಲಿಸಿದ ಭಾರತ ಸರ್ಕಾರ, ಬ್ರಿಟನ್ ದೇಶದಿಂದ ಬಂದ ಪ್ರಜೆಗಳು ಎರಡು ಲಸಿಕೆ ಹಾಕಿಸಿಕೊಂಡರು, ಕಡ್ಡಾಯವಾಗಿ ಹದಿನಾಲ್ಕು ದಿನಗಳು ಕ್ವಾರಂಟೈನ್ ಆಗಿರಬೇಕು ಎಂದು ಆಜ್ಞೆ ಹೊರಡಿಸಿತು. ಇದು ಬ್ರಿಟನ್ ಸರ್ಕಾರಕ್ಕೆ ಮುಟ್ಟಿ ನೋಡಿಕೊಳ್ಳುವ ಹಾಗಾಯಿತು. ಭಾರತ ಸರ್ಕಾರ ಕಠಿಣ ಕ್ರಮವನ್ನ ಕನಸಿನಲ್ಲಿಯೂ ಊಹಿಸದ ಬ್ರಿಟನ್ ಸರ್ಕಾರ,.ಕೂಡಲೇ ತನ್ನ ಮಾರ್ಗಸೂಚಿಯನ್ನ ಬದಲಾಯಿಸಿರುವ ಬ್ರಿಟನ್ ಸರ್ಕಾರ, ಅಕ್ಟೋಬರ್ 11 ರ ನಂತರ ಬ್ರಿಟನ್ ಗೆ ಬರುವ ಭಾರತೀಯ ಪ್ರಯಾಣಿಕರು, ಎರಡು ಡೋಸ್ ಲಸಿಕೆ ಹಾಕಿಸಿಕೊಂಡರೇ, ಕ್ವಾರಂಟೈನ್ ನಲ್ಲಿ ಇರುವ ಅಗತ್ಯವಿಲ್ಲ ಎಂದು ರಾಯಭಾರ ಕಛೇರಿ ತಿಳಿಸಿದೆ. ತಾನೇ ಶ್ರೇಷ್ಠ ಎಂಬ ಅಹಂನಿಂದ ಮೆರೆಯುತ್ತಿದ್ದ ಬ್ರಿಟನ್ ಸರ್ಕಾರಕ್ಕೆ ಭಾರತ ಸರಿಯಾದ ಪಾಠ ಕಲಿಸಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.