ಮಹಾಮಾರಿ ಕೋವಿಡ್ ಅನ್ನು ಜಗತ್ತಿಗೆ ನೀಡಿದ ಚೀನಾ ಇಂದು ಯಾವ ಪರಿಸ್ಥಿತಿ ತಲುಪಿದೆ ಗೊತ್ತೇ??ಅಸಲಿ ಆಟ ಈಗ ಶುರು.
ಮಹಾಮಾರಿ ಕೋವಿಡ್ ಅನ್ನು ಜಗತ್ತಿಗೆ ನೀಡಿದ ಚೀನಾ ಇಂದು ಯಾವ ಪರಿಸ್ಥಿತಿ ತಲುಪಿದೆ ಗೊತ್ತೇ??ಅಸಲಿ ಆಟ ಈಗ ಶುರು.
ನಮಸ್ಕಾರ ಸ್ನೇಹಿತರೇ ಪ್ರಪಂಚಕ್ಕೆ ಕೋವಿಡ್ ಎಂಬ ಮಾರಿಯನ್ನ ಪರಿಚಿಯಿಸಿದ್ದ ಚೀನಾ ಈಗ ಹಿಂದೆಂದಿಗಿಂತಲೂ ಕಂಡು ಕೇಳರಿಯದ ಕಷ್ಟ ಅನುಭವಿಸುತ್ತದೆ. ಜಗತ್ತಿನ ಎಲ್ಲಾ ದೇಶಗಳು ಈಗಷ್ಟೇ ತಮ್ಮ ಸಂಕಷ್ಟಗಳಿಂದ ಹೊರಬರುತ್ತಿವೆ. ಆದರೇ ಚೀನಿಯರು ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ಅರ್ಧ ಚೀನಾ ದೇಶ ಈಗ ಕತ್ತಲಲ್ಲಿ ಮುಳುಗಿದೆಯಂತೆ. ಅದರಲ್ಲೂ ವಿಶೇಷವಾಗಿ ಮಧ್ಯ ಚೀನಾ ಮತ್ತು ಉತ್ತರ ಚೀನಾದ ಭಾಗಗಳಲ್ಲಿ ಅಲ್ಲಿನ ಜನ ಕರೆಂಟ್ ಇಲ್ಲದೇ ಇನ್ನಿಲ್ಲದ ಸಂಕಷ್ಟಗಳನ್ನ ಪಡುತ್ತಿದ್ದಾರಂತೆ. ದಿನದ ಬಹುಪಾಲು ಕರೆಂಟ್ ಇಲ್ಲದೇ ಕಾಲ ಕಳೆಯುತ್ತಿದ್ದಾರಂತೆ.
ಹೀಗಾಗಿ ಚೀನಾದಲ್ಲಿ ಈಗ ಎಲ್ಲಾ ಉದ್ಯಮಗಳು, ಐಟಿ ಇಂಡಸ್ಟ್ರಿ, ಕಾರ್ಖಾನೆಗಳು ಎಲ್ಲವೂ ಸಹ ಬಹುಪಾಲು ಸ್ಥಗಿತಗೊಂಡಿವೆ. ಇದು ಚೀನಾ ದೇಶದ ಆರ್ಥಿಕತೆ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚೀನಾ ಕೇವಲ ವಿದ್ಯುತ್ ಸಮಸ್ಯೆ ಮಾತ್ರವಲ್ಲದೇ ಪೆಟ್ರೋಲ್,ಡಿಸೇಲ್ ಮತ್ತು ಅಡುಗೆ ಅನಿಲದ ವಿಪರೀತ ಕೊರತೆಯನ್ನು ಅನುಭವಿಸುತ್ತಿದೆ ಎಂದು ವರದಿಯಾಗಿದೆ. ಚೀನಾದ ಬಹುತೇಖ ಪೆಟ್ರೋಲ್ ಬಂಕ್ ಗಳಲ್ಲಿ, ಇಂಧನ ಖಾಲಿಯಾಗಿದೆ, ದಯವಿಟ್ಟು ಸಹಕರಿಸಿ ಎಂಬ ಬೋರ್ಡುಗಳನ್ನ ನೇತು ಹಾಕಲಾಗಿದೆಯಂತೆ. ಇದರ ಜೊತೆ ದಿನನಿತ್ಯ ಬಳಸುವ ಅಡುಗೆ ಅನಿಲದ ಕೊರತೆ ಸಹ ಜಾಸ್ತಿಯಾಗಿದೆ. ಇದು ಚೀನಾದಲ್ಲಿ ಸರಕು ಸಾಗಾಟಿನ ಮೇಲೆ ಪರಿಣಾಮ ಬೀರಿದ್ದು, ಕೆಲವೇ ದಿನಗಳಲ್ಲಿ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದರ ಜೊತೆಗೆ ಹಣದುಬ್ಬರ ಸಹ ವೀಪರೀತ ಏರಲಿದ್ದು, ಚೀನಾದ ಆರ್ಥಿಕತೆ ಹಳ್ಳಹಿಡಿಯುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಅಷ್ಟಕ್ಕೂ ಧೀಢೀರ್ ಚೀನಾ ಈ ರೀತಿಯ ಸಮಸ್ಯೆಗಳನ್ನು ಎದುರಿಸಲು ಪ್ರಮುಖ ಕಾರಣವೆಂದರೇ, ಅದು ಸಾಂಪ್ರದಾಯಕ ಇಂಧನದ ಮೇಲೆ ಹೆಚ್ಚು ಅವಲಂಬಿತವಾಯಿತೇ ಹೊರತು ನವೀಕರಿಸಬಹುದಾದ ಇಂಧನಗಳ ಮೇಲೆ ಹೆಚ್ಚಿನ ಒಲವನ್ನ ತೋರಿಸದೇ ಇರುವುದು. ಇದರ ಜೊತೆ ಚೀನಾದಲ್ಲಿ ಸರ್ಕಾರವೇ ವಿದ್ಯುತ್ ಬೆಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದು ಜೊತೆಗೆ ಕಲ್ಲಿದ್ದಲು ಮೂಲಕ ತಯಾರಿಸುವ ವಿದ್ಯುತ್ ಪೂರೈಕೆಯಲ್ಲಿ ಎಡವಿರುವುದು ಸಹ ಮುಖ್ಯ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.