ವಿಶ್ವದ ಟಾಪ್ ಐದು ಟಿ 20 ಆಟಗಾರರ ಪಟ್ಟಿ ತಯಾರಿಸಿದ ಕೀರನ್ ಪೋಲಾರ್ಡ್, ರೋಹಿತ್ ಗೆ ಇಲ್ಲ ಸ್ಥಾನ, ಯಾರ್ಯಾರಿದ್ದಾರೆ ಗೊತ್ತೇ??

ವಿಶ್ವದ ಟಾಪ್ ಐದು ಟಿ 20 ಆಟಗಾರರ ಪಟ್ಟಿ ತಯಾರಿಸಿದ ಕೀರನ್ ಪೋಲಾರ್ಡ್, ರೋಹಿತ್ ಗೆ ಇಲ್ಲ ಸ್ಥಾನ, ಯಾರ್ಯಾರಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೀರನ್ ಪೋಲಾರ್ಡ್ ಅಲಿಯಾಸ್ ಕೆಪಿ ವಿಶ್ವದ ದೈತ್ಯ ಆಟಗಾರ. ಸದ್ಯ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿರುವ ಕೆಪಿ ವಿಶ್ವದ ಅತ್ಯಂತ ಟಾಪ್ 5 ಆಟಗಾರರನ್ನ ಹೆಸರಿಸಿದ್ದಾರೆ. ಆದರೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮಾರವರನ್ನೇ ಆ ತಂಡದಿಂದ ಕೈ ಬಿಟ್ಟಿದ್ದಾರೆ. ಬನ್ನಿ ಕೀರನ್ ಪೋಲಾರ್ಡ್ ಹೆಸರಿಸಿದ ಐವರು ಟಾಪ್ ಟಿ 20 ಆಟಗಾರರನ್ನು ತಿಳಿಯೋಣ ಬನ್ನಿ.

1.ಕ್ರಿಸ್ ಗೇಲ್ – ಯೂನಿವರ್ಸಲ್ ಬಾಸ್ ಎಂದು ಕರೆಯಿಸಿಕೊಳ್ಳುವ ಕ್ರಿಸ್ಟೋಫರ್ ಹೆನ್ರಿ ಗೇಲ್ ಟಿ 20 ಇತಿಹಾಸದಲ್ಲಿ ಯಾರು ಮುರಿಯಲಾದ ದಾಖಲೆಗಳನ್ನ ನಿರ್ಮಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೇಟ್ ನಲ್ಲಿ 1854 ರನ್ ಗಳಿಸಿದ್ದರೇ, ಫ್ರಾಂಚೈಸಿ ಕ್ರಿಕೇಟ್ ಲೀಗ್ ನಲ್ಲಿ 14 ಸಾವಿರ ರನ್ ಗಳಿಸಿದ್ದಾರೆ.

2.ಲಸಿತ್ ಮಾಲಿಂಗ – ಯಾರ್ಕರ್ ಕಿಂಗ್ ಎಂದೇ ಕರೆಸಿಕೊಂಡಿದ್ದ ಶ್ರೀಲಂಕಾದ ಮಾಲಿಂಗರಿಗೆ ಎರಡನೇ ಸ್ಥಾನ ನೀಡಿದ್ದಾರೆ. ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೇಟ್ ಕಿತ್ತಿರುವ ಮಾಲಿಂಗ ಹಲವಾರು ಭಾರಿ ಹ್ಯಾಟ್ರಿಕ್ ವಿಕೇಟ್ ಪಡೆದಿದ್ದಾರೆ.

3.ಸುನೀಲ್ ನರೈನ್ – ವೆಸ್ಟ್ ಇಂಡೀಸ್ ತಂಡದ ಮಿಸ್ಟರಿ ಸ್ಪಿನ್ನರ್ ಆಗಿರುವ ಸುನೀಲ್ ನರೈನ್ ರವರಿಗೆ ಮೂರನೇ ಸ್ಥಾನ ನೀಡಿದ್ದಾರೆ. ಸ್ಪಿನ್ ಬೌಲಿಂಗ್ ಅಲ್ಲದೇ, ಬ್ಯಾಟಿಂಗ್ ನಲ್ಲಿಯೂ ಸಹ ಪಿಂಚ್ ಹಿಟ್ಟರ್ ಆಗಿರುವ ನರೈನ್, 379 ವಿಕೇಟ್ ಪಡೆದು ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.

4.ಮಹೇಂದ್ರ ಸಿಂಗ್ ಧೋನಿ – ವಿಶ್ವದ ಅತ್ಯುತ್ತಮ ಫೀನಿಶರ್ ಗಳಲ್ಲಿ ಒಬ್ಬರಾಗಿರುವ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. 20 ನೇ ಓವರ್ ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರನಿಗೆ ನಾಲ್ಕನೇ ಸ್ಥಾನ ನೀಡಿದ್ದಾರೆ.

5.ಕೀರನ್ ಪೋಲಾರ್ಡ್ – ಐದನೇ ಸ್ಥಾನವನ್ನ ತಾವೇ ಇಟ್ಟುಕೊಂಡಿರುವ ಕೀರನ್ ಪೋಲಾರ್ಡ್, ತಾವೇ ವಿಶ್ವದ ಐದನೇ ಶ್ರೇಷ್ಠ ಆಟಗಾರ ಎಂದು ಘೋಷಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಹಾಗೂ ನಿಧಾನಗತಿಯ ಬೌಲರ್ ಆಗಿರುವ ಪೋಲಾರ್ಡ್ ವಿಶ್ವ ಟಿ 20 ಕ್ರಿಕೇಟ್ ನಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.