ಮನೆಯಲ್ಲಿ ಪ್ರಮುಖವಾಗಿ ನೀರಿಗೆ ಸಂಬಂಧ ಪಟ್ಟ ಈ ವಸ್ತುಗಳನ್ನು ಅನುಸರಿಸಿ, ನಿಮ್ಮ ಜೀವನವೇ ಬದಲಾಗುವುದು ಖಚಿತ. ಯಾವ್ಯಾವು ಗೊತ್ತೇ??

ಮನೆಯಲ್ಲಿ ಪ್ರಮುಖವಾಗಿ ನೀರಿಗೆ ಸಂಬಂಧ ಪಟ್ಟ ಈ ವಸ್ತುಗಳನ್ನು ಅನುಸರಿಸಿ, ನಿಮ್ಮ ಜೀವನವೇ ಬದಲಾಗುವುದು ಖಚಿತ. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಾವು ನೆಮ್ಮದಿಯ ಜೀವನವನ್ನು ಕಂಡುಕೊಳ್ಳುವುದಕ್ಕೆ ಹೇಗೆ ನಮ್ಮ ಶ್ರಮ, ಕೆಲಸ, ನಡವಳಿಕೆಗಳು ಮುಖ್ಯವೋ ಹಾಗೆಯೇ ವಾಸ್ತು ಕೂಡ ಅಷ್ಟೇ ಮುಖ್ಯ. ವಾಸ್ತುವನ್ನು ಕೆಅಲವರು ನಂಬುವುದಿಲ್ಲ, ಆದರೆ ನಂಬಿದವರ ಜೀವನದಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳಾಗಿದ್ದೂ ಕೂಡ ಸತ್ಯ. ವಾಸ್ತುವಿನಲ್ಲಿ ಸಾಕಷ್ಟು ಪ್ರಕಾರಗಳಿವೆ. ಅವು ನಮ್ಮ ಮನೆಗೆ ಸಂಬಂಧಿಸಿದಂತೆ, ಮನೆಯಲ್ಲಿರುವ ವಸ್ತುಗಳಿಗೆ ಸಂಬಂಧಿಸಿದಂತೆ ಇರುತ್ತದೆ. ಅದರ ಪ್ರಕಾರವಾಗಿ ನಮ್ಮ ನಿತ್ಯದ ಚಟುವಟಿಕೆಗಳೂ ಇದ್ದರೆ ಉತ್ತಮ. ನಾವು ಇಂದು ನೀರಿಗೆ ಸಂಬಂಧಿಸಿದ ವಾಸ್ತುವಿನ ಬಗ್ಗೆ ಹೇಳುತ್ತೇವೆ.

ನಾವು ದಿನವೂ ಬಳಸುವ ನೀರು ನಮ್ಮ ಜೀವ ಉಳಿಸುವ ಜೀವರಕ್ಷಕ. ಈ ನೀರನ್ನು ಸರಿಯಾದ ರೀತಿಯಲ್ಲಿ ವಾಸ್ತು ನಿಯಮಾನುಸಾರ ಬಳಸುತ್ತಾ ಬಂದರೆ ಸಾಕಷ್ಟು ಉತ್ತಮ ಬದಲಾವಣೆಗಳನ್ನು ಕಾಣಬಹುದು. ಹಾಗಾದರೆ ಅಂಥ ಯಾವ ವಿಷಯಗಳನ್ನು ನಾವು ಅನುಸರಿಸಬೇಕು ಬನ್ನಿ ನೋಡೊಣ. ಮೊದಲನೆಯದಾಗಿ ನಾವು ರಾತ್ರಿ ಮಲಗುವ ಮುನ್ನ ತಲೆಯ ಹತ್ತಿರ ಒಂದು ಲೋಟ ನೀರನ್ನು ಇಟ್ಟುಕೊಂಡು ಮಲಗಬೇಕು. ನಂತರ ಮುಂಜಾನೆ ಎದ್ದು ಆ ನೀರನ್ನು ಹೊರಗೆ ಎರಚಬೇಕು. ಹೀಗೆ ಮಾಡುವುದರಿಂದ ಕೆಟ್ಟ ಕನಸುಗಳು, ಕೆಟ್ಟ ಯೋಚನೆಗಳು ದೂರವಾಗುತ್ತೆ ಎನ್ನುವ ನಂಬಿಕೆ ಇದೆ.

ಇನ್ನು ಮುಂದಿನದು ಸ್ನಾನ ಮಾಡುವ ಜಲ. ಸ್ನಾನ ಮಾಡುವಾಗ, ಆ ನೀರಿಗೆ ಗಂಗಾಜಲ, ಉಪ್ಪು, ಅರಿಶಿನ, ಜೇನು ಇಂಥ ಯಾವುದಾದರೂ ವಸ್ತುವನ್ನುಹಾಕಿಕೊಂಡು ಸ್ನಾನ ಮಾಡಿದರೆ ನಮ್ಮಲ್ಲಿರುವ ನಕಾರಾತ್ಮಕ ಆಲೋಚನೆಗಳು, ನಕಾರಾತ್ಮಕ ಭಾವನೆಗಳು ಹೋಗುತ್ತವೆ. ಇನ್ನು ಇತರರು ನಮ್ಮನ್ನು ಗೌರವಿಸುವುದು ಕೂಡ ಹೆಚ್ಚಾಗುತ್ತದೆ. ನಂತರ ಸೂರ್ಯದೇವನಿಗೆ ನೀರನ್ನು ಅರ್ಪಿಸುವುದು. ಕಲಿಯುಗದ ಕಣ್ಣಿಗೆ ಕಾಣುವ ದೇವರೇ ಸೂರ್ಯ. ನೀರಿಗೆ ಹೂವನ್ನು ಹಾಕಿ ಸೂರ್ಯನಿಗೆ ಅರ್ಪಣೆ ಮಾಡಿದರೆ ನಮ್ಮ ಶ್ರೇಯೋಭಿವೃದ್ಧಿಯಾಗುತ್ತದೆ. ದೇವರ ಕೃಪೆ ನಮ್ಮ ಮೇಲಿರುತ್ತದೆ. ಇನ್ನು ಕೊನೆಯದಾಗಿ ಪ್ರಾಣಿ ಪಕ್ಷಿಗಳಿಗೆ ನೀರನ್ನುಣಿಸುವುದು. ಮನೆಯ ಎದುರು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿಟ್ಟು ಅದನ್ನು ಪ್ರಾಣಿ ಪಕ್ಷಿಗಳು ಸೇವಿಸುವಂತಾದರೆ, ಪ್ರಾಣಿ ಪಕ್ಷಿಗಳ ಜೀವದ ಜೊತೆ ನಮ್ಮ ಜೀವನವೂ ಸಂಪನ್ನವಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ನಾವು ಬಳಸುವ ನೀರನ್ನು ಹೀಗೂ ಉಪಯೋಗಿಸಿದಲ್ಲಿ ನಾವು ನೆಮ್ಮದಿಯ ಜೀವನ ಕಾಣಬಹುದು!