ಈ ಬಾರಿಯ ದುಬೈ ಟಿ 20 ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ನೀವು ನೋಡಲಿರುವ ಐದು ವಿಶೇಷತೆಗಳು ಯಾವ್ಯಾವು ಗೊತ್ತೇ??

ಈ ಬಾರಿಯ ದುಬೈ ಟಿ 20 ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ನೀವು ನೋಡಲಿರುವ ಐದು ವಿಶೇಷತೆಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಕ್ಟೋಬರ್ 14 ರಂದು ಐಪಿಎಲ್ ಫೈನಲ್ ನಡೆಯಲಿದೆ. ಇದಾದ ಎಂಟು ದಿನಗಳ ನಂತರ ದುಬೈ,ಅಬುಧಾಬಿ ಮತ್ತು ಶಾರ್ಜಾಗಳಲ್ಲಿ ಮಹತ್ವದ ಐಸಿಸಿ ಟಿ 20 ವಿಶ್ವಕಪ್ ನಡೆಯಲಿದೆ. ಆದರೇ ಕ್ರಿಕೇಟ್ ಪ್ರೇಮಿಗಳು ಎಂದೂ ಕಂಡರಿಯದ ಐದು ವಿಶೇಷತೆಗಳನ್ನು ನೋಡಲಿದ್ದಾರೆ. ಬನ್ನಿ ಆ ವಿಶೇಷತೆಗಳನ್ನ ತಿಳಿಯೋಣ.

1.ವಿರಾಟ್ ಕೊಹ್ಲಿ ಮೊದಲ ಭಾರಿ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ. – ಹೌದು ನಾಯಕ ವಿರಾಟ್ 2014 ರಲ್ಲೇ ಭಾರತ ತಂಡದ ಟೆಸ್ಟ್ ತಂಡದ ನಾಯಕರಾಗಿದ್ದರು. ಆದರೇ ಇದೇ ಮೊದಲ ಭಾರಿಗೆ ಐಸಿಸಿ ನಡೆಸುತ್ತಿರುವ ಟಿ 20 ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಿಂದೆ 2014 ಮತ್ತು 2016 ರಲ್ಲಿ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಧೋನಿ ಮುನ್ನಡೆಸಿದ್ದರು.

2.ಕ್ರಿಕೇಟ್ ಆಡದ ದೇಶ ವಿಶ್ವಕಪ್ ಆತಿಥ್ಯವನ್ನು ವಹಿಸಿರುವುದು – ಐಸಿಸಿ ನಡೆಸುವ ಮಹತ್ವದ ಟೂರ್ನಿಗಳನ್ನ ಇಷ್ಟು ವರ್ಷ ಕ್ರಿಕೇಟ್ ಆಡುವ ದೇಶಗಳು ಆತಿಥ್ಯವನ್ನು ವಹಿಸಿಕೊಳ್ಳುತ್ತಿದ್ದವು. ಈ ವಿಶ್ವಕಪ್ ಸಹ ಭಾರತದಲ್ಲಿ ನಡೆಯಬೇಕಿತ್ತು. ಆದರೇ ಕೋರೋನಾ ಕಾರಣ ಯು.ಎ.ಇ ಗೆ ಶಿಫ್ಟ್ ಆಯಿತು. ಹಾಗಾಗಿ ಯು.ಎ.ಇ ಮತ್ತು ಓಮನ್ ಕ್ರಿಕೇಟ್ ಆಡುವ ತಂಡವಿಲ್ಲದಿದ್ದರೂ ಈ ಭಾರಿ ಪಂದ್ಯ ನಡೆಯುವ ಸ್ಥಳಗಳಾಗಿವೆ.

3.ಪಪುವಾ ನ್ಯೂಗಿನಿಯಾ ಮತ್ತು ನಮೀಬಿಯಾ ಎಂಬ ಎರಡು ಹೊಸ ತಂಡಗಳು – ಐಸಿಸಿ ರ್ಯಾಂಕಿಂಗ್ ನಲ್ಲಿ ಕಡಿಮೆ ಅಂಕ ಹೊಂದಿರುವವರು ಮೊದಲು ಅರ್ಹತಾ ಸುತ್ತು ಆಡಬೇಕಿದೆ. ಹಾಗಾಗಿ ಈ ಅರ್ಹತಾ ಸುತ್ತು ಆಡಲು ಕ್ರಿಕೇಟ್ ಲೋಕದ ಶಿಶುಗಳಾಗಿರುವ ಪಪುವಾ ನ್ಯೂಗಿನಿಯಾ ಮತ್ತು ನಮೀಬಿಯಾ ತಂಡದ ದೇಶಗಳು ಮೊದಲ ಭಾರಿಗೆ ಮಹತ್ವದ ಐಸಿಸಿ ಟೂರ್ನಿಗೆ ಆಯ್ಕೆಯಾಗಿವೆ.

4.ಫೈನಲ್ ಪಂದ್ಯ ಮೊದಲ ಭಾರಿಗೆ ತಟಸ್ಥ ಸ್ಥಳದಲ್ಲಿ ನಡೆಯುತ್ತಿದೆ. – ಫೈನಲ್ ಪಂದ್ಯ ಅತಿ ಹೆಚ್ಚು ಪ್ರೆಕ್ಷಕರನ್ನು ಸೆಳೆಯುವ ಪಂದ್ಯ. ಪ್ರತಿ ಭಾರಿಯೂ ಕ್ರಿಕೇಟ್ ಆಡುವ ದೇಶಗಳಲ್ಲೇ ಫೈನಲ್ ಪಂದ್ಯವನ್ನ ಆಯೋಜಿಸಲಾಗುತ್ತಿತ್ತು. ಆದರೇ ಈ ಭಾರಿ ಫೈನಲ್ ಪಂದ್ಯ ಆಯೋಜಿಸಿರುವ ದುಬೈ ಸ್ಟೇಡಿಯಂ ನಲ್ಲಿ. ಆದರೇ ವಿಪರ್ಯಾಸವೆಂದರೇ ಯು.ಎ.ಇ ತಂಡ ಇನ್ನು ಅಂತರಾಷ್ಟ್ರೀಯ ಕ್ರಿಕೇಟ್ ಆಡುವ ಮಾನ್ಯತೆಯನ್ನು ಹೊಂದಿಲ್ಲ‌.

5.ಮೊದಲ ಭಾರಿಗೆ ಸೂಪರ್ 12 ಆಡಲಿರುವ ತಂಡಗಳು – ಐಸಿಸಿ ಮುಖ್ಯ ಅರ್ಹತಾ ಸುತ್ತಿನಲ್ಲಿ ಅಂದರೇ ಮೊದಲ ಲೀಗ್ ಸುತ್ತು ಮುಗಿದ ನಂತರ 2007 ರಿಂದ ಹತ್ತರ ತನಕ ಸೂಪರ್ 8 ಆಡಿಸಿತ್ತು. ನಂತರ ಆ ಸಂಖ್ಯೆಯನ್ನ ಸೂಪರ್ 10 ಮಾಡಿತ್ತು. ಆದರೇ ಈ ಭಾರಿ ಮುಖ್ಯ ಅರ್ಹತಾ ಸುತ್ತು ಸೂಪರ್ 12 ಆಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.