ನಾಗರಹಾವಿನ ನಂತರ ಪುಟ್ಟಣ್ಣ ಪ್ರಿಯಶಿಷ್ಯ ವಿಷ್ಣುವರ್ಧನ್ ರವರಿಗೆ ಮತ್ತೊಂದು ಸಿನಿಮಾ ಮಾಡಲಿಲ್ಲ. ಯಾಕೆ ಗೊತ್ತಾ??

ನಾಗರಹಾವಿನ ನಂತರ ಪುಟ್ಟಣ್ಣ ಪ್ರಿಯಶಿಷ್ಯ ವಿಷ್ಣುವರ್ಧನ್ ರವರಿಗೆ ಮತ್ತೊಂದು ಸಿನಿಮಾ ಮಾಡಲಿಲ್ಲ. ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಾಗರಹಾವು ಚಿತ್ರ ವಿಷ್ಣುವರ್ಧನ್ ಅವರಿಗೆ ಪೇಟೆಂಟ್ ಹೊಂದಿದ ಚಿತ್ರ ಎಂದೇ ಹೇಳಬೇಕು. ಯಾಕೆಂದರೆ ವಿಷ್ಣುಅವರು ರಾಮಾಚಾರಿಯಾಗಿ ಪರಿಚಯಿಸಿದ್ದೇ ಈ ಸಿನಿಮಾ. ತರಾಸು ಅವರು ರಾಮಚಾರಿಯನ್ನು ಸೃಷ್ಟಿಸಿದ್ದರೆ ಅದನ್ನು ತೆರೆ ಮೇಲೆ ತಂದು ಜಗತ್ತಿಗೆ ಪರಿಚಯಿಸಿದ್ದು ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್! ಪುಟ್ಟಣ್ಣ ಕಣಗಾಲ್ ಅವರಿಗೆ ವಿಷ್ಣುವರ್ಧನ್ ಎಂದರೆ ಎಲ್ಲಿಲ್ಲದ ಪ್ರೀತಿ. ವಿಷ್ಣುದಾದಾ ಅವರ ಪ್ರಿಯ ಶಿಷ್ಯ ಎಂದೇ ಹೇಳಬಹುದು.

ಚಿತ್ರರಂಗಕ್ಕೆ ಒಬ್ಬ ಮಹಾನ್ ನಟನನ್ನು ನಾಗರಹಾವು ಚಿತ್ರದ ಮೂಲಕ ಪರಿಚಯಿಸಿದ್ದವರು ಪುಟ್ಟಣ್ಣ ಕಣಗಾಲ್! ಆದರೆ ಈ ಜೋಡಿ ಮತ್ತೆ ಒಂದಾಗಿ ತೆರೆಯ ಮೇಲೆ ಬರಲೇ ಇಲ್ಲ. ಇದಕ್ಕೆ ಕಾರಣ ಇಬ್ಬರೂ ಬೇರೆ ಬೇರೆ ಪಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದಿದ್ದು ಎನ್ನುತ್ತೆ ಚಿತ್ರರಂಗ. ಆದರೆ ಪುಟ್ಟಣ್ಣ ಅವರಿಗೆ ಯಾವಾಗ ಬೇಕಾದರೂ ಕಾಲ್ ಶೀಟ್ ಕೊಡಲು ವಿಷ್ಣುವರ್ಧನ್ ಅವರು ಸದಾ ಸಿದ್ದರಿದ್ದರು. ಅವರ ನಿರ್ದೇಶನವೆಂದರೆ ವಿಷ್ಣು ಅವರಿಗೆ ಅಷ್ಟು ಅಚ್ಚುಮೆಚ್ಚು. ಒಮ್ಮೆ ಶುಭಮಂಗಳ ಚಿತ್ರವನ್ನು ಪುಟ್ಟಣ್ಣ ನಿರ್ದೇಶನ ಮಾಡುತ್ತಿರುವಾಗ ಅದಕ್ಕೆ ನಾಯಕ ನಾಗಿ ವಿಷ್ಣು ಅವರನ್ನು ಕೇಳಲಾಗಿತ್ತು. ಆದರೆ ಕೆಲವು ಇತರ ಕಾರಣಗಳಿಂದಾಗಿ ಈ ಚಿತ್ರಕ್ಕೆ ಪುಟ್ಟಣ್ಣ ಅವರ ಇನ್ನೊಬ್ಬ ಪ್ರೀತಿಯ ಶಿಷ್ಯ ನಟ ಪ್ರಣಯ ರಾಜ ಶ್ರೀನಾಥ್ ಅವರ ಪಾಲಾಯಿತು. ಹಾಗೆಯೇ ಮಾನಸ ಸರೋವರ ಕೂಡ ವಿಷ್ಣುವರ್ಧನ್ ಅವರ ಕೈತಪ್ಪಿ ನಟ ಶ್ರೀನಾಥ್ ಅವರೇ ನಟಿಸುವಂತಾಯಿತು.

ಆ ನಂತರವೂ ಕೂಡ ರಾಜಾ ವೆಂಕಟಪ್ಪ ನಾಯಕನ ಚರಿತ್ರೆಯನ್ನು ಹೇಳುವಂಥ ಚಿತ್ರಕ್ಕೆ ನಟ ವಿಷ್ಣುವರ್ಧನ್ ಅವರ ಹೆಸರು ಪುಟ್ಟಣ್ಣ ಅವರ ತಲೆಯಲ್ಲಿದ್ದ ಮೊದಲ ಹೆಸರು. ಆದರೆ ಈ ಚಿತ್ರ ಪ್ರೇಕ್ಷಕನ ಎದುರು ಬರುವುದಕ್ಕೂ ಮೊದಲೇ ಪುಟ್ಟಣ್ಣ ಕಣಗಾಲ್ ಚಿತ್ರರಂಗವನ್ನು ಅಗಲಿದ್ರು. ಇದಲ್ಲದೇ ಚಿಕವೀರ ರಾಜೇಂದ್ರ ಪುಸ್ತಕವನ್ನು ಸಿನಿಮಾವಾಗಿಸುವ ಆಶಯ ಹೊಂದಿದ್ದ ಪುಟ್ಟಣ್ಣ, ಈ ಪಾತ್ರಕ್ಕೆ ವಿಷ್ಣು ಬಿಟ್ರೆ ಬೇರೆಯಾರೂ ನ್ಯಾಯ ಒದಗಿಸೋಕೆ ಸಾಧ್ಯನೆ ಇಲ್ಲ ಎಂದೇ ಭಾವಿಸಿದ್ರು. ಆದರೆ ಇದೀಗ ಈ ಎರಡೂ ನಕ್ಷತ್ರಗಳನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಮಾತ್ರ ಮಾತ್ರ ನಿಜಕ್ಕೂ ಅನಾಥ!