ತಂಡ ಸೋಲಿನ ಸೋಲಿನ ಮೇಲೆ ಸೋಲುತ್ತಿದ್ದರೂ, ಹೊಸ ವಿಶಿಷ್ಟ ದಾಖಲೆ ಬರೆದ ಕೆ.ಎಲ್.ರಾಹುಲ್, ಏನು ಗೊತ್ತೇ??

ತಂಡ ಸೋಲಿನ ಸೋಲಿನ ಮೇಲೆ ಸೋಲುತ್ತಿದ್ದರೂ, ಹೊಸ ವಿಶಿಷ್ಟ ದಾಖಲೆ ಬರೆದ ಕೆ.ಎಲ್.ರಾಹುಲ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆ.ಎಲ್.ರಾಹುಲ್ ಕನ್ನಡಿಗ. ಆದರೇ ಸದ್ಯ ಪಂಜಾಬ್ ಕಿಂಗ್ಸ್ ತಂಡದ ನಾಯಕ. ಈ ಮೊದಲು ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ರಾಹುಲ್ ಫ್ರಾಂಚೈಸಿಗಳಿಗೆ ಉತ್ತಮ ಆಟವಾಡಿದ್ದರು. ಕಳೆದೆರೆಡು ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿರುವ ಕೆ.ಎಲ್.ರಾಹುಲ್ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ಸಾಗಿಸುತ್ತಿದ್ದಾರೆ.

ಕೆ.ಎಲ್.ರಾಹುಲ್ ಸತತ ನಾಲ್ಕು ಸೀಸನ್ ಗಳಲ್ಲಿ 500 ಕ್ಕಿಂತ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಪರ ಮೂರು ಸೀಸನ್ ಗಳಿಂದ ಆಡುತ್ತಿರುವ ರಾಹುಲ್ ಕಳೆದ ಸೀಸನ್ ನಲ್ಲಿ ಆರೇಂಜ್ ಕ್ಯಾಪ್ ಗೆದ್ದಿದ್ದರು. ಈ ಭಾರಿ ಸಹ ರಾಹುಲ್ ಕೊನೆಯ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಬಂದರೇ, ಆರೇಂಜ್ ಕ್ಯಾಪ್ ತನ್ನದಾಗಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ.

ಈ ಹಿಂದೆ ಸಚಿನ್ ತೆಂಡೂಲ್ಕರ್ 2010 ಮತ್ತು 2011 ರಲ್ಲಿ ವಿರಾಟ್ ಕೊಹ್ಲಿ 2015 ಮತ್ತು 2016ರಲ್ಲಿ ಮತ್ತು ಡೇವಿಡ್ ವಾರ್ನರ್ ಹಾಗೂ ಕೇನ್ ವಿಲಿಯಮ್ಸನ್ 2017 ಮತ್ತು 2018ರಲ್ಲಿ ಈ ಸಾಧನೆ ಮಾಡಿದ್ದರು. ಪಂಜಾಬ್ ಕಿಂಗ್ಸ್ ತಂಡ ಕೇವಲ ರಾಹುಲ್ ಮತ್ತು ಮಯಾಂಕ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹಾಗಾಗಿ ಸುಲಭವಾಗಿ ಗೆಲ್ಲಬಹುದಾಗಿದ್ದ ನಾಲ್ಕೈದು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನ ದಯನೀಯ ವೈಫಲ್ಯದಿಂದ ಸೋಲಬೇಕಾಯಿತು. ಇಲ್ಲದಿದ್ದರೇ ಖಂಡಿತವಾಗಿಯೂ ಪಂಜಾಬ್ ತಂಡ ಪ್ಲೇ ಆಫ್ ಗೆ ಕ್ವಾಲಿಫೈ ಆಗುತ್ತಿತ್ತು.ಮುಂದಿನ ಸಾರ್ವತ್ರಿಕ ಹರಾಜಿನಲ್ಲಾದರೂ ಪಂಜಾಬ್ ತಂಡ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ನತ್ತ ಹೆಚ್ಚು ಗಮನಹರಿಸುವುದು ಒಳಿತು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.