ಅವರು ಇವರು ಯಾರೇ ಅಡ್ಡ ಬಂದರೂ, ಹೊಸ ಐತಿಹಾಸಿಕ ಮಸೂದೆಗೆ ಸಿದ್ದ ಎಂದ ಗೃಹ ಸಚಿವರು, ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಾಮಾಜಿಕ ಸಮಸ್ಯೆಗಳ ಕರ್ನಾಟಕ ಸರ್ಕಾರಕ್ಕೆ ಹೊಸದೊಂದು ತಲೆನೋವು ಶುರುವಾಗಿದೆ. ಒಂದೆಡೆ ಕೋವಿಡ್ ನಿಂದ ಶುರುವಾದ ನಿರುದ್ಯೋಗದ ಸಮಸ್ಯೆಯಿಂದ ಹಲವಾರು ಜನ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಅಂಶ ಗೃಹ ಇಲಾಖೆಗೆ ತಲೆ ನೋವು ತಂದಿತ್ತು. ಆದರೇ ಈಗ ಮತಾಂತರವನ್ನು ಸಹ ಕೆಲವು ಸಂಘಟನೆಗಳು ಅಕ್ರಮವಾಅಗಿ ನಡೆಸುತ್ತಿರುವುದು ವರದಿಯಾಗಿದೆ.

ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಸದನದಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್ ತಮ್ಮ ತಾಯಿಯೇ ಮತಾಂತರವಾಗಿರುವ ವಿಷಯವನ್ನ ಹೇಳಿದ್ದರು. ಕೇವಲ ತಾಯಿಯಲ್ಲದೇ ತಮ್ಮ ಕ್ಷೇತ್ರದ ಹಲವಾರು ಜನ ಸಾಮೂಹಿಕವಾಗಿ ಮತಾಂತರವಾಗಿರುವ ವಿಚಾರವನ್ನು ಹೇಳಿ ಕಳವಳ ವ್ಯಕ್ತಪಡಿಸಿದ್ದರು. ಆ ಮತಾಂತರದ ವಿಷಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹುದೊಡ್ಡ ಚರ್ಚಾ ವಿಷಯವಾಗಿತ್ತು. ಮತಾಂತರವನ್ನ ಶಾಶ್ವತವಾಗಿ ನಿಷೇಧಿಸಬೇಕೆಂಬ ಅಭಿಯಾನಗಳು ಜೋರಾಗಿ ನಡೆದಿದ್ದವು.

ಈ ಬಗ್ಗೆ ಮಾತನಾಡಿರುವ ಕರ್ನಾಟಕ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ಮತಾಂತರ ಅತಿ ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಸಮಾಜದ ಶಾಂತಿ ಕದಡುವ ಎಲ್ಲಾ ಸಾಧ್ಯತೆಯಿದೆ. ಜನರಿಗೆ ಹಣ, ಮನೆ, ಆಸ್ತಿಯ ಆಮೀಷವೊಡ್ಡಿ ಒತ್ತಾಯಪೂರ್ವಕವಾಗಿ ಮತಾಂತರವನ್ನು ಸರ್ಕಾರ ಸಂಪೂರ್ಣ ನಿಷೇಧಿಸುತ್ತದೆ. ಈ ಬಗ್ಗೆ ಶೀಘ್ರವೇ ಸೂಕ್ತ ಸುಗ್ರೀವಾಜ್ಞೆ ಹೊರಡಿಸಿ ಕಠಿಣ ಕಾನೂನನ್ನ ರಾಜ್ಯದಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಅದಲ್ಲದೇ ಬಲವಂತದ ಮತಾಂತರವನ್ನ ರಾಜ್ಯದಲ್ಲಿ ಸಂಪೂರ್ಣ ನಿಷೇಧಿಸುವುದು ಹಾಗೂ ಮತಾಂತರ ಮಾಡುವ ಸೌಘಟನೆಗಳಿಗೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.ಸಾರ್ವಜನಿಕರಿಗೆ ಅತಿಯಾಗಿ ಕಿರಿಕಿರಿಯೆನಿಸುತ್ತಿದ್ದ ಟೋಯಿಂಗ್ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಂಡು ಜನಸ್ನೇಹಿ ಸಚಿವರಾಗಿರುವ ಆರಗ ಜ್ಞಾನೇಂದ್ರ ಈಗ ಮತಾಂತರದ ವಿರುದ್ದವು ಸಹ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಮೂಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav