ಟಿ 20 ವಿಶ್ವಕಪ್ ಗೆ ಹೊಸ ತಂಡ ಪ್ರಕಟಿಸಲು ಮುಂದಾದ ಬಿಸಿಸಿಐ, ಹೊಸ ತಂಡದಲ್ಲಿ ಸ್ಥಾನ ಪಡೆಯಬಹುದಾದ ಆಟಗಾರರು ಯಾರ್ಯಾರು ಗೊತ್ತೆ??
ಟಿ 20 ವಿಶ್ವಕಪ್ ಗೆ ಹೊಸ ತಂಡ ಪ್ರಕಟಿಸಲು ಮುಂದಾದ ಬಿಸಿಸಿಐ, ಹೊಸ ತಂಡದಲ್ಲಿ ಸ್ಥಾನ ಪಡೆಯಬಹುದಾದ ಆಟಗಾರರು ಯಾರ್ಯಾರು ಗೊತ್ತೆ??
ನಮಸ್ಕಾರ ಸ್ನೇಹಿತರೇ ಅಕ್ಟೋಬರ್ 23 ರಿಂದ ಆರಂಭವಾಗಲಿರುವ ವಿಶ್ವ ಟಿ 20 ಕಪ್ ಗೆ ಈಗಾಗಲೇ ಬಿಸಿಸಿಐ ಹದಿನೈದು ಆಟಗಾರರು ಮತ್ತು ಮೂವರು ಮೀಸಲು ಆಟಗಾರರನ್ನ ಸೇರಿ ಒಟ್ಟು ಹದಿನೆಂಟು ಜನರ ತಂಡವನ್ನ ಕಳೆದ ತಿಂಗಳು ಪ್ರಕಟಿಸಿತ್ತು. ಆದರೇ ಐಪಿಎಲ್ ನ ಸೀಸನ್ ಶುರುವಾಗುವ ಮುನ್ನವೇ ತಂಡವನ್ನ ಪ್ರಕಟಿಸಲಾಗಿತ್ತು. ಆದರೇ ಐಸಿಸಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲು ಎಲ್ಲಾ ದೇಶದ ಕ್ರಿಕೇಟ್ ಸಂಸ್ಥೆಗಳಿಗೆ ಅಕ್ಟೋಬರ್ 10 ರ ತನಕ ಕಾಲಾವಕಾಶ ನೀಡಿತ್ತು. ತಂಡಕ್ಕೆ ಆಯ್ಕೆಯಾದ ಕೆಲವು ಆಟಗಾರರ ನೀರಸ ಪ್ರದರ್ಶನ ಹಿನ್ನಲೆಯಲ್ಲಿ ಬಿಸಿಸಿಐ ಈಗ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲು ಮುಂದಾಗಿದೆ ಎಂಬ ಸುದ್ದಿ ಈಗ ಹರಿದಾಡತೊಡಗಿದೆ.
ಐಪಿಎಲ್ ನ ಮುಂದುವರಿದ ಚರಣ ನಡೆಯುತ್ತಿರುವ ದುಬೈ, ಅಬುದಾಬಿ ಮತ್ತು ಶಾರ್ಜಾ ಕ್ರೀಡಾಂಗಣದ ಪಿಚ್ ಗಳಲ್ಲಿಯೇ, ಐಸಿಸಿ ಟಿ 20 ವಿಶ್ವಕಪ್ ಸಹ ನಡೆಯುವುದರಿಂದ ಈ ಬದಲಾವಣೆಗೆ ಬಿಸಿಸಿಐ ಮುಂದಾಗಿದೆ. ಹೌದು ಈ ಹಿಂದೆ ತಂಡದಲ್ಲಿ ಸ್ಥಾನ ಪಡೆದಿದ್ದ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ನಿಸ್ತೇಜ ಫಾರ್ಮ್ ನಿಂದ ಬಳಲುತ್ತಿದ್ದಾರೆ. ತಂಡದ ಪ್ರಮುಖ ಬ್ಯಾಟ್ಸಮನ್ ಗಳಾಗಬೇಕಿದ್ದ ಇಶಾನ್ ಕಿಶನ್ ಮತ್ತು ಸೂರ್ಯ ಕುಮಾರ್ ಯಾದವ್ ಯು.ಎ.ಇ ಪಿಚ್ ಗಳಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ.
ಆಡಿರುವ ನಾಲ್ಕು ಪಂದ್ಯಗಳಲ್ಲಿ ಸೂರ್ಯ ಕುಮಾರ್ ಯಾದವ್ ಎರಡಂಕಿಯನ್ನು ದಾಟಿಲ್ಲ. ಇನ್ನು ಇಶಾನ್ ಕಿಶನ್ ಕಳಪೆ ಪ್ರದರ್ಶನದಿಂದ ಆಡುವ ಹನ್ನೊಂದರ ಬಳಗದಿಂದಲೇ ಹೊರಬಿದ್ದಿದ್ದರು. ಇನ್ನು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲೆರೆಡು ಪಂದ್ಯ ಆಡಿರಲಿಲ್ಲ. ನಂತರ ಎರಡು ಪಂದ್ಯ ಆಡಿದರೂ, ಒಂದು ಪಂದ್ಯದಲ್ಲಿ ಸಹ ಬೌಲಿಂಗ್ ಮಾಡಲಿಲ್ಲ. ಯು.ಎ.ಇ ಪಿಚ್ ಗಳಲ್ಲಿ ಮಧ್ಯ ಇನ್ನಿಂಗ್ಸ್ ನಲ್ಲಿ ನಿಧಾನಗತಿಯ ಬೌಲಿಂಗ್ ಮಾಡಬಲ್ಲ ಆಟಗಾರ ಒಬ್ಬ ಟೀಮ್ ಇಂಡಿಯಾದಲ್ಲಿರಬೇಕು.
ಆದರೇ ಹಾರ್ದಿಕ್ ಪಾಂಡ್ಯ ಬಹಳ ದಿನಗಳಿಂದ ಬೌಲಿಂಗ್ ಮಾಡುತ್ತಿಲ್ಲ. ಹಾಗಾಗಿ ಹಾರ್ದಿಕ್ ರನ್ನ ಕೇವಲ ಬ್ಯಾಟ್ಸಮನ್ ಎಂಬ ಕಾರಣಕ್ಕೆ ತಂಡದಲ್ಲಿ ಆಡಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಇನ್ನು ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಸಹ ಸಂಪೂರ್ಣ ಲಯ ಕಳೆದುಕೊಂಡಿದ್ದು, ಒಂದೇ ಒಂದು ವಿಕೇಟ್ ಸಹ ಪಡೆಯುತ್ತಿಲ್ಲ. ರಾಹುಲ್ ಚಾಹರ್ ಸಹ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹಾಗಾಗಿ ಈ ಐವರು ಆಟಗಾರರನ್ನು ಕೈ ಬಿಟ್ಟು ಸದ್ಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಸೇರಿಸಲು ಮುಂದಾಗಿದೆ.
ಸೂರ್ಯ ಕುಮಾರ್ ಯಾದವ್ ಬದಲು ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಶ್ರೇಯಸ್ ಅಯ್ಯರ್ ಅಥವಾ ಮಯಾಂಕ್ ಅಗರವಾಲ್ ಮತ್ತು ಇಶಾನ್ ಕಿಶನ್ ಬದಲು ವಿಕೇಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಸಂಜು ಸ್ಯಾಮ್ಸನ್, ಮತ್ತು ಆರೇಂಜ್ ಕ್ಯಾಪ್ ಗೆದ್ದಿರುವ ಶಿಖರ್ ಧವನ್ ಮತ್ತು ಭುವನೇಶ್ವರ್ ಕುಮಾರ್ ಬದಲು ಪರ್ಪಲ್ ಕ್ಯಾಪ್ ಧರಿಸಿರುವ ಆರ್ಸಿಬಿ ವೇಗಿ ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ರಾಹುಲ್ ಚ ಹರ್ ಬದಲು ಯುಜವೇಂದ್ರ ಚಾಹಲ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್,ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ಅಕ್ಷರ್ ಪಟೇಲ್, ರಾಹುಲ್ ಚಾಹರ್ ತಂಡದಿಂದ ಕೋಕ್ ಪಡೆಯುವ ಸಾಧ್ಯತೆ ಇದೆ.
ಬಿಸಿಸಿಐ ಪ್ರಕಟಿಸಲಿರುವ ಹೊಸ ಸಂಭವನೀಯ ತಂಡ ಇಂತಿದೆ. – ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್.ಅಶ್ವಿನ್,ಹರ್ಷಲ್ ಪಟೇಲ್, ಮಹಮದ್ ಶಮಿ, ಜಸಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಯುಜವೇಂದ್ರ ಚಾಹಲ್, ಶ್ರೇಯಸ್ ಅಯ್ಯರ್,ದೀಪಕ್ ಚಾಹರ್,ಶಾರ್ದೂಲ್ ಠಾಕೂರ್.
ಮೀಸಲು ಆಟಗಾರರು – ಸಂಜು ಸ್ಯಾಮ್ಸನ್, ಮಯಾಂಕ್ ಅಗರ್ವಾಲ್,ಮಹಮದ್ ಸಿರಾಜ್.