ಸಿದ್ದುಗೆ ಖೆಡ್ಡಾ ತೋಡಿದ್ದಾರೆಯೇ ಜಮೀರ್?? ಸಿದ್ದುಗೆ ಸೋಲಿನ ರುಚಿ ತೋರಿಸಲು ಜಮೀರ್ ಏನು ಮಾಡುತ್ತಿದ್ದಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿದ್ದರಾಮಯ್ಯನವರು ಕಳೆದ ಭಾರಿ ವರುಣಾ ಕ್ಷೇತ್ರದ ಶಾಸಕರಾಗಿದ್ದವರು. ಚುನಾವಣೆ ವೇಳೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಜೊತೆಜೊತೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದಲೂ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋತರೂ, ಬಾದಾಮಿಯಲ್ಲಿ ಗೆದ್ದ ಕಾರಣ ಸಿದ್ದರಾಮಯ್ಯನವರ ಮಾನ ಉಳಿದಿತ್ತು.

ಆದರೇ ಇತ್ತಿಚಿನ ದಿನಗಳಲ್ಲಿ ಸಿದ್ದರಾಮಯ್ಯನವರು ಚಾಮರಾಜಪೇಟೆಯಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯನ್ನ ಜಮೀರ್ ಅಹಮದ್ ಹೇಳಿದ್ದರು. ಇದಕ್ಕೆ ಪರ ಹಾಗೂ ವಿರೋಧಗಳು ಕೇಳಿ ಬಂದಿದ್ದವು. ಸದ್ಯ ಸಿದ್ದರಾಮಯ್ಯನವರ ಆಪ್ತ, ಸಿ.ಎಂ.ಇಬ್ರಾಹಿಂ, ನೀವು ಚಾಮರಾಜಪೇಟೆಯಲ್ಲಿ ಈ 8 ಕಾರಣಗಳಿಗಾಗಿ ಸ್ಪರ್ಧಿಸಬಾರದು ಎಂದು ಹೇಳಿದ್ದಾರೆ. ಬನ್ನಿ ಆ ಎಂಟು ಕಾರಣಗಳು ಯಾವುವು ಎಂದು ತಿಳಿಯೋಣ. ಇವರ ಹೇಳಿಕೆಗಳನ್ನು ನೋಡಿದರೇ ಸಿದ್ದು ರವರಿಗೆ ಝಮೀರ್ ರವವು ಸರಿಯಾದ ಖೆಡ್ಡಾ ತೋರಿದಂತೆ ಕಾಣುತ್ತಿದೆ.

ಮೊದಲನೆಯದಾಗಿ ಜಮೀರ್ ಅಹಮದ್ ನಂಬಿಕೆಗೆ ಅನರ್ಹವಾದ ವ್ಯಕ್ತಿ. ಯಾವುದೇ ಕಾರಣಕ್ಕೂ ಜಮೀರ್ ರನ್ನ ನಂಬಬೇಡಿ. ಎರಡನೆಯದಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ನಿಮ್ಮಂತವರಿಗಲ್ಲ. ನೀವು ಇಲ್ಲಿ ಸ್ಪರ್ಧಿಸಲೇಬಾರದು. ಮೂರನೆಯದಾಗಿ ಈಗಾಗಲೇ ಚಾಮರಾಜಪೇಟೆಯಲ್ಲಿ ಜಮೀರ್ ವಿರೋಧಿ ಅಲೆ ಇದು. ಜಮೀರ್ ಅದನ್ನು ನಿಮ್ಮ ಮೇಲೆ ತಿರುಗಿಸುತ್ತಿದ್ದಾರೆ. ನಾಲ್ಕನೆಯದಾಗಿ ಚಾಮರಾಜಪೇಟೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮುಸ್ಲಿಂ ಮತಗಳಿವೆ. ಮುಸ್ಲಿಂ ಅಭ್ಯರ್ಥಿಯೊಬ್ಬ ಯಾವ ಪಕ್ಷದಿಂದಲಾದರೂ ಸ್ಪರ್ಧಿಸಿದರೇ ಗೆಲ್ಲುವ ಕ್ಷೇತ್ರ. ನೀವು ಸ್ಪರ್ಧಿಸಿದರೇ ಮುಸ್ಲಿಂ ಅಭ್ಯರ್ಥಿಯೊಬ್ಬನ ಅವಕಾಶ ಹಾಳು ಮಾಡದಂತಾಗುತ್ತದೆ.

ಐದನೆಯದಾಗಿ ಮುಸ್ಲಿಂರ ಅವಕಾಶವನ್ನು ಕಿತ್ತುಕೊಳ್ಳುವ ನೀವು ಮುಸ್ಲಿಂ ಸಮುದಾಯಕ್ಕೆ ಕೊಡುವ ಸಂದೇಶವಾದರೂ ಏನು..? ಆರನೆಯದಾಗಿ ಚಾಮರಾಜಪೇಟೆಯಲ್ಲಿ ಲಿಂಗಾಯತ-ಒಕ್ಕಲಿಗ ಸಮುದಾಯದ ಮತಗಳು ಇವೆ. ಅವರನ್ನ ಹೇಗೆ ಒಲಿಸಿಕೊಳ್ಳುತ್ತಿರಿ. ಏಳನೆಯದಾಗಿ ಚಾಮರಾಜಪೇಟೆ ಬಿಟ್ಟು ಬೇರೆ ಯಾವುದಾದರೂ ಕ್ಷೇತ್ರವನ್ನು ಆರಿಸಿಕೊಳ್ಳಿ‌. ಎಂಟನೆಯದಾಗಿ ಜಮೀರ್ ನಿಮ್ಮನ್ನ ಹೊಗಳಿ ಹೊಗಳಿ ಬಕ್ರಾ ಮಾಡುತ್ತಿದ್ದಾರೆ. ನಿಮಗದು ಅರ್ಥವಾಗುತ್ತಿಲ್ಲ. ಕೊನೆಯದಾಗಿ ಚಾಮರಾಜಪೇಟೆಯಿಂದ ಸ್ಪರ್ಧಿಸಿದರೇ, ಸ್ವಪಕ್ಷೀಯರೇ ನಿಮ್ಮ ವಿರುದ್ದ ಚುನಾವಣೆ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav