ಆಟಿಕೆ ಬದಲು ಮೊಬೈಲ್ ಕೈಯಲ್ಲಿ ಹಿಡಿದ ಆ ಪುಟ್ಟ ಮಗು? ಆ ಮಗುವಿನ ಇಂದಿನ ಸ್ಥಿತಿ ಏನು ಗೊತ್ತಾ? ಪ್ರತಿಯೊಬ್ಬ ತಂದೆ ತಾಯಿ ಓದಲೇಬಾಕಾದ ಸಂಗತಿ ಇದು
ನಮಸ್ಕಾರ ಸ್ನೇಹಿತರೇ, ಕರೋನಾ ಬಾಧೆಯಿಂದ ದೇಶದಾದ್ಯತ ಲಾಕ್ ಡೌನ್ ನನ್ನ ಕಳೆದು 2 ವರ್ಷಗಳಲ್ಲಿ ಹಲವಾರು ಬಾರಿ ಮಾಡಲಾಗಿದೆ. ಇರರಿಂದ ಕರೋನಾ ನಿಯಂತ್ರಣಕ್ಕೆ ಬಂತೋ, ಅಥವಾ ಜನರಿಗೆ ತೊಂದರೆ ಆಯ್ತೋ ಇಲ್ವೋ ಆದರೆ ಅದಕ್ಕಿಂತ ಮುಖ್ಯವಾಗಿ ಮಕ್ಕಳ ಮೇಲೆ ಮಾತ್ರ ಗಾಢವಾಗಿ ಕೆಟ್ಟ ಪರಿನಾಮವನ್ನೇ ಬೀರಿದೆ ಎಂದರೆ ತಪ್ಪಾಗಲಾರದು. ಆನ್ ಲೈನ್ ಕ್ಲಾಸ್ ನಿಂದಾಗಿ ಮಕ್ಕಳ ಎಲ್ಲರ ಕೈಯಲ್ಲಿ ಪಾಟಿ ಬಳಪ, ಪುಸ್ತಕ ಪೆನ್ನಿನ ಬದಲು ಮೊಬೈಲ್ ಸಿಕ್ತು. ಎಷ್ಟರ ಮಟ್ಟಿಗೆ ಎಂದರೆ ಕೆಲವೊಂದು ಮಕ್ಕಳು ಬರೆಯುವುದನ್ನೇ ಮರೆತುಬಿಟ್ಟಿದ್ದಾರೆ.
ತಂದೆ ತಾಯಿಗಳು ಮಕ್ಕಳಿಗೆ ಲಾಕ್ ಡೌನ್ ಸಮಯದಲ್ಲಿ ಹೆಚ್ಚೆಚ್ಚು ಮೊಬೈಲ್ ನ್ನೇ ರೂಢಿ ಮಾಡಿಸಿಬಿಟ್ಟಿದ್ದಾರೆ. ಮಕ್ಕಳು ಹಠ ಮಾಡಿದಾಗಲೆಲ್ಲಾ ಮೊಬೈಲ್ ಕೊಟ್ಟು ಸುಮ್ಮನಿರಿಸುವ ಪ್ರಯತ್ನ ಮಾಡುತ್ತಾರೆ. ಇನ್ನು ತಾಗೆ ಆಫೀಸ್ ಕೆಲಸ, ವರ್ಕ್ ಫ್ರಾರ್ಮ್ ಹೋಮ್ ಹಿನ್ನೆಲೆಯಲ್ಲಿ ತಮಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಕ್ಕಳ ಕೈಯಲ್ಲಿ ಅದೆಷ್ಟು ಹೊತ್ತು ಬೇಕಾದರೂ ಮೊಬೈಲ್ ಹಿಡಿದುಕೊಳ್ಳಲು ಬಿಟ್ಟಿದ್ದಾರೆ. ಇವೆಲ್ಲದುದರ ಪರಿಣಾಮ ಏನು ಗೊತ್ತಾ? ಮಕ್ಕಳ ಬ್ರೈನ್ ಡ್ಯಾಮೇಜ್!
ಉತ್ತರ ಕನ್ನಡದ ಒಂದು ಕೂಸು ತಾಯಿ ಬ್ಯಾಂಕ್ ಕೆಲಸಕ್ಕೆಂದು ಹೊರ ಹೋದಾಗ, ಅಪ್ಪ ಕಂಪನಿ ಕೆಲಸಕ್ಕೆಂದು ರೂಮ್ ಸೇರಿದ್ದಾರೆ ಮಾಡಿದ್ದೇನು ಗೊತ್ತೆ? ತನ್ನೇಲ್ಲಾ ಆಟಗಳನ್ನೂ ಬಿಟ್ಟು ಮೊಬೈಲ್ ಬಳಸಿದ್ದು. ಇದರ ಪರಿಣಾಮವಾಗಿ ನಿದ್ದೆಗಣ್ಣಿನಲ್ಲೂ ಕೈ ಕಾಲುಗಳನ್ನು ಮೊಬೈಲ್ ಹಿಡಿದುಕೊಂಡಾಗ ಆಡಿಸಿದಂತೆಯೇ ಆಡಿಸುತ್ತಿದ್ದಳು. ಇದೀಗ ಪಿಟ್ಸ್ ರೋಗ ಆಕೆಯನ್ನು ಕಾಡುತ್ತಿದೆ.
ನಾವು ಯಾವುದೇ ಕೆಲಸವನ್ನು ಹೆಚ್ಚಾಗಿ ಮಾಡಿದರೆ, ಉದಾಹರಣೆಗೆ ದಿನದ ಹೆಚ್ಚಿನ ಅವಧಿ ಮೊಬೈಲ್ ನ್ನೇ ಬಳಸಿದರೆ ಬ್ರೇನ್ ಹೈಪರ್ ಸ್ಟಿಮ್ಯುಲೇಶನ್ ಶುರುವಾಗತ್ತೆ. ಅಂದರೆ ಮೆದುಳು ಸಮಾಧಾನದಿಂದ ಇರುವುದೇ ಇಲ್ಲ. ನಿದ್ದೆಯಲ್ಲೂ ಕೂಡ ಅದೇ ಕೆಲಸವನ್ನು ಮಾಡುತ್ತಿರುವಂತೆ ಭಾಸವಾಗುತ್ತೆ. ಇದು ಮಕ್ಕಳ ಮೆದುಳಿನ ಬೆಳವಣಿಗೆಯನ್ನು ಕುಗ್ಗಿಸುತ್ತೆ. ಹಾಗಾಗಿ ಪಾಲಕರೆ ದಯವಿಟ್ಟು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೊಬೈಲ್ ಬಳಕೆಯ ಮೇಲೆ ನಿಯಂತ್ರಣ ಹೇರಿ. ಶಾಲಾ ಕಲಿಕೆಯನ್ನು ಬಿಟ್ಟು ಉಳಿದ ಸಮಯದಲ್ಲಿ ದಯವಿಟ್ಟು ಮಕ್ಕಳ ಕೈಯಲ್ಲಿ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಡದೆ ಇತರ ಆಟಗಳನ್ನು ಆಡಲು ಹೇಳಿಕೊಡಿ. ಅವರ ಆರೋಗ್ಯವನ್ನು ಕಾಪಾಡಿಕೊಳ್ಳಿ.