ರೋಹಿತ್, ರಹಾನೆ ನಾಯಕತ್ವದಲ್ಲಿ ಹೆಚ್ಚು ಪಂದ್ಯ ಆಡಿರುವ ಶಾರ್ದುಲ್, ಕೊಹ್ಲಿ ರಾಜೀನಾಮೆ ಕುರಿತು ಹೇಳಿದ್ದೇನು ಗೊತ್ತೇ??

ರೋಹಿತ್, ರಹಾನೆ ನಾಯಕತ್ವದಲ್ಲಿ ಹೆಚ್ಚು ಪಂದ್ಯ ಆಡಿರುವ ಶಾರ್ದುಲ್, ಕೊಹ್ಲಿ ರಾಜೀನಾಮೆ ಕುರಿತು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಯಶಸ್ವಿ ನಾಯಕತ್ವದ ಮೆರುಗು ರೋಹಿತ್ ಶರ್ಮಾರನ್ನ ಭಾರತೀಯ ತಂಡದ ನಾಯಕರಾಗಿ ನೋಡಬೇಕೆಂಬುದು ಹಲವಾರು ಕ್ರೀಡಾ ಪ್ರೇಮಿಗಳ ಒತ್ತಾಸೆಯಾಗಿತ್ತು. ಬರೋಬ್ಬರಿ ನಾಲ್ಕಕ್ಕಿಂತ ಹೆಚ್ಚು ಭಾರಿ ಮುಂಬೈಗೆ ಐಪಿಎಲ್ ಟ್ರೋಫಿ ಗೆಲ್ಲಿಸಿದ ರೋಹಿತ್ ಶರ್ಮಾರವರೇ ಭಾರತ ತಂಡದ ನಾಯಕರಾಗಬೇಕು ಎಂಬ ಕೂಗು ಕೇಳಿ ಬರುತ್ತಲೇ ಇತ್ತು. ಇಂಗ್ಲೆಂಡ್ ಮಾದರಿಯಲ್ಲಿ ಭಾರತವೂ ಸಹ ಏಕದಿನ, ಟಿ20 , ಮತ್ತು ಟೆಸ್ಟ್ ತಂಡಕ್ಕೆ ಬೇರೆ ಬೇರೆ ನಾಯಕರಿಂದ ತಂಡವನ್ನ ನಿರ್ವಹಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದ್ದವು.

ಇತ್ತಿಚೆಗಷ್ಟೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟನೆಯೊಂದನ್ನ ನೀಡಿ, ಅಕ್ಟೋಬರ್ ನವೆಂಬರ್ ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮುಗಿದ ನಂತರ ನಾನು ಟಿ 20 ತಂಡದ ನಾಯಕತ್ವವನ್ನ ತ್ಯಜಿಸುವುದಾಗಿ ಹೇಳಿದ್ದರು. ಆ ಹೇಳಿಕೆ ಹೊರ ಬಂದ ನಂತರ ಟಿ 20 ತಂಡದ ನಾಯಕರಾಗಿ ರೋಹಿತ್ ಶರ್ಮಾ ಹೊರಹೊಮ್ಮುವುದು ಬಹುತೇಖ ಖಚಿತ ಎಂದು ಹೇಳಲಾಗುತ್ತಿತ್ತು.

ಆದರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ತಂಡದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ನಾಯಕ ವಿರಾಟ್ ಕೋಹ್ಲಿರವರೇ ನಾಯಕರಾಗಿ ಮುಂದುವರೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗೆ ನಡೆದ ಇಂಗ್ಲೆಂಡ್ ಟೆಸ್ಟ್ ನಲ್ಲಿ ಎರಡು ಇನ್ನಿಂಗ್ಸ್ ನಲ್ಲಿ ಶಾರ್ದೂಲ್ ಠಾಕೂರ್ ಅರ್ಧ ಶತಕ ಗಳಿಸಿದ್ದರು. ಇನ್ನು ಬೌಲಿಂಗ್ ನಲ್ಲಿ ಸಹ ಮಿಂಚಿ ಪ್ರಮುಖವಾದ ಜೋ ರೂಟ್ ವಿಕೇಟ್ ನ್ನು ಪಡೆದಿದ್ದರು. ಇತ್ತಿಚೆಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾರ್ದೂಲ್ ಠಾಕೂರ್ ನಾಯಕ ವಿರಾಟ್ ಕೊಹ್ಲಿಯವರೇ ತಂಡದ ನಾಯಕರಾಗಿ ಮುಂದುವರೆಯುವುದು ಉತ್ತಮ. ನಾನು ಅವರ ನಾಯಕತ್ವದಲ್ಲಿ ಆಡಲು ಹೆಚ್ಚು ಇಷ್ಟ ಪಡುತ್ತೇನೆ.

ನಾವಿಬ್ಬರು ಹಲವಾರು ಜೋಕುಗಳನ್ನ ಮಾಡಿಕೊಳ್ಳುತ್ತಿರುತ್ತೇವೆ. ಆಗಾಗ ಒಬ್ಬರ ಕಾಲನ್ನ ಒಬ್ಬರು ಎಳೆದುಕೊಳ್ಳುತ್ತಿರುತ್ತೇವೆ. ಅವರ ಜೊತೆ ನನ್ನ ಸಂಭಂದ ಉತ್ತಮವಾಗಿದೆ. ಕ್ರೀಡಾಂಗಣದಲ್ಲಿ ಅವರು ಹೆಚ್ಚು ಕ್ರೀಡಾಸ್ಪೂರ್ತಿಯೊಂದಿಗೆ ಆಡುತ್ತಾರೆ ಎಂದು ಹೇಳಿದರು. ಆದರೇ ವಿಶ್ವ ಟಿ 20 ಕಪ್ ಗೆ ಆಯ್ಕೆಯಾದ ಹದಿನೈದು ಆಟಗಾರರ ಪಟ್ಟಿಯಲ್ಲಿ ಶಾರ್ದೂಲ್ ಠಾಕೂರ್ ಸ್ಥಾನ ಪಡೆದಿಲ್ಲ. ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್ ಈ ಮೂವರು ಆಟಗಾರರು ವಿಶ್ವಕಪ್ ಟಿ 20 ಟೂರ್ನಿಯಲ್ಲಿ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ಹಾಗೆ ನೋಡಿದರೇ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ನಾಯಕತ್ವದಡಿ ಶಾರ್ದೂಲ್ ಠಾಕೂರ್ ಮುಂಬೈ ತಂಡದ ಪರ ಹೆಚ್ಚು ರಣಜಿ ಪಂದ್ಯಗಳನ್ನು ಆಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ‌.