ಮನೆಯಲ್ಲಿಯೇ ಮಜಾ ವಿಥ್ ತುತ್ತ ಮುತ್ತ, ಅತ್ತೆ ಸೊಸೆ ನಡುವಿನ ಘಟನೆಗಳನ್ನು ಅದ್ಭುತವಾಗಿ ತೋರಿಸಿದ ಸೃಜನ್, ಹೇಗಿದೆ ಗೊತ್ತೇ??
ಮನೆಯಲ್ಲಿಯೇ ಮಜಾ ವಿಥ್ ತುತ್ತ ಮುತ್ತ, ಅತ್ತೆ ಸೊಸೆ ನಡುವಿನ ಘಟನೆಗಳನ್ನು ಅದ್ಭುತವಾಗಿ ತೋರಿಸಿದ ಸೃಜನ್, ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸೃಜನ್ ಲೋಕೇಶ್ ಅವರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ ಸೃಜನ್ ಲೋಕೇಶ್ ಅಂದರೆ ಕಂಡಿತವಾಗಿಯು ತಪ್ಪಾಗಲಾರದು. ಬಹುಮುಖ ಪ್ರತಿಭೆಯುಳ್ಳ ಸೃಜನ್ ಲೋಕೇಶ್ ಅವರು ಕನ್ನಡ ಚಿತ್ರರಂಗದ ಅಮೂಲ್ಯ ಪ್ರತಿಭೆಯಾಗಿದ್ದಾರೆ. ಹೌದು ಸ್ನೇಹಿತರೆ ಸೃಜನ್ ಲೋಕೇಶ್ ರವರು ಈ ಹಿಂದೆ ಮೊದಲು ಕನ್ನಡ ಚಿತ್ರರಂಗಕ್ಕೆ ನಾಯಕನಟರಾಗಿ ಎಂಟ್ರಿ ಕೊಟ್ಟವರು ನಂತರ ಅದರಲ್ಲಿ ಯಶಸ್ವಿಯಾಗಲು ವಿಫಲರಾದರು. ನಂತರ ಅವರಿಗೆ ಮೊದಲ ಯಶಸ್ಸು ಕೊಟ್ಟಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ನವಗ್ರಹ ಚಿತ್ರದ ಪಾತ್ರ.
ಅದಾದ ನಂತರ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದುಕೊಂಡರು. ಆದರೆ ಸೃಜನ್ ಲೋಕೇಶ್ ರವರಿಗೆ ಜೀವನದಲ್ಲಿ ಅತ್ಯಂತ ಹೆಚ್ಚು ಯಶಸ್ಸು ತಂದುಕೊಟ್ಟಂತಹ ಕಾರ್ಯಕ್ರಮ ಎಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಮಜಾ ಟಾಕೀಸ್ ಕಾರ್ಯಕ್ರಮ. ಹೌದು ಸ್ನೇಹಿತರೆ ಮಜಾಟಾಕೀಸ್ ಕಾರ್ಯಕ್ರಮದ ಮೂಲಕ ಕನ್ನಡದ ಮನೆಮನೆಯ ಕಿರುತೆರೆಯ ಪ್ರೇಕ್ಷಕರ ಮನಸ್ಸಿಗೆ ತಲುಪಿದರು ನಮ್ಮ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್.
ಇನ್ನು ಈಗ ಮಜಾ ಟಾಕೀಸ್ ಕಾರ್ಯಕ್ರಮ ಸದ್ಯಕ್ಕೆ ಮುಕ್ತಾಯಗೊಂಡಿದ್ದು ಸೃಜನ್ ಲೋಕೇಶ್ ಅವರು ಏನು ಮಾಡುತ್ತಿದ್ದಾರೆ ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಸೃಜನ್ ಲೋಕೇಶ್ ಅವರು ಈಗಾಗಲೇ ಒಂದು ಹೊಸ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದು, ಈ ಚಾನೆಲ್ನ ಮೂಲಕ ಹೊಸ ಬಗೆಯ ಕಂಟೆಂಟ್ ಗಳನ್ನು ಸೃಜನ್ ಲೋಕೇಶ್ ಅವರು ಪೋಸ್ಟ್ ಮಾಡಲಿದ್ದಾರೆ ಎಂಬುದು ತಿಳಿದುಬಂದಿದೆ. ಇನ್ನು ಯುಟ್ಯೂಬ್ ಚಾನೆಲ್ನ ಮೊದಲ ವಿಡಿಯೋ ಆಗಿ ಸೃಜನ್ ಲೋಕೇಶ್ ರವರ ತಾಯಿ ಹಾಗೂ ಪತ್ನಿ ಅಡುಗೆ ವಿಡಿಯೋ ಮಾಡಿರೋದು ಸಾಕಷ್ಟು ವೈರಲ್ ಆಗಿದೆ. ಈ ವೈರಲ್ ವಿಡಿಯೋವನ್ನು ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ.