ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಪ್ಪಟ ಕನ್ನಡತಿ ಅನುಷ್ಕಾ ಶೆಟ್ಟಿ ರವರ ಮೊದಲ ಕ್ರಶ್ ಕೂಡ ಕನ್ನಡದ ಹೆಮ್ಮೆ. ಯಾರಂತೆ ಗೊತ್ತಾ??

4

ನಮಸ್ಕಾರ ಸ್ನೇಹಿತರೇ ನಾವು ಕನ್ನಡಿಗರಾಗಿ ಅದೆಷ್ಟೋ ಚಿತ್ರಗಳಲ್ಲಿ ಎಂತೆಂತಹ ನಟಿಯರನ್ನು ನೋಡಿದ್ದೇವೆ ನಾವು. ಇತ್ತೀಚಿನ ದಿನಗಳಲ್ಲಿ ಕನ್ನಡದಿಂದ ಅದೆಷ್ಟೋ ನಟಿಯರು ಬೇರೆಬೇರೆ ಚಿತ್ರರಂಗಕ್ಕೆ ಹೋಗಿ ನಟಿಸಿ ಹೆಸರುಗಳಿಸಿದ ಮೇಲೆ ಕನ್ನಡ ಚಿತ್ರರಂಗವನ್ನು ಕನ್ನಡತನವನ್ನು ಮರೆಯೋ ಕಾಯಿಲೆ ಹೊಂದಿದ್ದಾರೆ. ಒಂದು ಚಿತ್ರ ಯಶಸ್ಸು ಆಯಿತೆಂದರೆ ತಮಗೆ ಕನ್ನಡ ಚಿತ್ರರಂಗದ ನೆನಪೇ ಇಲ್ಲದಂತೆ ಮಾಡುವ ಅದೆಷ್ಟು ನಟಿಯರ ಮಧ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸದಿದ್ದರು ಸಹ ಕನ್ನಡ ಕುರಿತಂತೆ ಹಾಗೂ ಕನ್ನಡ ಚಿತ್ರರಂಗದ ಕುರಿತಂತೆ ವಿಶೇಷ ಗೌರವ ಹಾಗೂ ಅಭಿಮಾನಿಗಳನ್ನು ಹೊಂದಿರುವ ಈ ನಟಿ ಎಲ್ಲರಿಗಿಂತಲೂ ಮೇಲೆ ನಿಲ್ಲುತ್ತಾರೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕರಾವಳಿ ಭಾಗದ ಪುತ್ತೂರು ಮೂಲದ ಬೆಡಗಿ ಆಗಿರುವ ಅನುಷ್ಕಾ ಶೆಟ್ಟಿ ಅವರ ಕುರಿತಂತೆ. ಹೌದು ಸ್ನೇಹಿತರೆ ಇದುವರೆಗೆ ಅನುಷ್ಕಾ ಶೆಟ್ಟಿ ಅವರು ಒಂದೇ ಒಂದು ಕನ್ನಡದ ಚಿತ್ರದಲ್ಲಿ ನಟಿಸದಿದ್ದರು ಸಹ ಈಗಾಗಲೇ ಪ್ರತಿಬಾರಿ ಏನೇ ವಿಶ್ ಮಾಡುವಾಗಲೂ ಸಹ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಅಕ್ಷರವನ್ನೇ ಬಳಸುತ್ತಾರೆ ಇದರಿಂದಾಗಿ ತಿಳಿಯುತ್ತದೆ ಅನುಷ್ಕ ಶೆಟ್ಟಿಯವರ ಕನ್ನಡ ಪ್ರೇಮದ ತೀವ್ರತೆ ಎಷ್ಟೆಂದು.

ಇನ್ನು ಅನುಷ್ಕಾ ಶೆಟ್ಟಿ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ ನಂತರದ ದಿನಗಳಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಇಂದಿಗೂ ಸಹ ಸೂಪರ್ಸ್ಟಾರ್ ನಟಿ ಪಟ್ಟವನ್ನು ಪಡೆದುಕೊಂಡಿದ್ದಾರೆ. ಇನ್ನು ಇಂದಿಗೂ ಸಹ ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಅನುಷ್ಕಾ ಶೆಟ್ಟಿ ಅವರ ಮುಗ್ಧತೆ ಹಾಗೂ ನಟನೆಯ ಚಾತುರ್ಯತೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಬಹುದು.

ಇನ್ನೂ ನಟಿ ಅನುಷ್ಕಾ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಯಾವುದೇ ಚಿತ್ರಗಳಲ್ಲಿ ಕೂಡ ಕಾಣಿಸಿಕೊಳ್ಳದಿದ್ದರೂ ಸಹ ಅವರಿಗೆ ಕರ್ನಾಟಕದಲ್ಲಿ ಅಭಿಮಾನಿಗಳು ಲಕ್ಷಾಂತರ ಮಂದಿ ಇದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರು ಕನ್ನಡ ಹಾಗೂ ಕನ್ನಡತನದ ಮೇಲೆ ತೋರಿಸುವ ಗೌರವ ಹಾಗೂ ಪ್ರೀತಿ. ಎಲ್ಲಿ ಹೋದರು ತಾನೊಬ್ಬ ಕನ್ನಡತಿ ಎಂಬ ಗರ್ವ ಹಾಗೂ ತೃಪ್ತಿಯನ್ನು ಅವರು ಎಲ್ಲಾ ಕಡೆ ತೋರಿಸುವುದೇ ಅವರ ದೊಡ್ಡ ಮನಸ್ಸಿಗೆ ಕಾರಣವಾಗಿದೆ.

ಇನ್ನು ಇತ್ತೀಚಿನ ವರ್ಷಗಳಲ್ಲಿ ಬಾಹುಬಲಿ ಸರಣಿ ಚಿತ್ರಗಳು ಬಿಡುಗಡೆಯಾದಾಗ ನಟಿ ಅನುಷ್ಕಾ ಶೆಟ್ಟಿ ಅವರು ಸಂದರ್ಶನವೊಂದರಲ್ಲಿ ಅವಕಾಶ ಸಿಕ್ಕರೆ ನಾನು ಕನ್ನಡ ಚಿತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದರು. ಇನ್ನು ಇದೇ ತರಹದ ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ನಿಮ್ಮ ನೆಚ್ಚಿನ ಸೆಲೆಬ್ರಿಟಿ ಕೃಷ್ ಯಾರು ಎಂದು ಕೇಳಿದಾಗ. ಅದಕ್ಕೆ ಉತ್ತರ ನೀಡುತ್ತಾ ನಟಿ ಅನುಷ್ಕಾ ಶೆಟ್ಟಿ ಅವರು ಏನು ಹೇಳಿದ್ದಾರೆ ಗೊತ್ತಾ ಬನ್ನಿ ಅದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಹಾಗೂ ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿರುವ ಅನುಷ್ಕಾ ಶೆಟ್ಟಿ ಅವರು ತಮ್ಮ ಸೆಲೆಬ್ರಿಟಿ ಕೃಷ್ ನ ಹೆಸರನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದರು. ಹೌದು ಸ್ನೇಹಿತರೆ ಅವರು ಇನ್ಯಾರೂ ಅಲ್ಲ ನಮ್ಮ ಭಾರತ ಕಂಡ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ ಮ್ಯಾನ್ ಹಾಗೂ ಕನ್ನಡಿಗರ ಹೆಮ್ಮೆ ದ ವಾಲ್ ರಾಹುಲ್ ದ್ರಾವಿಡ್.

ಹೌದು ಸ್ನೇಹಿತರೆ ರಾಹುಲ್ ದ್ರಾವಿಡ್ ರವರು ನಟಿ ಅನುಷ್ಕಾ ಶೆಟ್ಟಿ ಅವರ ಮೊದಲ ಕ್ರಶ್ ಆಗಿದ್ದರು. ರಾಹುಲ್ ದ್ರಾವಿಡ್ ರವರ ಸೌಮ್ಯ ಸ್ವಭಾವ ಹಾಗೂ ಅವರ ತಾಳ್ಮೆ ಅನುಷ್ಕಾ ಶೆಟ್ಟಿ ಅವರಿಗೆ ಬಹಳ ಇಷ್ಟವಾಗಿತ್ತು. ನಂತರ ಅವರು ಮದುವೆಯಾಗಿದ್ದಾರೆ ಎಂಬುದು ತಿಳಿದು ಬೇಸರವಾಯಿತು. ಅದೇನಾದರೂ ಆಗಲಿ ಅನುಷ್ಕಾ ಶೆಟ್ಟಿ ಖಂಡಿತವಾಗಿಯೂ ಹೆಮ್ಮೆಯ ಕನ್ನಡತಿ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಅವರು ಕಾಣ ಸಿಗಲಿ ಎಂಬುದೇ ಅವರ ಲಕ್ಷಾಂತರ ಅಭಿಮಾನಿಗಳ ಆಶಯ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿಕೊಳ್ಳಿ.