ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಕ್ಕೆ ಮೊದಲ ಪ್ರತಿಕ್ರಿಯೆ ನೀಡಿದ ಸೂರ್ಯಕಾಂತ್ ಹೇಳಿದ್ದೇನು ಗೊತ್ತೇ??

1

ನಮಸ್ಕಾರ ಸ್ನೇಹಿತರೇ, ಎಸ್.ಪಿ.ಬಾಲಕೃಷ್ಣ ಅವರು ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮವನ್ನು ಹೇಗೆ ತಾನೇ ಮರೆಯಲು ಸಾಧ್ಯ! ಅದೆಷ್ಟು ಗಾಯಕ ಪ್ರತಿಭೆಯನ್ನು ಹುಟ್ಟು ಹಾಕಿ ಸಿನಿಮಾಗಳಲ್ಲಿ ಹಾಡುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು ಈ ಕಾರ್ಯಕ್ರಮ ಎಂದು ಹೇಳಲು ಸಾಧ್ಯವಿಲ್ಲ. ಎಸ್ ಪಿ ಬಿ ಯವರು ಇಲ್ಲಿ ಹಾಡಲು ಬರುವ ಪ್ರತಿ ಗಾಯಕರ ಸರಿ ತಪ್ಪುಗಳನ್ನು ನೋಡಿ, ಅವರ ತಪ್ಪುಗಳನ್ನು ತಿದ್ದಿ ಒಬ್ಬ ಅದ್ಭುತ ಗಾಯಕರನ್ನಾಗಿ ಮಾಡುವಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದರು. ಸಾಕಷ್ಟು ಸಂಚಿಕೆಗಳನ್ನು ನಡೆಸಿದ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಕಳೆದ ಕೆಲವು ವರ್ಷಗಳಿಂದ ನಿಂತು ಹೋಗಿತ್ತು. ಆದರೆ ಇದಿಗ ಅವರ ಸ್ಮರಣಾರ್ಥ ಮತ್ತೆ ಕಲರ್ಸ್ ನಲ್ಲಿ ಎದೆ ತುಂಬಿಹಾದುವೆನು ಕಾರ್ಯಕ್ರಮ ನಡೆಸಲಾಗುತ್ತಿದೆ.

ಎದೆ ತುಂಬಿ ಹಾಡುವೆನು ಗಾಯನ ಸ್ಪರ್ಧಿಯಲ್ಲಿ ಎಲ್ಲಾ ವಯೋಮಿತಿಯ ಗಾಯಕರೂ ಕೂಡ ಇದ್ದಾರೆ. ಎಲ್ಲರೂ ತಮ್ಮದೇ ಶೈಲಿಯಲ್ಲಿ ಹಾಡಿ ತೀರ್ಪುಗಾರರ ಮನಸ್ಸು ಗೆಲ್ಲುತ್ತಿದ್ದಾರೆ. ಆದರೆ ಈ ಎಲ್ಲಾ ಸ್ಪರ್ಧಿಗಳ ನಡುವೆ ಕಲ್ಬುರ್ಗಿಯ ಸೂರ್ಯಕಾಂತ್ ವಿಭಿನ್ನ ಗಾಯಕ ಎನ್ನಬಹುದು. ಮೊದಲ ಆಡಿಶನ್ ನಲ್ಲಿಯೇ ಜಡ್ಜ್ ಗಳ ಮನಸ್ಸು ಗೆದ್ದವರು ಇವರು. ಇದಕ್ಕೆ ಒಂದು ಪ್ರಮುಖ ಕಾರಣವಿದೆ. ಸೂರ್ಯಕಾಂತ್ ಮಾತನಾಡುವಾಗ ಬಿಕ್ಕಳಿಸುತ್ತಾರೆ. ಅವರಿಗೆ ಪದಗಳು ಸರಿಯಾಗಿ ಉಚ್ಚಾರವಾಗುವುದಿಲ್ಲ. ಆದರೆ ಹಾಡುವಾಗ ಮಾತ್ರ ಈ ನ್ಯೂನ್ಯತೆ ಕಾಣಿಸುವುದೇ ಇಲ್ಲ. ಇದಕ್ಕೆ ಪ್ರಮುಖ ಕಾರಣ ಅವರ ಆತ್ಮವಿಶ್ವಾಸ ಎನ್ನಬಹುದು.

ಇನ್ನು ಗಾಯಕ ಸೂರ್ಯಕಾಂತ್ ಅವರು ರಿಹರ್ಸಲ್ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತನಗೆ ಈ ಅವಕಾಶ ಮಾಡಿಕೊಟ್ಟ ತೀರ್ಪುಗಾರರಾದ ರಾಜೇಶ್ ಕೃಷ್ಣನ್, ಹರಿಕೃಶ್ಣ ಹಾಗೂ ರುಅಘು ದೀಕ್ಷಿತ್ ಅವರಿಗೆ ಹಾಗೂ ಕಲರ್ಸ್ ವಾಹಿನಿಗೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ರಿಹರ್ಸಲ್ ಸಮಯದಲ್ಲಿ ಸಹಾಯ ಮಾಡುವ ಸುನೀತಾ ಹಾಗೂ ಮಂಗಳ ರವಿಯವರಿಗೂ ಸೂರ್ಯಕಾಂತ್ ಧನ್ಯವಾದ ಹೇಳಿದ್ದಾರೆ. ತಾನು ಇಲ್ಲಿವರೆಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಇದಕ್ಕಾ ಕಾರಣ ನಿಮೆಲ್ಲರ ಸಹಕಾರ ಎಂದಿದ್ದಾರೆ. ಈ ಸರಳ ಜೀವಿ ಸೂರ್ಯಕಾಂತ್ ಅವರು ಗಾಯನದಲ್ಲಿ ಇನ್ನಷ್ಟು ಮುಂದೆ ಹೋಗಲಿ, ಅವರ ಹಾ