100 ಸಿನಿಮಾದಲ್ಲಿ ನಟಿಸಿದ್ದರೂ ಡಾ. ರಾಜಕುಮಾರ್ ಅವರಿಗೆ ಸಿಕ್ಕಿದ ಸಂಭಾವನೆ ಎಷ್ಟು ಗೊತ್ತಾ?? ಇದು ಅಣ್ಣಾವ್ರ ನೈಜ ಮುಖ.
100 ಸಿನಿಮಾದಲ್ಲಿ ನಟಿಸಿದ್ದರೂ ಡಾ. ರಾಜಕುಮಾರ್ ಅವರಿಗೆ ಸಿಕ್ಕಿದ ಸಂಭಾವನೆ ಎಷ್ಟು ಗೊತ್ತಾ?? ಇದು ಅಣ್ಣಾವ್ರ ನೈಜ ಮುಖ.
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ದೇವರು ಎಂದೇ ಕರೆಯಲ್ಪಡುವ ನಮ್ಮ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರು. ಅದಕ್ಕೆ ಕಾರಣ ಅವರ ವ್ಯಕ್ತಿತ್ವ ಹಾಗೂ ಅವರ ನಟನೆ ಎಂದರೆ ತಪ್ಪಾಗಲಾರದು. ನಟನಾಗಿ ರಾಜಕುಮಾರ್ ಅವರು ಎಷ್ಟು ಹೆಸರು ಮಾಡಿದ್ದಾರೋ ಅಷ್ಟೇ ಅವರ ನಿಜಜೀವನದ ನಡವಳಿಕೆಯಿಂದ ಕೂಡ ಎಲ್ಲರ ಮನಗೆದ್ದಂತಹ ವ್ಯಕ್ತಿತ್ವ ಅವರದ್ದು. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದಂತಹ ರಾಜಕುಮಾರ್ ರವರು ಒಂದೊಂದು ಚಿತ್ರಗಳ ಮೂಲಕ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನ ಮನದಾಳದಲ್ಲಿ ನೆಲೆಸಲು ಪ್ರಾರಂಭಿಸಿದರು.
ಕಾರಣ ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ ಪಾತ್ರವಾಗಲೀ ಐತಿಹಾಸಿಕ ಪಾತ್ರವೇ ಆಗಲಿ ಅಥವಾ ಆಧುನಿಕ ಪಾತ್ರವೆ ಆಗಲಿ ಯಾವುದೇ ರೀತಿಯ ಪಾತ್ರವನ್ನು ಕೂಡ ಪರಕಾಯ ಪ್ರವೇಶ ಮಾಡಿದಂತೆ ನಟಿಸುವ ನಟ ಎಂದರೆ ಅದು ಖಂಡಿತವಾಗಿಯೂ ರಾಜ್ ಕುಮಾರ್ ರವರು. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಂತಹ ಏಕೈಕ ಭಾರತೀಯ ಸೂಪರ್ ಸ್ಟಾರ್ ಎಂದರೆ ಅದು ಖಂಡಿತವಾಗಿಯೂ ನೀವು ಹೆಮ್ಮೆಯಿಂದ ಹೇಳಬೇಕಾದ ಹೆಸರು ರಾಜಕುಮಾರ್ ಎಂದು. ಅದಕ್ಕಾಗಿ ಅವರನ್ನು ಗಾನಗಂಧರ್ವ ಎಂದು ಕರೆಯಲಾಗುತ್ತದೆ. ಅಣ್ಣಾವ್ರಿಗೆ ಪದ್ಮಭೂಷಣ ಅವಾರ್ಡ್ ಅನ್ನು ಕೂಡ 1983 ರಲ್ಲಿ ನೀಡಲಾಯಿತು.
ಇನ್ನು ನಿಮಗೊಂದು ವಿಷಯ ಗೊತ್ತಾ ಸ್ನೇಹಿತರೆ ಅಣ್ಣಾವ್ರು ನೂರು ಸಿನಿಮಾ ಆದಮೇಲೆ ಕೂಡ ಮಾಡಿಸಿದಂತಹ ಸಂಭಾವನೆ ಎಷ್ಟು ಗೊತ್ತಾ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಎಂದರೆ ಅದು ನಮ್ಮ ಅಣ್ಣಾವ್ರು. ಇನ್ನು ಅಣ್ಣಾವ್ರು ನೂರು ಚಿತ್ರ ಮುಗಿದ ಮೇಲೂ ಕೂಡ ಪಡೆಯುತ್ತಿದ್ದಂತೆ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಅಣ್ಣ ಅವರು ನೂರು ಚಿತ್ರ ಮುಗಿದ ಮೇಲೆ ಕೂಡ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಇದೆ ವಿಷಯದ ಮೂಲಕ ನಿಮಗೆ ಅಣ್ಣಾವ್ರು ಹಣಕ್ಕಾಗಿ ಅಲ್ಲ ತಮ್ಮ ಕಲಾ ಆರಾಧನೆಗಾಗಿ ನಟನೆ ಮಾಡುತ್ತಿದ್ದರು ಎಂದು ತಿಳಿದು ಬರುತ್ತದೆ. ಅದಕ್ಕಾಗಿಯೇ ಅಲ್ಲವೇ ಸ್ನೇಹಿತರೇ ಅಣ್ಣಾವ್ರನ್ನು ಕಲಾತಪಸ್ವಿ ಎಂದು ಕರೆಯುವುದು.