ಖ್ಯಾತ ಫುಟ್ಬಾಲ್ ಆಟಗಾರ ಮೆಸ್ಸಿ ಕಣ್ಣೀರು ಹಾಕಿ ಒರೆಸಿ ಬಿಸಾಡಿದ ಟಿಶ್ಯೂ ಪೇಪರ್ ಅನ್ನು ಸೇಲ್ ಗೆ ಇಟ್ಟರು, ಎಷ್ಟು ಕೋಟಿಯಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯರು ಕ್ರಿಕೆಟ್ ಅಂದರೆ ಪ್ರಾಣ ಬಿಡುತ್ತಾರೆ ಆದರೆ ಫುಟ್ಬಾಲ್ ಜ್ಞಾನವನ್ನು ಹೊಂದಿರುವ ಕಡಿಮೆ. ಆದರೆ ಫುಟ್ಬಾಲ್ ಗೊತ್ತಿಲ್ಲದಿದ್ದವರಿಗೆ ಕೂಡ ಲಿಯೋನಲ್ ಮೆಸ್ಸಿ ಅವರ ಕುರಿತಂತೆ ಗೊತ್ತಿರುತ್ತದೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಅರ್ಜೆಂಟಿನಾದ ಖ್ಯಾತ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಅವರು 21ವರ್ಷಗಳಿಂದ ಇದ್ದಂತಹ ಬಾರ್ಸಲೋನ ತಂಡವನ್ನು ಇತ್ತೀಚೆಗಷ್ಟೇ ಬಿಟ್ಟು ನಿರ್ಗಮಿಸಿದ್ದಾರೆ. 2004 ರಿಂದ ಇತ್ತೀಚಿಗೆ ವರೆಗೂ ಬಾರ್ಸಿಲೋನಾ ತಂಡದಲ್ಲಿ ಪ್ರಮುಖ ಆಟಗಾರರಾದ ಕಾಣಿಸಿಕೊಂಡಿದ್ದರು.

ಆದರೆ ಇತ್ತೀಚೆಗೆ ಅವರ ಕಾಂಟ್ರಾಕ್ಟ್ ಮುಗಿದು ಮತ್ತೊಂದು ಖ್ಯಾತ ಫುಟ್ಬಾಲ್ ಸಂಸ್ಥೆಯಾದಂತಹ ಪ್ಯಾರಿಸ್ ಸೈಂಟ್ ಜರ್ಮನ್ ತಂಡಕ್ಕೆ ಸೇರಿಕೊಂಡಿದ್ದಾರೆ. ಬಾರ್ಸಿಲೋನಾ ತಂಡದ ಪ್ರಮುಖ ಬಲವಾಗಿದಂತಹ ಮೆಸ್ಸಿ ಅವರನ್ನು ಕಳೆದುಕೊಂಡಂತಹ ಅಭಿಮಾನಿಗಳು ಈಗಾಗಲೇ ಸಾಕಷ್ಟು ದುಃಖದಲ್ಲಿದ್ದರೆ. ಇನ್ನು ಲಿಯೋನೆಲ್ ಮೆಸ್ಸಿ ಅವರು ವೇದಿಕೆಯಲ್ಲಿ ವಿದಾಯದ ಭಾಷಣವನ್ನು ಹೇಳಬೇಕಾದರೆ ಸಾಕಷ್ಟು ಭಾವುಕರಾಗಿದ್ದರು. ಅವರು ಭಾವುಕರಾಗಿ ಭಾಷಣ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಸಮಯದಲ್ಲಿ ಲಿಯೊನೆಲ್ ಮೆಸ್ಸಿ ಬಿಕ್ಕಿಬಿಕ್ಕಿ ಅತ್ತಿದ್ದರು. ಅತ್ತಾಗ ಟಿಶ್ಯು ಪೇಪರ್ ಒಂದನ್ನು ಯೂಸ್ ಮಾಡಿದ್ದರು.

ಈಗ ಸುದ್ದಿ ಮಾಡುತ್ತಿರುವುದು ಲಿಯೋನಲ್ ಮೆಸ್ಸಿ ಪಿಎಸ್ಜಿ ತಂಡಕ್ಕೆ ಸೇರಿದ್ದಲ್ಲ ಅದರ ಬದಲಾಗಿ ಅವರು ಬಳಸಿದಂತಹ ಟಿಶ್ಯೂ ಪೇಪರ್ ಸಾಕಷ್ಟು ಸದ್ದು ಮಾಡುತ್ತಿದೆ. ಹೌದು ಸ್ನೇಹಿತರೆ ಲಿಯೋನಲ್ ಮೆಸ್ಸಿ ಅವರು ಅತ್ತಿದ್ದಾಗ ಬಳಸಿದಂತಹ ಟಿಶ್ಯೂ ಪೇಪರನ್ನು ಈಗ ಆನ್ಲೈನ್ ನಲ್ಲಿ ಒಂದು ಮಿಲಿಯನ್ ಡಾಲರ್ ಗೆ ಹರಾಜಿಗೆ ಇದೆ ಎಂಬುದು ಎಲ್ಲರಿಗೂ ಅಚ್ಚರಿ ಪಡಿಸಿರುವಂತೆ ವಿಷಯ. ಕೇವಲ ಲಿಯೋನೆಲ್ ಮೆಸ್ಸಿ ಅತ್ತಿರುವ ಟಿಶ್ಯೂ ಪೇಪರ್ ಗೆ ಇಷ್ಟೊಂದು ಬೆಲೆ ಇರಬೇಕಾದರೆ ಅಭಿಮಾನಿಗಳು ಅವರನ್ನು ಎಷ್ಟು ಪ್ರೀತಿಸುತ್ತಿರಬೇಕೆಂಬುದು ನೀವೆ ಲೆಕ್ಕ ಹಾಕಿ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav