ರೆಡಿಯಾಗುತ್ತಿದೆ ಚಿನ್ನದ ಹುಡುಗನ ಬಯೋಪಿಕ್, ಸ್ವತಃ ಯಾರು ನಟಿಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ ನೀರಜ್, ಯಾರು ಆ ನಟ ಗೊತ್ತಾ??

ನಮಸ್ಕಾರ ಸ್ನೇಹಿತರೇ ನೀರಜ್ ಚೋಪ್ರಾ ದೇಶದ ಹೆಮ್ಮೆಯ ಯುವಕ. ಟೋಕಿಯೋ ಓಲಂಪಿಕ್ಸ್ ನಲ್ಲಿ ಮೊಟ್ಟ ಮೊದಲ ಬಾರಿಗೆ ದೇಶಕ್ಕೆ ಚಿನ್ನ ಗೆದ್ದು ತಂದು ಕೊಟ್ಟ ನೀರಜ್ ಚೋಪ್ರಾ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಈ ವಾರಿಯ ಟೋಕಿಯೋ ಓಲಂಪಿಕ್ಸ್ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಏಕೆಂದರೆ ಈ ಬಾರಿ ಭಾಗವಹಿಸಿದ್ದ ದೇಶದ ಎಲ್ಲಾ ಅಥ್ಲೆಟಿಕ್ಸ್ ಗಳೂ ಕೂಡ ಅಪ್ರತಿಮ ಸಾಧಕರು. ಅವರಲ್ಲಿ ನೀರಜ್ ಚೋಪ್ರಾ ತಮ್ಮ ಸಾಮರ್ಥ್ಯವನ್ನು ಸಾಧಿಸಿಯೂ ತೋರಿಸಿದ್ದಾರೆ.

ದೇಶದಲ್ಲಿ ತಮ್ಮ ಅದ್ಭುತ ಸಾಧನೆಯ ಮೂಲಕ ಮನೆ ಮಾತಾಗಿರುವ ನೀರಜ್ ಚೋಪ್ರಾ ಇದೀಗ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡು ಜನರನ್ನು ರಂಜಿಸಲಿದ್ದಾರೆ. ಅರೇ, ನೀರಜ್ ನಟಿಸುತ್ತಾರಾ ಎಂದು ಶಾಖ್ ಆಗ್ಬೇಡಿ. ಈ ಚಿತ್ರ ನೀರಜ್ ಅವರ ಜೀವನ ಕಥೆಯನ್ನು ಒಳಗೊಂಡ ಚಿತ್ರ. ಇದಕ್ಕೆ ನೀರಜ್ ಪಾತ್ರದಲ್ಲಿ ಯಾರು ನಾಯಕರಾಗುತ್ತಾರೆ ಅನ್ನುವುದೇ ಇಲ್ಲಿನ ವಿಶೇಷ.

ನೀರಜ್ ಚೋಪ್ರಾ ಅವರ ಜೀವನ ಕಥೆಯನ್ನು ಆಧರಿಸಿದ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವವರು, ನಿರ್ಮಾಪಕ ಅರುಣ್ ರೈ ತೋಡಾರ್. ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ಈಗಾಗಲೇ ದಕ್ಷಿಣ ಕನ್ನಡ ಭಾಗದ ಹೆಮ್ಮೆಯ ಆಟ ಕಂಬಳದ ಬಗ್ಗೆ ’ಬಿರ್ದದ್ ಕಂಬುಲ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದಾದ ಬಳಿಕ ನೀರಜ್ ಚೋಪ್ರಾ ಅವರ ಬಗ್ಗೆ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿ ತೋರಿಸಿದ್ದಾರೆ ಅರುಣ್ ರೈ. 2018 ರ ಸಂದರ್ಶನವೊಂದರಲ್ಲಿ ತನ್ನ ಮೇಲೆ ಚಿತ್ರ ಮಾಡುವುದಾದರೆ ಅದರಲ್ಲಿ ಅಕ್ಷಯ್ ಕುಮಾರ್ ಅಥವಾ ರಣದೀಪ್ ಹೂಡಾ ನಾಯಕರಾಗಿ ನಟಿಸಿದರೆ ಚೆನ್ನಾಗಿರುತ್ತದೆ ಎಂದು ನೀರಜ್ ಚೋಪ್ರಾ ಉತ್ತರಿಸಿದ್ದರು. ಇನ್ನು ಅರುಣ್ ರೈ ಯಾರನ್ನು ನಾಯಕರಾಗಿ ಆಯ್ಕೆ ಮಾಡುತ್ತಾರೆ ಮತ್ತಿತರ ವಿಷಯಗಳು ಇನ್ನೂ ವರದಿಯಾಗಬೇಕಷ್ಟೆ.

Post Author: Ravi Yadav