ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮನೆಯಿಂದ ಬಂದ ಮೇಲೆ ಎಡವಟ್ಟು ಮಾಡಿಕೊಂಡು, ಮತ್ತೆ ಲೈವ್ ಗೆ ಬಂದು ಕ್ಷಮೆ ಕೇಳಿದ ಅರವಿಂದ್. ಯಾಕೆ ಗೊತ್ತಾ?

1

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಪಡೆದು ಕೊಂಡಿರುವ ಅರವಿಂದ್ ರವರು ನಿಜಕ್ಕೂ ಬಿಗ್ ಬಾಸ್ ಕಾರ್ಯಕ್ರಮ ಸೋತಿದ್ದರು ಕೂಡ ಗೆಲುವು ಅವರದ್ದೇ ಎಂದರೆ ತಪ್ಪಾಗಲಾರದು ಯಾಕೆಂದರೆ ಬಿಗ್ ಬಾಸ್ ಕಿರೀಟ ಕ್ಕಿಂತಲೂ ಹೆಚ್ಚಾಗಿ ಯಾರು ಎಂದು ಕೂಡ ಪರಿಚಯ ಇಲ್ಲದೆ ಇದ್ದರೂ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಗಳಿಸುವುದರಲ್ಲಿ ಅರವಿಂದ್ ಯಶಸ್ವಿಯಾಗಿದ್ದಾರೆ. ಇನ್ನು ಈ ಸಮಯದಲ್ಲಿ ಮಂಜು ಪಾವಗಡ ರವರು ಅರವಿಂದ್ ಅವರನ್ನು ಸೋಲಿಸಿದ್ದಾರೆ ಎಂದರೆ ನಿಜಕ್ಕೂ ಮಂಜು ಪಾವಗಡ ರವರು ಕೂಡ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ ಬೇಕು ಅಲ್ಲವೇ.

ಈಗ ಯಾಕೆ ಈ ವಿಷಯ ಎಂದುಕೊಂಡಿರಾ, ಹೀಗೆ ಅಭಿಮಾನಿಗಳನ್ನು ಗಳಿಸಿದ ಬಳಿಕ ಅರವಿಂದ್ ರವರು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡುವಾಗ ಒಂದು ಎಡವಟ್ಟು ಮಾಡಿಬಿಟ್ಟಿದ್ದಾರೆ. ಇವರು ಹೀಗೆ ನಡೆದುಕೊಂಡ ತಕ್ಷಣ ಅಭಿಮಾನಿಗಳು ಗರಂ ಆಗಿ ಅರವಿಂದ್ ಅವರನ್ನು ತರಾಟೆಗೆ ತೆಗೆದು ಕೊಂಡರು ಹಾಗೂ ಕಾಮೆಂಟ್ ಬಾಕ್ಸ್ನಲ್ಲಿ ಮನಬಂದಂತೆ ಕಮೆಂಟ್ ಮಾಡಲು ಆರಂಭಿಸಿದರು, ತನ್ನ ತಪ್ಪನ್ನು ಅರಿತುಕೊಂಡು ಅರವಿಂದ್ ರವರು ಕೂಡಲೇ ಮತ್ತೆ ಲೈವ್ ಗೆ ಬಂದು ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಹಾಗೂ ನಡೆಯುತ್ತಿರುವ ವಿಚಾರಗಳನ್ನು ಎಂಬುದರ ಸಂಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ

ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮದ ಬಳಿಕ ಲೈವ್ ಗೆ ಬಂದ ಅರವಿಂದ್ ರವರು ಮಾತನಾಡುವಾಗ ಸಂಪೂರ್ಣ ಆಂಗ್ಲ ಭಾಷೆಯಲ್ಲಿ ಮಾತುಗಳನ್ನು ಆಡಿದ್ದರು, ಇದರಿಂದ ಕನ್ನಡದ ಅಭಿಮಾನಿಗಳು ಅರವಿಂದ್ ರವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಉತ್ತರ ನೀಡಿದ ಅರವಿಂದ್ ರವರು ನನ್ನದು ತಪ್ಪಾಗಿದ್ದು ನಾನು ಲೈವ್ ಗೆ ಬಂದದ್ದು ಒಂದು ಬೈಕ್ ರೇಸ್ಗೆ ಸಂಬಂಧಿತ ಪೇಜ್ ನಲ್ಲಿ ಅಲ್ಲಿ ಎಲ್ಲಾ ಭಾಷಿಕರು ಇರುತ್ತಾರೆ ಅದಕ್ಕೆ ನಾನು ಇಂಗ್ಲೀಷ್ ಬಳಸಿದೆ, ದಯವಿಟ್ಟು ತಪ್ಪಾಗಿದೆ ಕ್ಷಮಿಸಿ ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯುವುದಿಲ್ಲ, ಅದು ಕೇವಲ ಎಲ್ಲ ಭಾಷೆಯ ಜನರು ಇರುವ ಕಾರಣ ನಾನು ಆಂಗ್ಲಭಾಷೆ ಬಳಸಿದೆ ಎಂದು ಕ್ಷಮೆ ಕೇಳಿದ್ದಾರೆ.