ಪ್ರತಿಷ್ಠಿತ ಮಾಧ್ಯಮ ಪಬ್ಲಿಕ್ ಟಿವಿ ಓನರ್ ರಂಗಣ್ಣ ಅಲ್ಲ, ಮತ್ಯಾರು ಗೊತ್ತೇ?? ಹಿಂದೆ ಇರುವ ಹೂಡಿಕೆದಾರರೂ ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೊದಲು ಕೇವಲ ದಿನಕ್ಕೆ ಅರ್ಧ ತಾಸು ಮಾತ್ರ ಎಂಬಂತಿದ್ದ ನ್ಯೂಸುಗಳು ಈಗ ದಿನವೀಡಿ ಪ್ರಸಾರವಾಗುತ್ತಿವೆ. ಮೊದಲು ಕನ್ನಡದಲ್ಲಿ ಕೇವಲ ಎರಡು ನ್ಯೂಸ್ ಚಾನೆಲ್ ಗಳು ಇದ್ದವು. ಈಗ ನಾಯಿಕೊಡೆಗಳಂತೆ ನ್ಯೂಸ್ ಚಾನೆಲ್ ಗಳದ್ದೇ ಕಾರುಬಾರು. ಕೆಲವು ನ್ಯೂಸ್ ಚಾನೆಲ್ ಗಳು ಬಂದಷ್ಟೇ ವೇಗವಾಗಿ ಮುಚ್ಚಿಕೊಂಡಿದ್ದರೂ, ಕೆಲವೊಂದು ನ್ಯೂಸ್ ಚಾನೆಲ್ ಗಳು ಮಾತ್ರ ಇಂದಿಗೂ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಪಡೆದಿವೆ. ಅಂತಹ ನ್ಯೂಸ್ ಚಾನೆಲ್ ಗಳಲ್ಲಿ ಪಬ್ಲಿಕ್ ಟಿವಿ ಸಹ ಒಂದು.

ಪಬ್ಲಿಕ್ ಟಿವಿ ಎಂದರೇ ಮೊದಲು ನೆನಪಾಗೋದು ಆ ಚಾನೆಲ್ ನ ಪ್ರಧಾನ ಸಂಪಾದಕ ಎಚ್.ಆರ್.ರಂಗನಾಥ್ ಅಲಿಯಾಸ್ ರಂಗಣ್ಣ. ಟ್ರೋಲ್ ಪೇಜ್ ನವರಿಗಂತೂ ಪಬ್ಲಿಕ್ ಟಿವಿ ರಂಗಣ್ಣ, ಡಿಂಪಲ್ ದಿವ್ಯಜ್ಯೋತಿ, ಅರುಣ್ ಬಡಿಗೇರ್ ಅಂದರೇ ಪಂಚಪ್ರಾಣ. ಆ ಕಾಮಿಡಿ ವಿಡೀಯೋಗಳನ್ನ ನೀವು ಸಹ ನೋಡಿರಬಹುದು. ಇನ್ನು ಅಚ್ಚರಿ ಅಂದರೇ ಪಬ್ಲಿಕ್ ಟಿವಿಯ ಓನರ್ ಅಂದರೇ ರಂಗಣ್ಣ ಎಂದೇ ಹಲವಾರು ಜನ ತಿಳಿದುಕೊಂಡಿದ್ದಾರೆ. ಆದರೇ ಅಸಲಿಗೆ ಪಬ್ಲಿಕ್ ಟಿವಿಯ ಓನರ್ ರಂಗನಾಥ್ ಒಬ್ಬರೇ ಅಲ್ಲ, ಬೇರೆಯವರು ಇದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಬನ್ನಿ ಪಬ್ಲಿಕ್ ಟಿವಿಯ ಓನರ್ ಯಾರು ಎಂಬುದನ್ನ ತಿಳಿಯೋಣ ಬನ್ನಿ.

ಪಬ್ಲಿಕ್ ಟಿವಿಯ ಮೊದಲ ಓನರ್ ಮನೋಹರ್ ಗೋವಿಂದ ಸ್ವಾಮಿ ನಾಯ್ಡು. ಇವರು ಕನ್ನಡದ ಖ್ಯಾತ ಆಡಿಯೋ ಸಂಸ್ಥೆ ಆದ ಲಹರಿ ಸಂಸ್ಥೆಯ ಹಾಗೂ ಲಹರಿ ವೇಲುರವರ ಸಹೋದರ. ಇವರು ಪಬ್ಲಿಕ್ ಟಿವಿಯಲ್ಲಿ 25% ಶೇರು ಹೊಂದಿದ್ದಾರೆ. ಇನ್ನು ಪಬ್ಲಿಕ್ ಟಿವಿಯ ಎರಡನೇ ಓನರ್ ಕನ್ನಡದ ಖ್ಯಾತ ನಿರ್ಮಾಪಕ ಹಾಗೂ ನಟ ರಾಕ್ ಲೈನ್ ವೆಂಕಟೇಶ್. ಇವರು ಮುನಿರತ್ನರವರ ಬೀಗರು ಸಹ. ಇವರು ಸಹ ಪಬ್ಲಿಕ್ ಟಿವಿಯಲ್ಲಿ 24% ಶೇರ್ ಹೊಂದಿದ್ದಾರೆ. ಇನ್ನು ಪಬ್ಲಿಕ್ ಟಿವಿಯಲ್ಲಿ ರಂಗಣ್ಣ 51% ಶೇರು ಹೊಂದಿದ್ದಾರೆ.

ಸದ್ಯ ಟಿ.ಆರ್.ಪಿ ರೇಸ್ ನಲ್ಲಿ ಪಬ್ಲಿಕ್ ಟಿವಿ ಎರಡು, ಮೂರನೇ ಸ್ಥಾನದಲ್ಲಿದ್ದು , ಮೊದಲ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸುತ್ತಿದೆ. ರಾತ್ರಿ ಒಂಬತ್ತು ಘಂಟೆಗೆ ಬರುವ ಬಿಗ್ ಬುಲೆಟಿನ್ ನಲ್ಲಿ ಆ ಶೋವನ್ನು ರಂಗನಾಥ್ ನಡೆಸಿಕೊಡುವ ಶೈಲಿಗೆ ಹಲವಾರು ವೀಕ್ಷಕರು ಫಿದಾ ಆಗಿದ್ದಾರೆ. ಆ ಶೋನಿಂದಲೇ ಪಬ್ಲಿಕ್ ಟಿವಿಗೆ ಹೆಚ್ಚು ಟಿ.ಆರ್.ಪಿ ತಂದುಕೊಡಬಹುದು ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ. ವಿಶೇಷ ಸೂಚನೆ: ಈ ಮಾಹಿತಿಯು ವೆಬ್ ನಲ್ಲಿ ಕಂಡು ಬಂದಿದ್ದು, ಅಧಿಕೃತವಾಗಿ ವಾಹಿನಿ ಯಾವುದೇ ಮಾಹಿತಿ ನೀಡಿಲ್ಲ.

Post Author: Ravi Yadav