ಅವಕಾಶ ಸಿಕ್ಕ ಕೂಡಲೇ ಕಿರಿಕ್ ಶುರು ಮಾಡಿದರೇ ಕೃತಿ ಶೆಟ್ಟಿ, ಸಿನಿಮಾ ಸೆಟ್ ನಲ್ಲಿ ಮತ್ತೊಂದು ಎಡವಟ್ಟು, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಚಿತ್ರರಂಗಕ್ಕೆ ಹೊಸ ಮುಖಗಳ ಆಗಮನವಾಗುತ್ತಿದೆ. ಕೆಲವರು ಒಂದೇ ಚಿತ್ರದಲ್ಲಿ ಹಿಟ್ ಆದ್ರೆ ಇನ್ನೂ ಕೆಲವರು ಒಂದೇ ಚಿತ್ರಮಾಡಿ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಾರೆ. ಬರಿ ಕನ್ನಡ ಚಿತ್ರರಂಗ ಮಾತ್ರವಲ್ಲದೆಇತರ ಭಾಷೆಗಳಲ್ಲಿಯೂ ,ಕೂಡ ಹೊಸ ನಟ ನಟಿಯರು ಬಂದು ಹೋಗುವುದು ಸಹಜ. ಇಲ್ಲಿ ಅವರುಗಳ ಅದೃಷ್ಟ ಪರೀಕ್ಷೆ ನಡೆಯುತ್ತದೆ ಎಂದೇ ಹೇಳಬಹುದು.

ಕರಾವಳಿ ಮೂಲದ ನಟಿ ಕೃತಿ ಶೆಟ್ಟಿ. ಇವರು ತಮ್ಮ ಮೊದಲ ಚಿತ್ರದಲ್ಲಿಯೇ ಸಕ್ಕತ್ ಹಿಟ್ ಆದವರು. ಟಾಲಿವುಡ್ ನಲ್ಲಿ ಒಂದು ಚಿತ್ರದಲ್ಲಿ ನಟಿಸಿ ನಟನೆಗೆ ಸೈ ಎನಿಸಿಕೊಂಡರು. ಕೃತಿ ಶೆಟ್ಟಿ ನಟಿಸಿದ ಮೊದಲ ಸಿನಿಮಾ ‘ಉಪ್ಪೆನ’. ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಸೋದರ ಅಳಿಯ ವೈಷ್ಣವ್ ತೇಜ್‌ ಜೊತೆ ಪರದೆ ಹಂಚಿಕೊಂಡಿದ್ದರು ಕೃತಿ. ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಉಪ್ಪೇನ ಸಕ್ಕತ್ ಹಿಟ್ ಫಿಲ್ಮ್ ಎನಿಸಿಕೊಂಡಿತ್ತು.

ಈ ಚಿತ್ರದ ನಂತರ ಕೃತಿ ಅವರಿಗೆ ಸಿನಿಮಾ ಆಫರ್ ಗಳ ಸುರಿಮಳೆಯೇ ಬಂದಿತ್ತು. ಬರಿ ಟಾಲಿವುಡ್ ನಲ್ಲಿ ಮಾತ್ರವಲ್ಲದೇ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು ಕೃತಿ. ಕೃತಿ ಇದೀಗ ನಟಿಸುತ್ತಿದ್ದ ಚಿತ್ರ ತಮಿಳಿನಲ್ಲಿ. ತಮಿಳಿನ ನಿರ್ದೇಶಕ ಎಸ್. ಲಿಂಗುಸ್ವಾಮಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಹಿರೋ ಆಗಿ ಬಣ್ಣ ಹಚ್ಚಿದವರು ’ಇಸ್ಮಾರ್ಟ್ ಶಂಕರ್’ ರಾಮ್. ಜುಲೈ ತಿಂಗಳಿನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಹಾಗೆಯೆ ಈ ಚಿತ್ರಕ್ಕೆ ಕೃತಿ ಶೆಟ್ಟಿ 50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರಂತೆ.

ಈ ಚಿತ್ರದ ಚಿತ್ರೀಕರಣದ ವೇಳೆ ಕೃತಿ ಶೆಟ್ಟಿ ಕಿರಿಕ್ ಮಾಡಿಕೊಂಡಿರುವ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕರು ಹೇಳಿದ ಎಮೋಶನಲ್ ಸೀನ್ ಒಂದಕ್ಕೆ ಕೃತಿ ಸರಿಯಾಗಿ ಅಭಿನಯಿಸಲಿಲ್ಲವಂತೆ. ನಿರ್ದೇಶಕ ಲಿಂಗುಸ್ವಾಮಿಗೆ ಬೇಕಾದ ಒಂದು ಎಕ್ಸ್ ಪ್ರೆಶನ್ ನ್ನು ಕೃತಿ ಕೊಡದೆ ಸಾಕಷ್ಟು ರಿಪೀಟ್ ಟೇಕ್ ತೆಗೆದುಕೊಂಡರಂತೆ. ಇದರಿಂದ ನಿರ್ದೇಶಕರಿಗೆ ಕಿರಿಕಿರಿಯಾಗಿದೆ. ಇನ್ನು ಈ ಚಿತ್ರೀಕರಣ ಯಾವ ರೀತಿ ಮುಂದುವರೆಯಬಹುದು ಎಂಬುದೇ ಜನರ ಕುತೂಹಲ.

Post Author: Ravi Yadav