ಸುದೀಪ್ ಬೇಕೆಂದು ಮಂಜು ರವರನ್ನು ಗೆಲ್ಲಿಸಿದ್ದಾರೆ, ಅದಕ್ಕೆ ಕಾರಣ ಕೂಡ ಇದೆ ಎಂದ ಅರವಿಂದ್ ಅಭಿಮಾನಿಗಳು, ಆ ಕಾರಣವಾದರು ಏನಂತೆ ಗೊತ್ತೇ??
ಸುದೀಪ್ ಬೇಕೆಂದು ಮಂಜು ರವರನ್ನು ಗೆಲ್ಲಿಸಿದ್ದಾರೆ, ಅದಕ್ಕೆ ಕಾರಣ ಕೂಡ ಇದೆ ಎಂದ ಅರವಿಂದ್ ಅಭಿಮಾನಿಗಳು, ಆ ಕಾರಣವಾದರು ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೊನೆಗೂ ನೂರಕ್ಕೂ ಹೆಚ್ಚಿನ ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಈಗಾಗಲೇ ಮುಕ್ತಾಯವನ್ನು ಕಂಡು ವಿಜೇತರ ಹೆಸರು ಕೂಡ ಘೋಷಣೆಯಾಗಿದೆ. ಮಂಜು ಪಾವಗಡ ಮೊದಲನೆ ಸ್ಥಾನವನ್ನು ಗೆದ್ದರೆ ಇತ್ತ ಬೈಕ್ ರೇಸರ್ ಅರವಿಂದ ಕೆಪಿ ಎರಡನೇ ಸ್ಥಾನವನ್ನು ಗೆದ್ದಿದ್ದಾರೆ. ಬಿಗ್ ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿ ಮಂಜು ಪಾವಗಡ ರವರು ಹೆಚ್ಚಾಗಿ ದಿವ್ಯ ಸುರೇಶ್ ಅವರ ಜೊತೆಗೆ ಕಾಣಿಸಿಕೊಂಡಿದ್ದು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು.
ನಂತರದ ದಿನಗಳಲ್ಲಿ ಮಂಜು ಪಾವಗಡ ರವರು ಬಿಗ್ಬಾಸ್ ಸೆಕೆಂಡಿನಿಂದ ಮೂಲಕ ಈ ತಪ್ಪನ್ನು ಸರಿಪಡಿಸಿಕೊಂಡು ಎಲ್ಲರೊಂದಿಗೂ ಕಾಣಿಸಿಕೊಳ್ಳುತ್ತಾರೆ. ಇನ್ನು ಯಾವುದೇ ಮನೋರಂಜನೆ ಹಿನ್ನೆಲೆಯಿಂದ ಬಂದಿರುವ ಅರವಿಂದ ಕೆಪಿ ಅವರು ಕೂಡ ಬಿಗ್ಬಾಸ್ ಮನೆಯಲ್ಲಿ ತಮ್ಮ ಪ್ರದರ್ಶನದ ಮೂಲಕ ಜನರ ಮನಗೆದ್ದು ಸಾಕಷ್ಟು ಜನಪ್ರಿಯರಾಗುತ್ತಾರೆ. ಇನ್ನು ಬಿಗ್ ಬಾಸ್ ಗೆಲ್ಲಲು ಕೂಡ ಇವರಿಬ್ಬರ ನಡುವೆ ಸಾಕಷ್ಟು ಹತ್ತಿರದ ಪೈಪೋಟಿ ಇತ್ತು. ಮಂಜು ಪಾವಗಡ ರವರು ಮೊದಲನೇ ಸ್ಥಾನದಲ್ಲಿ 45 ಲಕ್ಷ ಮತವನ್ನು ಗೆದ್ದರೆ, ಇಟ್ಟ ಅರವಿಂದ ಕೆಪಿ ಯವರು 43 ಲಕ್ಷ ಮತಗಳನ್ನು ಗೆದ್ದಿದ್ದಾರೆ.
ಇವರಿಬ್ಬರ ನಡುವೆ ಕೇವಲ ಎರಡು ಲಕ್ಷ ಮತಗಳ ಅಂತರ ಮಾತ್ರ ಬಾಕಿ ಇತ್ತು. ಆದರೆ ಈಗ ಅರವಿಂದ್ ಕೆಪಿ ರವರ ಅಭಿಮಾನಿಗಳು ಮೊದಲ ಸ್ಥಾನದ ಆಯ್ಕೆಯಲ್ಲಿ ಮೋಸವಾಗಿದೆ ಮಂಜು ಪಾವಗಡ ಗೆಲ್ಲಲು ಬೇರೆ ಕಾರಣವಿದೆ ಎಂದು ದೂರಿದ್ದಾರೆ. ಹೌದು ಸ್ನೇಹಿತರೆ ಅರವಿಂದ್ ರವರ ಅಭಿಮಾನಿಗಳ ಪ್ರಕಾರ ನಿರೂಪಕರಾಗಿರುವ ಕಿಚ್ಚ ಸುದೀಪ್ ಹಾಗೂ ಮಂಜು ಪಾವಗಡ ರವರ ಜಾತಿ ಒಂದೇ ಆಗಿರುವ ಕಾರಣದಿಂದಾಗಿ ಮಂಜು ಪಾವಗಡ ರವರನ್ನು ಗೆಲ್ಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, ಈ ಮೂಲಕ ಇದೀಗ ಕ್ಯಾಸ್ಟ್ ವಿಚಾರ ಬಿಗ್ ಬಾಸ್ ಮನೆಯನ್ನು ಕೂಡ ತಲುಪಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.