ಇಷ್ಟೆಲ್ಲ ಸಾಧನೆ ಮಾಡಿದ್ದರೂ ಅರವಿಂದ್ ರವರ ಸೋಲಿಗೆ ಕಾರಣವಾದದ್ದು ಆ ವ್ಯಕ್ತಿ ಮಾತ್ರ, ಯಾರಂತೆ ಗೊತ್ತಾ??
ಇಷ್ಟೆಲ್ಲ ಸಾಧನೆ ಮಾಡಿದ್ದರೂ ಅರವಿಂದ್ ರವರ ಸೋಲಿಗೆ ಕಾರಣವಾದದ್ದು ಆ ವ್ಯಕ್ತಿ ಮಾತ್ರ, ಯಾರಂತೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಯಾರು ಎಂದು ಗುರುತು ಪರಿಚಯ ಇಲ್ಲದೆ ಇದ್ದರೂ ಕೂಡ ಬಿಗ್ ಬಾಸ್ ಮನೆಯ ಒಳಗಡೆ ಹೋಗಿ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಗಳಿಸಿರುವ ಅರವಿಂದ್ ರವರ ಆಟದ ಕುರಿತು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಎನ್ನಿಸುತ್ತದೆ. ನೀಡಿರುವ ಶೇಕಡ 90ಕ್ಕೂ ಹೆಚ್ಚು ಟಾಸ್ಕ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ತಾವು ಯಾರು ಎಂದು ಜನಗಳಿಗೆ ತಿಳಿಯದೆ ಇದ್ದರೂ ಕೂಡ ಕೇವಲ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡಿದ್ದರು.
ಅಷ್ಟೇ ಅಲ್ಲದೆ ಬಿಗ್ ಬಾಸ್ ಪಿನಾಲೆ ವರೆಗೂ ಹೋಗಿ ಬಿಗ್ ಬಾಸ್ ಇತಿಹಾಸದಲ್ಲಿಯೇ ಯಾರು ಪಡೆದುಕೊಳ್ಳದ ದಾಖಲೆಯ ರೀತಿಯಲ್ಲಿ ಎಲ್ಲರ ಮನಗೆದ್ದಿದ್ದ ಅರವಿಂದ್ ರವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು, ಗೆಲ್ಲುವ ಎಲ್ಲಾ ಸಾಧ್ಯತೆಗಳು ಇದ್ದರೂ ಕೂಡ ಕೇವಲ ಕೆಲವೇ ಕೆಲವು ಅಂತರದಿಂದ ಅವರು ಸೋಲನ್ನು ಕಂಡಿದ್ದರು. ಮಂಜು ಪಾವಗಡ ರವರು ವಿನ್ನರ್ ಆದರು. ಆದರೆ ಈ ಸಮಯದಲ್ಲಿ ಹೀಗೆ ಇಷ್ಟೆಲ್ಲಾ ಸಾಧನೆ ಮಾಡಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಗಳಿಸಿದ್ದರೂ ಕೂಡ ಅರವಿಂದ್ ಅವರ ಸೋಲಿಗೆ ಕಾರಣ ಏನು ಎಂಬುದನ್ನು ಎಲ್ಲರೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ಅರವಿಂದ್ ರವರು ಭಾರಿ ಜನಪ್ರಿಯತೆ ಪಡೆದುಕೊಂಡ ನಂತರ ಮಂಜು ಪಾವಗಡ ರವರನ್ನು ಮೀರಿಸುವಂತಹ ಜನಪ್ರಿಯತೆ ಪಡೆದಿದ್ದು ಸುಳ್ಳಲ್ಲ, ಆದರೆ ಎರಡನೇ ಇನಿಂಗ್ಸಲ್ಲಿ ಅರವಿಂದ್ ರವರು ಕೊಂಚ ಹಿಂದೆ ಉಳಿದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ, ಅದರಲ್ಲಿಯೂ ಮೊದಲನೇ ಇನಿಂಗ್ಸ್ನಲ್ಲಿ ದಿವ್ಯ ಉರುಡುಗ ರವರ ಜೊತೆ ಕಳೆದ ರೀತಿ ಬಹಳ ಅದ್ಭುತವಾಗಿತ್ತು. ಆದರೆ ದಿನೇ ದಿನೇ ಇದೇ ಹೆಚ್ಚಾಗಿ ದಿವ್ಯ ಉರುಡುಗ ರವರ ಕಡೆಗೆ ಮಾತ್ರ ಆಲೋಚನೆ ಮಾಡಿ ಅರವಿಂದ್ ರವರು ಸೋಲನ್ನು ಕಾಣಬೇಕಾಯಿತು, ಹೌದು ಅರವಿಂದ್ ಹಾಗೂ ದಿವ್ಯ ರವರ ಜೋಡಿ ಎಂದರೆ ಎಲ್ಲರಿಗೂ ಇಷ್ಟ ಆದರೆ ಅದು ತೀರ ಹೆಚ್ಚಾಗಿ ಹೋಯಿತು ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ, ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.