ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ಬಾಸ್ ನಲ್ಲಿ ಸೋತ ತಕ್ಷಣ, ಅರವಿಂದ್ ಹಾಗೂ ದಿವ್ಯ ರವರಿಗೆ ಖುಲಾಯಿಸಿದ ಅದೃಷ್ಟ, ಏನು ಗೊತ್ತಾ??

11

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಇರುವಾಗ ಅರವಿಂದ್ ಹಾಗೂ ದಿವ್ಯ ರವರ ಜೋಡಿಗೆ ಭಾರಿ ಜನಪ್ರಿಯತೆ ಪಡೆದು ಕೊಂಡಿತ್ತು. ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರಿಗೆ ಪ್ರತ್ಯೇಕವಾಗಿ ಪೇಜ್ ಗಳನ್ನು ಸೃಷ್ಟಿಸುವ ಮೂಲಕ ಬೆಂಬಲ ನೀಡಿದ್ದಾರೆ, ಹಾಗೂ ಅದೇ ಸಮಯದಲ್ಲಿ ಇಬ್ಬರು ಜೋಡಿಯ ಕುರಿತು ಟ್ರೋಲ್ಗಳು ಕೂಡ ಹೆಚ್ಚಾಗಿ ಕಂಡು ಬಂದಿದ್ದವು. ಆದರೆ ಜನಪ್ರಿಯತೆ ಕಡಿಮೆ ಅಂತೂ ಇಲ್ಲವೇ ಇಲ್ಲ. ಅದೆಷ್ಟೋ ಜನ ಕೇವಲ ಈ ಜೋಡಿಯನ್ನು ನೋಡುವ ಕಾರಣಕ್ಕಾಗಿ ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದರು ಎಂದರೆ ನೀವು ನಂಬಲೇಬೇಕು.

ಹೀಗೆ ಜೋಡಿಯ ಮೂಲಕ ಜನಪ್ರಿಯತೆ ಪಡೆದುಕೊಂಡ ಅರವಿಂದ್ ಹಾಗೂ ದಿವ್ಯ ಉರುದುಗ ರವರು ಬಹುಶಹ ಅದೇ ಕಾರಣಕ್ಕಾಗಿ ಮಂಜು ಪಾವಗಡ ರವರ ಜೊತೆ ಉಳಿದ ಎರಡು ಸ್ಥಾನಗಳನ್ನು ಟಾಪ್ ಥ್ರೀ ಯಲ್ಲಿ ಪಡೆದು ಕೊಂಡಿದ್ದರು. ಹೀಗೆ ಇಷ್ಟೆಲ್ಲಾ ಜನಪ್ರಿಯತೆ ಗಳಿಸಿದ ಜೋಡಿ ಫೈನಲ್ನಲ್ಲಿ ಸೋಲನ್ನು ಕಂಡಿದೆ ಆದರೆ ಫೈನಲ್ ನಲ್ಲಿ ಸೋತ ಕೆಲವೇ ಕೆಲವು ದಿನಗಳಲ್ಲಿ ಈ ಜೋಡಿಗೆ ಸಿಹಿಸುದ್ದಿ ನೀಡಲು ಕಲರ್ಸ್ ಕನ್ನಡ ವಾಹಿನಿ ತಯಾರಿ ನಡೆಸಿದೆ ಎಂಬ ಸುದ್ದಿ ತಿಳಿದು ಬಂದಿದೆ.

ಹೌದು ಸ್ನೇಹಿತರೇ ಇದೀಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ ದಿವ್ಯ ಹಾಗೂ ಅರವಿಂದ್ ರವರ ಜೋಡಿಗೆ ಇರುವ ಜನಪ್ರಿಯತೆಯನ್ನು ತಾನು ಬಳಸಿಕೊಳ್ಳಲು ಕಲರ್ಸ್ ಕನ್ನಡ ವಾಹಿನಿ ಸಿದ್ಧತೆ ನಡೆಸುತ್ತಿದ್ದು, ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಉತ್ತಮ ಟಿಆರ್ಪಿ ಪಡೆದುಕೊಂಡು ಮುನ್ನುಗ್ಗುತ್ತಿರುವ ರಾಜ ರಾಣಿ ಕಾರ್ಯಕ್ರಮಕ್ಕೆ ಈ ಜೋಡಿಯನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕರೆತರಲು ಎಲ್ಲ ಸಿದ್ಧತೆಗಳನ್ನು ನಡೆಸಿದೆ ಎಂಬುದು ತಿಳಿದು ಬಂದಿದೆ. ಆದರೆ ರಾಜ ರಾಣಿ ಕಾರ್ಯಕ್ರಮದಲ್ಲಿ ಕೇವಲ ಗಂಡ ಹೆಂಡತಿ ಮಾತ್ರ ಇಲ್ಲಿಯವರೆಗೂ ಭಾಗಿಯಾಗಿದ್ದು, ಇವರಿಬ್ಬರು ಮದುವೆಯಾಗದೆ ರಾಜ ರಾಣಿ ಶೋ ಗೆ ಆಯ್ಕೆಯಾಗುತ್ತಾರೇಯೇ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ, ಆದರೆ ಕಲರ್ಸ್ ಕನ್ನಡ ವಾಹಿನಿ ಯಾವುದಾದರೂ ಒಂದು ರೀತಿಯಲ್ಲಿ ಇವರಿಬ್ಬರನ್ನು ಕರೆತರಬೇಕು ಎಂಬುದರ ಆಲೋಚನೆಯಲ್ಲಿ ತೊಡಗಿಕೊಂಡಿರುವುದು ತಿಳಿದುಬಂದಿದೆ. ಇಷ್ಟು ದಿವಸ ನೀವು ಬಿಗ್ ಬಾಸ್ ನಲ್ಲಿ ನೋಡಿದ ಜೋಡಿಯನ್ನು ಇಲ್ಲಿಯೂ ಕೂಡ ನೋಡಲು ಇಷ್ಟಪಡುತ್ತೀರಾ? ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ