ಈ ಬಾರಿಯ ಐಪಿಎಲ್‌ನಲ್ಲಿ ಸಿಕ್ಸರ್ ಚೆಂಡು ಸ್ಟೇಡಿಯಂ ನಿಂದ ಹೊರಹೋದರೆ ಈ ಹೊಸ ನಿಯಮ, ಏನು ರೂಲ್ ಗೊತ್ತಾ??
ಈ ಬಾರಿಯ ಐಪಿಎಲ್‌ನಲ್ಲಿ ಸಿಕ್ಸರ್ ಚೆಂಡು ಸ್ಟೇಡಿಯಂ ನಿಂದ ಹೊರಹೋದರೆ ಈ ಹೊಸ ನಿಯಮ, ಏನು ರೂಲ್ ಗೊತ್ತಾ??
ನಮಸ್ಕಾರ ಸ್ನೇಹಿತರೇ ಎಪ್ರೀಲ್-ಮೇ ತಿಂಗಳಿನಲ್ಲಿ ಕೋರೋನಾ ಕಾರಣಕ್ಕೆ ಅರ್ಧಕ್ಕೆ ಸ್ಥಗಿತವಾಗಿದ್ದ ಐಪಿಎಲ್ ನ ಮುಂದುವರಿದ ಚರಣ ಇದೇ ಸೆಪ್ಟೆಂಬರ್ 19 ರಿಂದ ದುಬೈ, ಯು.ಎ.ಇ, ಅಬುಧಾಬಿಯಲ್ಲಿ ನಡೆಯಲಿದೆ. ಎಲ್ಲಾ ಆಟಗಾರರು ಕಡ್ಡಾಯವಾಗಿ ಎರಡು ಡೋಸ್ ಕೋವಿಶಿಲ್ಡ್ ಲಸಿಕೆಯನ್ನ ಹಾಕಿಸಿಕೊಳ್ಳಬೇಕು ಎಂದು ಬಿಸಿಸಿಐ ಕಡ್ಡಾಯವಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಕಟ್ಟಪಣೆ ಹೊರಡಿಸಿದೆ. ಈ ವೇಳೆ ಬಯೋಬಬಲ್ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದು, ಇದು ವಿದೇಶಿ ಆಟಗಾರರಿಗೆ ವರದಾನವಾಗಲಿದೆ. ಬೇರೆ ದೇಶದ ಸರಣಿಗಳಲ್ಲಿ ಆಡುತ್ತಿರುವ ಆಟಗಾರರು , ಅಲ್ಲಿ ಬಯೋಬಬಲ್ ನಲ್ಲಿದ್ದರೇ, ಅವರು ಅಲ್ಲಿಂದ ನೇರವಾಗಿ ಈ ಬಯೋಬಬಲ್ ಪ್ರವೇಶಿಸಬಹುದು. ಇಲ್ಲಿ ಬಂದು ಕ್ವಾರಂಟೈನ್ ಇರಬೇಕೆಂಬ ನಿಯಮಗಳಿಂದ ವಿನಾಯಿತಿ ಸಿಗಲಿದೆ. ಇದು ಎಷ್ಟೋ ವಿದೇಶಿ ಆಟಗಾರರಿಗೆ ವರದಾನವಾಗಲಿದೆ. ಅದಲ್ಲದೇ ಆಟಗಾರರು ಬಹುಬೇಗ ತಂಡಗಳ ಪರ ಆಡಬಹುದು.
ಇನ್ನು ಪಂದ್ಯಾವಳಿಗೆ ದಿನಗಣನೆ ಹತ್ತಿರವಾಗುತ್ತಿದ್ದಂತಯೇ, ಬಿಸಿಸಿಐ ಹಲವು ವಿನೂತನ ನಿಯಮಗಳನ್ನ ಜಾರಿಗೆ ತರುತ್ತಿದೆ. ಈ ಹಿಂದೆ ಬ್ಯಾಟ್ಸಮನ್ ಸಿಕ್ಸರ್ ಸಿಡಿಸಿದಾಗ, ಚೆಂಡು ಕ್ರೀಡಾಂಗಣದಿಂದ ಹೊರಹೊಗಿದ್ದರೇ, ಆ ಚೆಂಡನ್ನ ಸ್ಯಾನಿಟೈಸ್ ಮಾಡಿ ಮರಳಿ ಆಡುವುದಕ್ಕೆ ಬಳಸಲಾಗುತ್ತಿತ್ತು. ಆದರೇ ಈಗಿನ ಐಪಿಎಲ್ ನಲ್ಲಿ ಆ ನಿಯಮವನ್ನ ಬದಲಾಯಿಸಲಾಗಿದೆ. ಒಂದು ವೇಳೆ ಚೆಂಡು ಕ್ರೀಡಾಂಗಣದಿಂದ ಹೊರಬಿದ್ದರೇ, ಆ ಚೆಂಡನ್ನು ಪುನಃ ಬಳಸುವಂತಿಲ್ಲ. ನಾಲ್ಕನೇ ಅಂಪೈರ್ ಹೊಸ ಚೆಂಡನ್ನ ಸ್ಯಾನಿಟೈಸ್ ಮಾಡಿ ನೀಡಬೇಕು ಎಂಬ ಕಡ್ಡಾಯ ನಿಯಮವನ್ನ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಹೊರಡಿಸಿದೆ.
ಈ ಹಿಂದಿನ ಐಪಿಎಲ್ ಕ್ರೀಡಾಂಗಣವಾಗಿರುವ ಶಾರ್ಜಾ ಹಾಗೂ ಅಬುದಾಭಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ಸಿಡಿಸಿದ ಚೆಂಡು ಎರಡು ಭಾರಿ ಕ್ರೀಡಾಂಗಣದ ಹೊರ ಬಿದ್ದಿತ್ತು. ಆಗ ಚೆಂಡನ್ನ ಸ್ಯಾನಿಟೈಸ್ ಗೊಳಿಸಿ ಪುನಃ ಆಟಕ್ಕೆ ಬಳಸಲಾಗಿತ್ತು.
ಕೋರೋನಾ ಹರಡುವಿಕೆಯನ್ನ ನಿಯಂತ್ರಿಸುವ ಸಲುವಾಗಿ ಈ ಭಾರಿ ಬಿಸಿಸಿಐ ಬಹಳಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕಳೆದ ಭಾರಿ ಆದಂತೆ ಈ ಭಾರಿಯೂ ಐಪಿಎಲ್ ಅರ್ಧಕ್ಕೆ ಸ್ಥಗಿತಗೊಂಡರೇ, ಬಿಸಿಸಿಐ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಬೇಕಾಗುತ್ತದೆ. ಹಾಗಾಗಿ ಆಟಗಾರರ ಸುರಕ್ಷತೆಗೆ ಮೊದಲ ಪ್ರಾಶಸ್ತ್ಯವನ್ನು ನೀಡಿದೆ. ಯಾವುದೇ ಕಾರಣಕ್ಕೂ ಈ ಭಾರಿ ಐಪಿಎಲ್ ಅರ್ಧಕ್ಕೆ ನಿಲ್ಲಬಾರದೆಂಬುದು ಬಿಸಿಸಿಐ ಕಾಳಜಿಯಾಗಿದೆ. ಅದಲ್ಲದೇ ಕ್ರೀಡಾಂಗಣದ ಮೊದಲ ಮಹಡಿಗೆ ಪ್ರೇಕ್ಷಕರಿಗೆ ನೋಡುವ ಅವಕಾಶದ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಅಭಿಮಾನಿಗಳು ಟಿಕೇಟ್ ಬುಕ್ ಮಾಡುವ ವೇಳೆ ತಾವು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ಲಗತ್ತಿಸಬೇಕು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.