ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿನ್ನರ್ ಆದಕೂಡಲೇ ಶಿವಣ್ಣ ಮನೆಗೆ ಹೋದ ಮಂಜು ಪಾವಗಡ ರವರಿಗೆ ಶಿವಣ್ಣ ಮಾಡಿದ್ದೇನು ಗೊತ್ತಾ??

5

ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಕೊನೆಯವರೆಗೂ ಇದ್ದು ಜನರ ಅಚ್ಚು ಮೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದ ಮಂಜು ಪಾವಗಡ ರವರು ಬಿಗ್ ಬಾಸ್ ಕಿರೀಟವನ್ನು ಧರಿಸಿ ವಿಜೇತರಾಗಿ ಮನೆಯಿಂದ ಹೊರ ಬಂದಿದ್ದಾರೆ. ಇಂತಹ ಸಂತೋಷದ ಸಮಯದಲ್ಲಿ ಮಂಜು ಪಾವಗಡ ರವರಿಗೆ ಎಲ್ಲರ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಹಲವಾರು ಸೆಲೆಬ್ರಿಟಿಗಳು ಮಂಜು ಪಾವಗಡ ರವರ ಪರ ಪ್ರಚಾರ ಮಾಡಿದ್ದು ಕೂಡ ಮಂಜು ಪಾವಗಡ ರವರ ಗೆಲುವಿಗೆ ಕಾರಣ ಎನ್ನಬಹುದು

ಇನ್ನು ಈ ಗೆಲುವಿಗೆ ಮುನ್ನ ನಡೆದಿರುವ ಸಂಗತಿಗಳ ಕುರಿತು ಮಾತನಾಡುವುದಾದರೆ ಕೊನೆಯ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ, ಮನೆಯ ಒಳಗಡೆ ಇರುವಾಗ ಸ್ಪರ್ಧಿಗಳು ತಮ್ಮ ವಿಶೇಷ ಕೋರಿಕೆಯನ್ನು ಕೇಳಬೇಕು ಎಂದು ಬಿಗ್ ಬಾಸ್ ಮನವಿ ಮಾಡಿದ್ದರೂ ಸಾಧ್ಯವಾದರೆ ಈಡೇರಿಸುವುದಾಗಿ ಹೇಳಿಕೆ ನೀಡಿದ್ದ ಕಾರಣ ಎಲ್ಲರೂ ತಮ್ಮದೇ ಆದ ವೈಯಕ್ತಿಕ ಕೋರಿಕೆಗಳನ್ನು ಬಿಗ್ ಬಾಸ್ ಮುಂದೆ ಇಟ್ಟಿದ್ದರು. ಈ ಸಮಯದಲ್ಲಿ ಮಂಜು ಪಾವಗಡ ರವರು ತಮಗಿಷ್ಟದ ನಟರಾದ ಶಿವರಾಜ್ ಕುಮಾರ್ ರವರ ಬಳಿಯಿಂದ ನನಗೆ ಒಂದು ಸಂದೇಶ ಬೇಕು ಎಂದು ಮನವಿ ಮಾಡಿದ್ದರು, ಇದನ್ನು ಕೇಳಿಸಿಕೊಂಡ ಶಿವಣ್ಣ ರವರು ಮಂಜುರವರ ಆಸೆಯಂತೆ ವಿಶೇಷ ಸಂದೇಶವನ್ನು ವಿಡಿಯೋ ಕಳುಹಿಸಿಕೊಟ್ಟಿದ್ದರು.

ಅದೇ ಕಾರಣಕ್ಕಾಗಿ ಬಿಗ್ ಬಾಸ್ ಮನೆಯಿಂದ ವಿಜೇತರಾಗಿ ಹೊರಬಂದ ತಕ್ಷಣ ಮಂಜು ಪಾವಗಡ ರವರು ನೇರವಾಗಿ ಶಿವರಾಜ್ ಕುಮಾರ್ ರವರ ಮನೆಗೆ ತೆರಳಿದ್ದಾರೆ ಹಾಗೂ ಶಿವರಾಜ್ ಕುಮಾರ್ ಅವರಿಂದ ಆಶೀರ್ವಾದ ಪಡೆದುಕೊಂಡು ನನಗಾಗಿ ವಿಡಿಯೋ ಸಂದೇಶ ಕಳುಹಿಸಿದ್ದಕ್ಕೆ ವಂದನೆಗಳು ಎಂದು ತಿಳಿಸಿದ್ದಾರೆ. ಇನ್ನು ಈ ಸಮಯದಲ್ಲಿ ಶಿವರಾಜ್ ಕುಮಾರ್ ಅವರು ನಡೆದುಕೊಂಡ ರೀತಿ ಬಹಳ ಮೆಚ್ಚುಗೆಗೆ ಕಾರಣವಾಗಿದೆ ಹೌದು ಸ್ನೇಹಿತರೆ ಮನೆಗೆ ಹೋದ ಮಂಜು ಪಾವಗಡ ರವರಿಗೆ ಪ್ರೀತಿಯಿಂದ ವಿಶೇಷ ಆಥಿತ್ಯವನ್ನು ನೀಡಿರುವ ಶಿವರಾಜ್ ಕುಮಾರ್ ಅವರು ಮನೆಗೆ ಬಂದ ಮಂಜು ಪಾವಗಡ ರವರನ್ನು ವಿಶೇಷ ಆಥಿತ್ಯದ ಮೂಲಕ ಮಾತನಾಡಿಸಿ ಅತಿಥಿ ಗೌರವ ನೀಡಿ ಕಳುಹಿಸಿದ್ದಾರೆ. ಕರುನಾಡ ದೊರೆ ಆಗಿದ್ದರೂ ಕೂಡ ಮಂಜು ಪಾವಗಡ ರವರು ಮನೆಗೆ ಹೋದ ತಕ್ಷಣ ಅವರು ನಡೆದುಕೊಂಡ ರೀತಿ ನಿಜಕ್ಕೂ ಎಲ್ಲರ ಮನಗೆದ್ದಿದೆ