ಅವಕಾಶ ಹುಡುಕಿಕೊಂಡು ಹೋದರೂ ಕೂಡ ವಜ್ರಮುನಿ ರವರ ಮಗ ಚಿತ್ರರಂಗದಿಂದ ದೂರ ಉಳಿದಿರುವುದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಜನ ಖಳನಟರು ತಮ್ಮ ಛಾಪನ್ನು ಮೂಡಿಸಿದ್ದಾರೆ ಆದರೆ ಇವರ ಹೆಸರು ಕೇಳಿದರೆ ಅಂದಿನ ಕಾಲಕ್ಕೆ ಪ್ರೇಕ್ಷಕರಲ್ಲಿ ನಡುಕ ಹುಟ್ಟುತಿತ್ತು. ಹೌದು ನಾವು ಮಾತನಾಡಲು ಹೊರಟಿರುವುದು ನಟಭಯಂಕರ ವಜ್ರಮುನಿ ಅವರ ಬಗ್ಗೆ. ಬೇರೆಲ್ಲ ನಟರು ಖಳನಾಯಕನ ಪಾತ್ರಕ್ಕಾಗಿ ಉನ್ನತ ತಯಾರಿ ಮಾಡಿಕೊಳ್ಳುತ್ತಿದ್ದರೆ ವಜ್ರಮುನಿಯವರಿಗೆ ಯಾವ ತಯಾರಿಯೂ ಬೇಕಿರಲಿಲ್ಲ ಅವರು ಸ್ವಾಭಾವಿಕವಾಗಿ ಖಳನಾಯಕನ ಪಾತ್ರಕ್ಕೆ ಅತ್ಯಂತ ಸಮರ್ಥರಾಗಿದ್ದರು.

ಸ್ನೇಹಿತರೆ ನಿಮಗೆಲ್ಲ ಗೊತ್ತಿರುವಂತೆ ಅದೆಷ್ಟುಜನ ಚಿತ್ರರಂಗದ ಖಳನಾಯಕ ನಟರ ಮಕ್ಕಳು ಕೂಡ ಚಿತ್ರರಂಗಕ್ಕೆ ಬಂದು ನಟ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ. ಉದಾಹರಣೆಗೆ ತೂಗುದೀಪ ಶ್ರೀನಿವಾಸ ರವರ ಮಕ್ಕಳಾದ ದಿನಕರ ನಿರ್ದೇಶಕರಾದರೆ ದರ್ಶನ್ ರವರು ನಟರಾಗಿ ಖ್ಯಾತರಾದರು. ಸುಧೀರ್ ಅವರ ಮಕ್ಕಳಾದ ತರುಣ್ ಸುದ್ದಿ ಹಾಗೂ ನಂದಕಿಶೋರ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಗಿದ್ದಾರೆ. ಇನ್ನು ವಜ್ರಮುನಿಯವರ ಮಗನಾದ ವಿಶ್ವನಾಥ ವಜ್ರಮುನಿ ಚಿತ್ರರಂಗಕ್ಕೆ ಬರದೆ ಹೊರಗಿನ ಪ್ರಪಂಚದಲ್ಲಿ ಜೀವನ ಸಾಗಿಸುತ್ತಿರುವುದು ನಿಮಗೆ ಗೊತ್ತಿರದಿರಬಹುದು.

ಹೌದು ಸ್ನೇಹಿತರೆ ವಜ್ರಮುನಿಯವರ ಪುತ್ರ ವಿಶ್ವನಾಥ್ ವಜ್ರಮುನಿ ಕನ್ನಡ ಚಿತ್ರರಂಗದ ಸಹವಾಸವೇ ಬೇಡ ಎಂದು ಹೊರಗಿನ ಪ್ರಪಂಚದಲ್ಲಿ ಜೀವಿಸುತ್ತಿದ್ದಾರೆ. ಅವರು ಬೇಕಿದ್ದರೆ ತಂದೆಯ ಹೆಸರನ್ನು ಉಪಯೋಗಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಅವಕಾಶವನ್ನು ಬಿಟ್ಟುಕೊಂಡು ಯಶಸ್ವಿ ನಟನಾಗಿ ಜೀವನ ಸಾಗಿಸ ಬಹುದಿತ್ತು ಆದರೆ, ಅವರು ಹಾಗೆ ಮಾಡದೆ ತೋಟ ಹಾಗೂ ಇತರೆ ಕೆಲಸಗಳನ್ನು ಮಾಡಿಕೊಂಡು ಇದರೊಂದಿಗೆ ಸಾಮಾಜಿಕ ಸೇವೆಗಳನ್ನು ಕೂಡ ಮಾಡಿಕೊಂಡು ಚಿತ್ರರಂಗದ ಸಹವಾಸವೇ ಬೇಡ ಎಂದು ಶಾಂತಿ ನೆಮ್ಮದಿಯಿಂದ ಜೀವನವನ್ನು ಸಾಗಿಸಿ ಕೊಂಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Facebook Comments

Post Author: Ravi Yadav