ದಿಗ್ಗಜ ಆಟಗಾರರಿಲ್ಲದಿದ್ದರೂ, ಆಸ್ಟ್ರೇಲಿಯಾದ ದಾಖಲೆಯನ್ನೆ ಪುಡಿ ಪುಡಿ ಮಾಡಿದ ಧವನ್ ಪಡೆ – ಆ ದಾಖಲೆ ಯಾವುದು ಗೊತ್ತೇ??
ದಿಗ್ಗಜ ಆಟಗಾರರಿಲ್ಲದಿದ್ದರೂ, ಆಸ್ಟ್ರೇಲಿಯಾದ ದಾಖಲೆಯನ್ನೆ ಪುಡಿ ಪುಡಿ ಮಾಡಿದ ಧವನ್ ಪಡೆ – ಆ ದಾಖಲೆ ಯಾವುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ಲಂಕಾ ಪ್ರವಾಸಕ್ಕೆ ಭಾರತ ತಂಡವನ್ನ ಪ್ರಕಟಿಸಿದಾಗ ರೋಹಿತ್,ಕೊಹ್ಲಿ,ಬುಮ್ರಾ, ಶಮಿಯಂತಹ ದಿಗ್ಗಜ ಆಟಗಾರರು ಇಲ್ಲದ ಕಾರಣ ಆ ಭಾರತ ತಂಡವನ್ನ ದ್ವೀತಿಯ ದರ್ಜೆ ತಂಡ ಎಂದು ಶ್ರೀಲಂಕಾದ ಹಲವು ಹಿರಿಯ ಕ್ರಿಕೇಟಿಗರು ಟೀಕಿಸಿದ್ದರು. ಆದರೇ ಈಗ ಅದೇ ತಂಡ ಶ್ರೀಲಂಕಾ ತಂಡವನ್ನ ಅದರ ನೆಲದಲ್ಲಿಯೇ ಮಣಿಸಿ ಸರಣಿ ಗೆದ್ದಿರುವುದಲ್ಲದೇ, ಮುಂದಿನ ಪಂದ್ಯದಲ್ಲಿಯೂ ಸಹ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವತ್ತ ತನ್ನ ಚಿತ್ತ ಹರಿಸಿದೆ. ಈ ನಡುವೆ ಭಾರತ ಆಸ್ಟ್ರೇಲಿಯಾ ತಂಡವನ್ನೇ ಹಿಂದಿಕ್ಕಿ ಒಂ ಮಹತ್ತರ ವಿಶ್ವ ದಾಖಲೆ ನಿರ್ಮಿಸಿದೆ. ಬನ್ನಿ ಆ ದಾಖಲೆ ಯಾವುದೆಂದು ತಿಳಿಯೋಣ.
ಭಾರತ ಎರಡನೇ ಏಕದಿನ ಪಂದ್ಯವನ್ನ ಶ್ರೀಲಂಕಾ ವಿರುದ್ದ ಗೆಲ್ಲುವ ಶ್ರೀಲಂಕಾ ವಿರುದ್ದ ಅತಿ ಹೆಚ್ಚು ಪಂದ್ಯ ಗೆದ್ದ ತಂಡ ಎಂಬ ಕೀರ್ತೀಗೆ ಭಾಜನವಾಗಿದೆ. ಈ ಹಿಂದೆ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ದ 92 ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನದಲ್ಲಿತ್ತು. ಭಾರತ ತಂಡದ ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನ ತಂಡ ಸಹ ಶ್ರೀಲಂಕಾ ವಿರುದ್ದ 92 ಏಕದಿನ ಪಂದ್ಯಗಳನ್ನು ಜಯಿಸುವ ಮೂಲಕ ಏರಡನೇ ಸ್ಥಾನದಲ್ಲಿತ್ತು. ಆದರೇ ಏರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ರೋಚಕ ಜಯ ಸಾಧಿಸಿದ ಧವನ್ ಪಡೆ ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳ ಹೆಸರಿನಲ್ಲಿದ್ದ ದಾಖಲೆಗಳನ್ನ ಮುರಿದಿದೆ.
ಇದೇ ವೇಳೆ ಮತ್ತೊಂದು ದಾಖಲೆ ಮಾಡಿರುವ ಧವನ್ ಪಡೆ, ಒಂದು ತಂಡದ ವಿರುದ್ದ ಅತಿ ಹೆಚ್ಚು ಸರಣಿ ಗೆದ್ದ ತಂಡ ಎಂಬುವುದಕ್ಕೂ ಭಾರತ ಭಾಜನವಾಗಿದೆ. 2007 ರಿಂದ ಇಲ್ಲಿಯವರೆಗೂ ನಡೆದಿರುವ ಎಲ್ಲಾ ಏಕದಿನ ಪಂದ್ಯಗಳ ಸರಣಿಗಳಲ್ಲಿಯೂ ಸಹ ನಿರಂತರವಾಗಿ ಜಯಿಸುವ ಮೂಲಕ ಭಾರತ ತಂಡ ಈ ವಿನೂತನ ದಾಖಲೆ ಸ್ಥಾಪಿಸಿದೆ. ಮೂರನೇ ಏಕದಿನ ಪಂದ್ಯವನ್ನು ಶಿಖರ್ ಧವನ್ ಪಡೆ ಜಯಿಸುವ ನೀರಿಕ್ಷೆಯಿದೆ. ತಂಡದಲ್ಲಿ ಇಲ್ಲಿಯವರೆಗೂ ಸ್ಥಾನ ಪಡೆಯದೇ, ಬೆಂಚು ಕಾಯಿಸಿರುವ ಆಟಗಾರರು ಮೂರನೇ ಪಂದ್ಯದಲ್ಲಿ ಸ್ಥಾನ ಪಡೆಯುವ ನೀರಿಕ್ಷೆ ಇದೆ. ಒಟ್ಟಿನಲ್ಲಿ ಘಟಾನುಘಟಿಗಳು ಇಲ್ಲದಿದ್ದರೂ ಶಿಖರ್ ಧವನ್ ಪಡೆಯ ಉತ್ತಮ ಪ್ರದರ್ಶನ ಭಾರತದ ಕ್ರಿಕೇಟ್ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.