ಅಂಬರೀಶ ಅವರೊಂದಿಗೆ ನಟಿಸಿ ಬೇಡಿಕೆಯ ನಟಿಯಾಗಿದ್ದ ಈ ನಟಿಗೆ ಆಗಿದ್ದೇನು ಗೊತ್ತಾ? ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.
ಅಂಬರೀಶ ಅವರೊಂದಿಗೆ ನಟಿಸಿ ಬೇಡಿಕೆಯ ನಟಿಯಾಗಿದ್ದ ಈ ನಟಿಗೆ ಆಗಿದ್ದೇನು ಗೊತ್ತಾ? ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ. ಇನ್ನು ಇವರು ಅನೇಕ ಸಿನಿಮಾಗಳಲ್ಲಿ ಹಲವರು ನಟಿಯರೊಂದಿಗೆ ಸಿನಿ ಪರದೆಯನ್ನು ಹಂಚಿ ಕೊಂಡಿದ್ದಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ನಟ ಅಂಬರೀಶ್ ಅವರು ನಟಿಸಿದ ಸಿನಿಮಾಗಳಲ್ಲಿ ಸಾಕಷ್ಟು ನಟಿಯರು ಅಭಿನಯಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟ ರೆಬಲ್ ಸ್ಟಾರ್ ಅಂಬರೀಶ್ ಅವರು ಅಭಿನಯಿಸಿರುವ ‘ಏಳು ಸುತ್ತಿನ ಕೋಟೆ’ ಸಿನಿಮಾ ನಿಮಗೆ ಗೊತ್ತಿರಬೇಕಲ್ಲವೇ.
ಆ ಸಿನಿಮಾದಲ್ಲಿ ಅಂಬರೀಶ್ ಅವರಿಗೆ ಜೊತೆಯಾಗಿ ನಟಿಸಿದ ನಟಿ ಗೌತಮಿ. ಹೌದು ಆಂಧ್ರ ಮೂಲದವರಾದ ಇವರು ಕನ್ನಡ ಚಿತ್ರರಂಗದಲ್ಲಿ ಏಳು ಸುತ್ತಿನ ಕೋಟೆ ಸಿನಿಮಾದಲ್ಲಿ ಅಂಬರೀಶ್ ಅವರೊಂದಿಗೆ ನಟಿಸಿದ್ದಾರೆ. ಇನ್ನೂ ಜನಪ್ರಿಯತೆ ಪಡೆದುಕೊಂಡ ಸಮಯದಲ್ಲಿ ಅವರಿಗೆ ಬಹುದೊಡ್ಡ ಕಾಯಿಲೆಯೊಂದು ಅಡ್ಡಿ ಮಾಡಿತ್ತು. ಹಾಗಾದರೆ ಆ ನಟಿಗೆ ಏನಾಗಿತ್ತು? ಅದಕ್ಕಾಗಿ ಅವರು ಏನು ಮಾಡಿದರು? ಇದೀಗ ಹೇಗಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಇದನ್ನು ಸಂಪೂರ್ಣವಾಗಿ ಓದಿ.
ಹೌದು ಅಂಬರೀಷ್ ಅವರೊಂದಿಗೆ ಏಳು ಸುತ್ತಿನ ಕೋಟೆ ಎಂಬ ಸಿನಿಮಾದಲ್ಲಿ ನಟಿಸಿದ್ದ ನಟಿ ಗೌತಮಿ ಯವರು ಬೇಡಿಕೆ ಇದ್ದಾಗ ಅವರಿಗೆ ದೊಡ್ಡ ಕಾಯಿಲೆಯೊಂದು ತಗುಲಿತು. ಹೌದು ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ನಟಿ ಗೌತಮಿ ಅವರಿಗೆ ಅಂದಿನ ದಿನಗಳಲ್ಲಿ ಜೀವನದಲ್ಲಿ ನೋವುಗಳು ಎದುರಾದವು. ಹೌದು 1998ರಲ್ಲಿ ಅಡಿ ಗೌತಮಿ ಅವರು ಸಂದೀಪ್ ಭಾಟಿಯಾ ಎಂಬ ಉದ್ಯಮಿಯನ್ನು ಮದುವೆಯಾದರು.
ಆದರೆ ಇವರ ಸಂಸಾರಿಕ ಜೀವನ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿತ್ತು. ಕಾರಣಾಂತರಗಳಿಂದ ಒಂದು ವರ್ಷ ಆದ ನಂತರ ಅವರು ತಮ್ಮ ಪತಿಯಿಂದ ವಿ-ಚ್ಛೇದನ ಪಡೆದರು. ಆ ಸಮಯದಲ್ಲಿ ದಂಪತಿಗಳಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಹೀಗೆ ದಾಂಪತ್ಯ ಜೀವನದಲ್ಲಿ ಕೂಡ ಯಶಸ್ಸು ಸಿಗದೇ ಗೌತಮಿ ಅವರ ಜೀವನದಲ್ಲಿ ಬಹು ದೊಡ್ಡ ಕಾಯಿಲೆಯೆಂದು ಆ ಸಮಯಕ್ಕೆ ಅವರಿಗೆ ತುಂಬಾ ಕಷ್ಟ ಕೊಟ್ಟಿತು. ಹೌದು ಪತಿಯಿಂದ ದೂರವಾದ ನೋವು ಒಂದುಕಡೆಯಾದರೆ ಮತ್ತೊಂದು ಕಡೆ ಅವರಿಗೆ ಸ್ತನ ಕ್ಯಾನ್ಸರ್ ಕೂಡ ಬಂದಿತ್ತು.
ಆದರೆ ಅಂತಹ ಪರಿಸ್ಥಿತಿಯಲ್ಲೂ ಕೂಡ ಅವರು ಧೃತಿಗೆಡದೆ ಅದನ್ನು ಎದುರಿಸಿ ನಿಂತರು. ಆ ಸಮಯದಲ್ಲಿ ನಟಿ ಗೌತಮಿ ಅವರು ತಮಿಳು ಖ್ಯಾತ ನಟ ಕಮಲ್ ಹಾಸನ್ ಅವರೊಂದಿಗೆ ಲಿವಿಂಗ್ ರೆಲೇಶನ್ಶಿಪ್ ನಲ್ಲಿ ಇದ್ದರು. ಇನ್ನೂ ಅಂತಹ ಪರಿಸ್ಥಿತಿಯಲ್ಲಿ ಕೂಡ ನಟ ಕಮಲಹಾಸನ್ ಅವರು ಗೌತಮಿ ಅವರಿಗೆ ಬೆಂಬಲವಾಗಿ ನಿಂತಿದ್ದರು. ಇನ್ನು ಇವರಿಬ್ಬರ ಈ ಸಂಬಂಧ 13 ವರ್ಷಗಳವರೆಗೆ ಮುಂದುವರೆದು ನಂತರದಲ್ಲಿ ಕಮಲ್ ಹಾಸನ್ ಅವರು ಅದರಿಂದ ಹೊರಬಂದರು. ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ ನಟಿ ಗೌತಮಿ ಅವರು ಇದೀಗ ಏಕಾಂಗಿಯಾಗಿದ್ದು ಕೆಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸುತ್ತಿದ್ದಾರೆ.