ಆತ ಆಡದಿದ್ದರೇ ಭಾರತ ಖಂಡಿತ ಸೋಲಲಿದೆ. – ಜಿ.ಆರ್.ವಿಶ್ವನಾಥ್ ಹೀಗೆ ಹೇಳಿದ್ದು ಯಾರ ಬಗ್ಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದಿನಾಂಕ ಹತ್ತಿರ ಬರುತ್ತಿದ್ದಂತೆ ಮಾತಿನ ಸಮರ ಶುರುವಾಗಿದೆ. ಈ ಭಾರಿ ಹೆಚ್ಚು ಚರ್ಚೆ ನಡೆಯುತ್ತಿರುವುದು ಪ್ಲೇಯಿಂಗ್ ಇಲೆವೆನ್ ಬಗ್ಗೆ. ಹಿರಿಯ ಆಟಗಾರರು ತಮ್ಮ ನೆಚ್ಚಿನ ತಂಡವನ್ನು ಪ್ರಕಟಿಸುತ್ತಿದ್ದಾರೆ. ಈ ಮಧ್ಯೆ ಕರ್ನಾಟಕದ ಮಾಜಿ ಆಟಗಾರ ಗುಂಡಪ್ಪ ವಿಶ್ವನಾಥ್ ಪ್ರತಿಕ್ರಿಯಿಸಿ, ಈ ಆಟಗಾರ ಆಡುವ 11ರ ಬಳಗದಲ್ಲಿ ಇಲ್ಲವಾದರೇ ಭಾರತ ನ್ಯೂಜಿಲೆಂಡ್ ವಿರುದ್ದ ಸೋಲಲಿದೆ ಎಂಬ ಹೇಳಿಕೆ ಕೊಟ್ಟಿದ್ದಾರೆ.

ಸದ್ಯ ಭಾರತ ತಂಡದ ಬೌಲಿಂಗ್ ವಿಭಾಗದ ಆಯ್ಕೆಯೇ ಕೊಂಚ ತಲೆನೋವಾಗಿದ್ದು ಯಾವ ಮೂವರು ವೇಗದ ಬೌಲರಗಳನ್ನ ಆಯ್ದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ಜೋರಾಗಿರುವಾಗಲೇ, ಅದಕ್ಕೆ ದನಿಗೂಡಿಸಿರುವ ಗುಂಡಪ್ಪ ವಿಶ್ವನಾಥ್ , ಆಸ್ಟ್ರೇಲಿಯಾ ಪ್ರವಾಸದಲ್ಲಿ ತನ್ನ ನೀರಿಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ನೀಡಿರುವ ಈ ಬೌಲರ್ ನ ತಂಡದ ಆಯ್ಕೆಯಲ್ಲಿ ಪರಿಗಣಿಸಲೇಬೇಕು ಎಂದು ಆಗ್ರಹಿಸಿದ್ದಾರೆ.

ಅಷ್ಟಕ್ಕೂ ಆ ಬೌಲರ್ ಯಾರೆಂದರೇ, ಬೇರಾರೂ ಅಲ್ಲ. ವೇಗಿ ಮಹಮದ್ ಸಿರಾಜ್. ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಿರಾಜ್ ರನ್ನ ಪರಿಗಣಿಸಿದರೇ, ಸೌತಾಂಪ್ಟನ್ ನ ಪಿಚ್ ನಲ್ಲಿ ಖಂಡಿತ ಉತ್ತಮ ಪ್ರದರ್ಶನ ನೀಡುತ್ತಾರೆ. ಹಾಗಾಗಿ ಮಹಮದ್ ಶಮಿ ಇಲ್ಲವೇ ಇಶಾಂತ್ ಶರ್ಮಾ ಜಾಗದಲ್ಲಿ ಮಹಮದ್ ಸಿರಾಜ್ ರನ್ನ ಆಡಿಸಬೇಕೆಂದು ಜಿ.ಆರ್.ವಿಶ್ವನಾಥ್ ಹೇಳಿದ್ದಾರೆ. ಇದಕ್ಕೆ ಪೂರಕ ಎಂಬಂತೆ ರವಿಶಾಸ್ತ್ರಿ ಮತ್ತು ಕೊಹ್ಲಿ ನಡುವೆ ನಡೆದ ಸಂಭಾಷಣೆಯಲ್ಲಿಯೂ ಸಹ ಸಿರಾಜ್ ಆಡುತ್ತಾರೆ ಎಂಬ ಮಾಹಿತಿ ಲಭಿಸಿದೆ. ಮಹಮದ್ ಸಿರಾಜ್ ರನ್ನ ಆಡಿಸಬೇಕೆ, ಬೇಡವೆ ಎಂಬ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Post Author: Ravi Yadav