ಬಿಡುಗಡೆಯಾಯಿತು UAE ಐಪಿಎಲ್ ನಲ್ಲಿ ಭಾಗವಹಿಸದಿರುವ ವಿದೇಶಿ ಆಟಗಾರ ಪಟ್ಟಿ, ಯಾರ್ಯಾರು ಗೊತ್ತೇ??
ಬಿಡುಗಡೆಯಾಯಿತು UAE ಐಪಿಎಲ್ ನಲ್ಲಿ ಭಾಗವಹಿಸದಿರುವ ವಿದೇಶಿ ಆಟಗಾರ ಪಟ್ಟಿ, ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಿಮಗೆಲ್ಲಾ ತಿಳಿದಿರುವಂತೆ ಐಪಿಎಲ್ ನ ಮುಂದುವರಿದ ಚರಣ ಇದೇ ಸೆಪ್ಟೆಂಬರ್ 19 ರಿಂದ ಯು.ಎ.ಇ ಯಲ್ಲಿ ನಡೆಯಲಿದೆ. ಆದರೇ ಆ ಐಪಿಎಲ್ ನಲ್ಲಿ ಹಲವಾರು ವಿದೇಶಿ ಆಟಗಾರರು, ತಮ್ಮ ದೇಶದ ಪರ ಆಡುವ ಕಾರಣ ಐಪಿಎಲ್ ಗೆ ಗೈರು ಹಾಜರಾಗಲಿದ್ದಾರೆ. ತಂಡಗಳಲ್ಲಿ ಗೈರು ಹಾಜರಾಗುವ ಆಟಗಾರರು ಈ ಕೆಳಗಿನಂತಿದ್ದಾರೆ. ಅತಿ ಹೆಚ್ಚು ಅಂದರೇ ಚೆನ್ನೈ ತಂಡದಲ್ಲಿ 5 ವಿದೇಶಿ ಆಟಗಾರರು ಗೈರಾಗುವ ಸಾಧ್ಯತೆಯಿದೆ.
ಮೊದಲನೆಯದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ವಿದೇಶಿ ಆಟಗಾರರಾದ ಮೊಯಿನ್ ಅಲಿ, ಸ್ಯಾಮ್ ಕರನ್, ಡ್ವೇಯ್ನ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಜೇಸನ್ ಬೆಹ್ರೆನ್ಡಾರ್ಫ್ ಭಾಗವಹಿಸುತ್ತಿಲ್ಲ. ಇನ್ನು ಎರಡನೆಯದಾಗಿ ದೆಹಲಿ ಕ್ಯಾಪಿಟಲ್ಸ್ – ಈ ತಂಡದಲ್ಲಿದ್ದ ವಿದೇಶಿ ಆಟಗಾರರಾದ ಸ್ಟೀವ್ ಸ್ಮಿತ್, ಶಿಮ್ರಾನ್ ಹೆಟ್ಮೆಯರ್, ಸ್ಯಾಮ್ ಬಿಲ್ಲಿಂಗ್ಸ್, ಟಾಮ್ ಕರನ್, ಮಾರ್ಕಸ್ ಸ್ಟೋಯಿನಿಸ್ ಭಾಗವಹಿಸುತ್ತಿಲ್ಲ.
ಇನ್ನು ಮೂರನೆಯದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು – ನಮ್ಮ ಆರ್ಸಿಬಿ ತಂಡದ ವಿದೇಶಿ ಆಟಗಾರರಾದ ಗ್ಲೆನ್ ಮ್ಯಾಕ್ಸವೆಲ್, ಡ್ಯಾನ್ ಕ್ರಿಶ್ಚಿಯನ್,ಕೇನ್ ರಿಚರ್ಡಸನ್,ಡೇನಿಯಲ್ ಸ್ಯಾಮ್ಸ್, ಆಡಂ ಜಂಪಾ ಭಾಗವಹಿಸುವುದಿಲ್ಲ. ನಾಲ್ಕನೆಯದಾಗಿ ಮುಂಬೈ ಇಂಡಿಯನ್ಸ್ – ಈ ತಂಡದ ವಿದೇಶಿ ಆಟಗಾರರಾದ ಕೀರನ್ ಪೊಲಾರ್ಡ್,ಕ್ರಿಸ್ ಲಿನ್, ನಥಾನ್ ಕೌಲ್ಟರ್ ಲೈನ್ ಭಾಗವಹಿಸುತ್ತಿಲ್ಲ. ಇನ್ನು ಅಷ್ಟೇ ಅಲ್ಲದೇ ಪಂಜಾಬ್ ಕಿಂಗ್ಸ್ – ಈ ತಂಡದ ವಿದೇಶಿ ಆಟಗಾರರಾದ ಡೇವಿಡ್ ಮಲಾನ್, ಜೈ ರಿಚರ್ಡಸನ್, ರಿಲೇ ಮೆರೆಡಿತ್, ಮೊಸೆಸ್ ಹೆನ್ರಿಕ್ಸ್, ಕ್ರಿಸ್ ಗೇಲ್, ಕ್ರಿಸ್ ಜೋರ್ಡಾನ್ ಭಾಗವಹಿಸುತ್ತಿಲ್ಲ.
ಇನ್ನುಳಿದಂತೆ ರಾಜಸ್ತಾನ ರಾಯಲ್ಸ್ – ಈ ತಂಡದ ವಿದೇಶಿ ಆಟಗಾರರಾದ ಲಿಯಾಮ್ ಲಿವಿಂಗ್ ಸ್ಟೋನ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಆಂಡ್ರೂ ಟೈ, ಮುಸ್ತಾಫಿಜುರ್ ರೆಹಮಾನ್ ಟೂರ್ನಿಯಿಂದ ಗೈರಾಗುವ ಸಾಧ್ಯತೆಯಿದೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ – ಈ ತಂಡದ ವಿದೇಶಿ ಆಟಗಾರರಾದ ಶಕೀಬ್ ಅಲ್ ಹಸನ್, ಇಯಾನ್ ಮೋರ್ಗನ್, ಪ್ಯಾಟ್ ಕಮಿನ್ಸ್, ಬೆನ್ ಕಟಿಂಗ್, ಆಂಡ್ರೆ ರಸೆಲ್, ಸುನೀಲ್ ನರೈನ್ ಭಾಗವಹಿಸುತ್ತಿಲ್ಲ. ಕೊನೆಯದಾಗಿ ಸನ್ ರೈಸರ್ಸ್ ಹೈದರಾಬಾದ್ – ಈ ತಂಡದ ವಿದೇಶಿ ಆಟಗಾರರಾದ ಜೇಸನ್ ರಾಯ್, ಜಾನಿ ಬೈರ್ಸ್ಟೋ, ಜೇಸನ್ ಹೋಲ್ಡರ್ ಹಾಗೂ ಡೇವಿಡ್ ವಾರ್ನರ್ ಭಾಗವಹಿಸುತ್ತಿಲ್ಲ.