ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ – ತಂಡದಲ್ಲಿ ಸ್ಥಾನ ಪಡೆದ ಮೂವರು ಕನ್ನಡಿಗರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಅತ್ತ ಇಂಗ್ಲೆಂಡ್ ನಲ್ಲಿ ವಿರಾಟ್ ಕೊಹ್ಲಿ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಸಿದ್ದತೆ ನಡೆಸುತ್ತಿರುವಾಗಲೇ, ಇತ್ತ ನೀರಿಕ್ಷೆಯಂತೆ ಬಿಸಿಸಿಐ ಶ್ರೀಲಂಕಾ ಪ್ರವಾಸಕ್ಕೆ ಮತ್ತೊಂದು ತಂಡವನ್ನು ಪ್ರಕಟಿಸಿದೆ. ಶ್ರೀಲಂಕಾದಲ್ಲಿ ಭಾರತ ತಂಡ 3 ಎಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ಎಲ್ಲಾ ಪಂದ್ಯಗಳು ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ತಂಡದ ನಾಯಕರಾಗಿ ಶಿಖರ್ ಧವನ್ ರನ್ನ ಆಯ್ಕೆ ಮಾಡಲಾಗಿದ್ದು, ಉಪನಾಯಕರಾಗಿ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಇರಲಿದ್ದಾರೆ.

ಇದೇ ಮೊದಲ ಭಾರಿ ಹಲವಾರು ವರ್ಷಗಳ ನಂತರ ಮೂವರು ಕನ್ನಡಿಗರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡದಲ್ಲಿ ಎಂಟು ತಜ್ಞ ಬ್ಯಾಟ್ಸಮನ್ ಗಳು, ಇಬ್ಬರು ವಿಕೇಟ್ ಕೀಪರ್ ಬ್ಯಾಟ್ಸಮನ್ ಗಳು, ಆರು ಸ್ಪಿನ್ನರ್ ಗಳು ಹಾಗೂ ನಾಲ್ವರು ವೇಗದ ಬೌಲರ್ ಗಳನ್ನು ಒಳಗೊಂಡಿದೆ. ಇದರಲ್ಲಿ ಪಾಂಡ್ಯ ಸಹೋದರರು ಆಲ್ ರೌಂಡರ್ ಗಳಾಗಿದ್ದಾರೆ. ಇದಲ್ಲದೇ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಐವರು ಬೌಲರ್ ಗಳನ್ನು ನೆಟ್ ಬೌಲರ್ ಗಳಾಗಿ ತಂಡದ ಜೊತೆ ಕರೆದೊಯ್ಯುತ್ತಿದ್ದಾರೆ.

ತಂಡ ಹೀಗಿದೆ. – ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್) ಯುಜುವೇಂದ್ರ ಚಾಹಲ್, ರಾಹುಲ್ ಚಾಹರ್, ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಾಹರ್, ನವದೀಪ್ ಸೈನಿ, ಚೇತನ್ ಸಕರಿಯಾ.
ನೆಟ್ ಬೌಲರ್‌ಗಳು: ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಅರ್ಷ್‌ದೀಪ್ ಸಿಂಗ್, ಸಾಯಿ ಕಿಶೋರ್, ಸಿಮಾರ್ಜೀತ್ ಸಿಂಗ್. (ದೇವದತ್ ಪಡಿಕಲ್, ಮನೀಶ್ ಪಾಂಡೆ ಹಾಗೂ ಕೃಷ್ಣಪ್ಪ ಗೌತಮ್ ತಂಡದಲ್ಲಿ ಸ್ಥಾನ ಪಡೆದ ಕನ್ನಡಿಗರಾಗಿದ್ದಾರೆ. ಈ ತಂಡ ಶ್ರೀಲಂಕಾವನ್ನ ಅದರ ನೆಲದಲ್ಲಿಯೇ ಮಣಿಸಲಿದೆಯೇ ಎಂಬ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.)

Facebook Comments

Post Author: Ravi Yadav