ಬಿಗ್ ಬಾಸ್ ನ ವಿಜೇತ ಬಹುಮಾನದ 50 ಲಕ್ಷ ರೂಪಾಯಿಗಳನ್ನು ಯಾರು ಪಡೆಯುತ್ತಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕಾರ್ಯಕ್ರಮ ಕಾರಣಾಂತರಗಳಿಂದ ಇದೀಗ ಇನ್ನು 4 ವಾರಗಳು ಬಾಕಿ ಇರುವಾಗ ಮುಗಿದು ಹೋಗಿದೆ. ಹೊರ ಜಗತ್ತಿನ ಪ್ರಪಂಚದ ಸ್ಥಿತಿಗತಿಗಳನ್ನು ತೋರಿಸಿ ಎಲ್ಲ ಸದಸ್ಯ ರನ್ನು ಮನೆಯಿಂದ ಹೊರ ಬರುವಂತೆ ಆದೇಶ ನೀಡಿ ಪ್ರತಿಯೊಬ್ಬರೂ ಮನೆಯ ಸದಸ್ಯರನ್ನು ಕ್ಷೇಮವಾಗಿ ಅವರವರ ಮನೆಗೆ ಬಿಡಲಾಗುತ್ತದೆ. ಇನ್ನು ಹೀಗೆ ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತಿರುವ ಕಾರಣ ಯಾವುದೇ ಸ್ಪರ್ದಿಯನ್ನು ಈ ಸಮಯದಲ್ಲಿ ವಿಜೇತರನ್ನಾಗಿ ಘೋಷಣೆ ಮಾಡಿಲ್ಲ.

ಇನ್ನು ಈ ಕಾರ್ಯಕ್ರಮವನ್ನು ಮತ್ತೆ ಅದೇ ಸದಸ್ಯರೊಂದಿಗೆ ಮುಂದುವರೆಸುವ ಯಾವುದೇ ಸಾಧ್ಯತೆಗಳು ಕೂಡ ಕಾಣಿಸುತ್ತಿಲ್ಲ. ಹಾಗಿದ್ದರೆ ಇಷ್ಟು ದಿವಸ ಮನೆಯಲ್ಲಿ ಇದ್ದ ಸ್ಪರ್ದಿಗಳಿಗೆ ಕೇವಲ ಸಂಭಾವನೆ ಮಾತ್ರ ಸಿಗುತ್ತದೆಯೇ?? ಅಥವಾ ವಿಜೇತರನ್ನು ಘೋಷಣೆ ಮಾಡಿ ಹಣ ನೀಡಲಾಗುತ್ತದೆಯಾ?? ಈ ಎಲ್ಲ ಪ್ರಶ್ನೆಗಳು ಎಲ್ಲರ ಮನದಲ್ಲಿಯೂ ಕೂಡ ಉಳಿದು ಕೊಂಡಿವೆ.

ಹೌದು ಸ್ನೇಹಿತರೇ, ಈ ರೀತಿಯ ಪ್ರಶ್ನೆಗಳು ಎಲ್ಲರ ಮನದಲ್ಲಿಯೂ ಕೂಡ ಮೂಡಿರುವುದು ಸುಳ್ಳಲ್ಲ, ಆದರೆ ಇದೇ ಸಮಯದಲ್ಲಿ ಪ್ರೇಕ್ಷಕರು ಈ ಹಣದಿಂದ ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡಿ, ಮನೆಯಿಂದ ಬೆಡ್ ಹಾಕಿ ಚಿಕಿತ್ಸೆ ನೀಡಿ ಹೀಗೆ ಹಲವಾರು ರೀತಿಯಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ವಿಜೇತ ಹಣವನ್ನು ಏನು ಮಾಡಲಾಗುತ್ತದೆ ಎಂಬುದರ ಕುರಿತು ಅಲ್ಲಲ್ಲಿ ಚರ್ಚೆ ನಡೆಯುತ್ತಿದ್ದು, ತೆಲುಗಿನ ಸಾಕ್ಷಿ ಪತ್ರಿಕೆಯ ಪ್ರಕಾರ ಯಾವುದೇ ಪ್ರೇಕ್ಷಕರ ಅಭಿಪ್ರಾಯವನ್ನು ಮತ್ತೊಮ್ಮೆ ಕೇಳದೇ, ಇಲ್ಲಿಯವರೆಗೂ ನಡೆದಿರುವುದರ ಮೇರೆಗೆ ವಿಜೇತರನ್ನ ಘೋಷಣೆ ಮಾಡಬಹುದು, ಅಥವಾ ಎಲ್ಲ ಸ್ಪರ್ದಿಗಳಿಗೆ ಸಮನಾಗಿ ಹಂಚಿಕೆ ಮಾಡಬಹುದಾದ ಸಾಧ್ಯತೆ ಇದೇ. ಆದರೆ ಇದರ ಕುರಿತು ವಾಹಿನಿ ಇನ್ನು ಯಾವುದೇ ನಿರ್ಣಯವನ್ನು ಇನ್ನು ಪ್ರಕಟಣೆ ಮಾಡಿಲ್ಲ.

Post Author: Ravi Yadav