ಮನೆಯಲ್ಲಿಯೇ ಅಯ್ಯಂಗಾರ್ ಶೈಲಿಯಲ್ಲಿ ರಸಂ ಪುಡಿ ಮಾಡುವುದು ಹೇಗೆ ಗೊತ್ತೆ?? ದೇವಸ್ಥಾನಗಳ ರಸಂ ಸ್ಟೈಲ್.

ಮನೆಯಲ್ಲಿಯೇ ಅಯ್ಯಂಗಾರ್ ಶೈಲಿಯಲ್ಲಿ ರಸಂ ಪುಡಿ ಮಾಡುವುದು ಹೇಗೆ ಗೊತ್ತೆ?? ದೇವಸ್ಥಾನಗಳ ರಸಂ ಸ್ಟೈಲ್.

ನಮಸ್ಕಾರ ಸ್ನೇಹಿತರೇ, ಇಂದು ನಾವು ಅಯ್ಯಂಗಾರ್ ಶೈಲಿಯಲ್ಲಿ ರಸಂ ಪುಡಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಅಯ್ಯಂಗಾರ್ ಶೈಲಿಯಲ್ಲಿ ರಸಂ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು: 20 – 30 ಒಣಮೆಣಸಿನಕಾಯಿ, 50 – 60 ಬ್ಯದಿಗೆ ಮೆಣಸಿನಕಾಯಿ, 5 ಚಮಚ ಧನಿಯಾ, 1 ಚಮಚ ಮೆಂತ್ಯ, 2 ಚಮಚ ಜೀರಿಗೆ, 1 ಚಮಚ ಕಾಳು ಮೆಣಸು, 1 ಚಮಚ ಸಾಸಿವೆ, ಸ್ವಲ್ಪ ಕರಿಬೇವು, 1 ಚಮಚ ಅರಿಶಿನ ಪುಡಿ, ಸ್ವಲ್ಪ ಇಂಗು, 1 ಚಮಚ ಎಣ್ಣೆ.

ಅಯ್ಯಂಗಾರ್ ರಸಂ ಪುಡಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಒಣಮೆಣಸಿನಕಾಯಿ, ಬ್ಯಾಡಿಗೆ ಮೆಣಸಿನಕಾಯಿ ಹಾಗೂ ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ 4 – 5 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಿ.

ಮತ್ತೆ ಅದೇ ಬಾಣಲೆಗೆ ಧನಿಯಾ, ಜೀರಿಗೆ, ಮೆಂತ್ಯ, ಕಾಳು ಮೆಣಸನ್ನು ಹಾಕಿ ಕಡಿಮೆ ಉರಿಯಲ್ಲಿ 4 – 5 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಮತ್ತೊಂದು ಪ್ಲೇಟಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಗೆ ಕರಿಬೇವನ್ನು ಹಾಕಿ ಕರಿಬೇವು ಗರಿ ಗರಿಯಾಗುವವರೆಗೂ ಫ್ರೈ ಮಾಡಿಕೊಳ್ಳಿ. ಉರಿದುಕೊಂಡ ಎಲ್ಲಾ ಪದಾರ್ಥಗಳನ್ನು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಅರಿಶಿನ ಪುಡಿ, ಇಂಗು, ಫ್ರೈ ಮಾಡಿಕೊಂಡ ಎಲ್ಲಾ ಪದಾರ್ಥಗಳನ್ನು ಹಾಕಿ ನುಣ್ಣಗೆ ಪುಡಿಮಾಡಿದರೆ ಅಯ್ಯಂಗಾರ್ ಶೈಲಿಯಲ್ಲಿ ರಸಂ ಪುಡಿ ಸಿದ್ದವಾಗುತ್ತದೆ.