ಕನ್ನಡಿಗ ದ್ರಾವಿಡ್ ರವರಿಗೆ ಐತಿಹಾಸಿಕ ಜವಾಬ್ದಾರಿ ವಹಿಸಿದ ಗಂಗೂಲಿ.‌ ಹತ್ತಾರು ವರ್ಷಗಳ ಕನಸು ಇದೀಗ ನನಸು. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಮ್ಮ ನಿಮ್ಮೆಲ್ಲರ ನೆಚ್ಚಿನ ಕನ್ನಡಿಗ ರಾಹುಲ್ ದ್ರಾವಿಡ್ ರವರು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಸ್ವರ್ಣ ಅಕ್ಷರಗಳಿಂದ ಬರೆದಿದ್ದಾರೆ. ಇಡೀ ವಿಶ್ವವೇ ಇಂದು ಹಾಗೂ ಎಂದೆಂದಿಗೂ ದ್ರಾವಿಡ್ ರವರ ಆಟವನ್ನು ಶ್ರೇಷ್ಠ ಆಟ ಎಂದು ಒಪ್ಪಿಕೊಳ್ಳುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಭಾರತ ತಂಡದಲ್ಲಿ ಇದ್ದಷ್ಟು ದಿನವೂ ಕೂಡ ತಮ್ಮದೇ ಆದ ನಿಜ ಆಟದಿಂದ ಹಲವಾರು ಪಂದ್ಯಗಳಿಂಗ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಾರೆ, ಹಾಗೂ ಗೆಲುವುಗಳನ್ನು ಭಾರತ ತಂಡಕ್ಕೆ ಉಡುಗಿರೆಯನ್ನಾಗಿ ನೀಡಿದ್ದಾರೆ.

ಇನ್ನು ಭಾರತ ತಂಡದಿಂದ ನಿವೃತ್ತಿ ಹೊಂದಿದ ಮೇಲು ಕೂಡ ಭಾರತದ ಕ್ರಿಕೆಟ್ ತಂಡವನ್ನು ಕಟ್ಟಬೇಕು ಹಾಗೂ ಭಾರತ ತಂಡವನ್ನು ಬಲಿಷ್ಠ ತಂಡವನ್ನಾಗಿ ಮಾಡಬೇಕು ಎಂದು ಇತರ ದೇಶಗಳಿಂದ ಕೋಚ್ ಆಗುವ ಆಫರ್ ಪಡೆದರು ಕೂಡ ಭಾರತ ಯುವ ಆಟಗಾರರಿಗೆ ಮಾರ್ಗ ದರ್ಶನ ನೀಡುತ್ತಾ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ರಾಷ್ಟ್ರೀಯ ತಂಡಕ್ಕೆ ಕೂಡ ದ್ರಾವಿಡ್ ರವರ ಮಾರ್ಗ ದರ್ಶನ ಬೇಕು ಎಂಬುವುದರಲ್ಲಿ ಎರಡು ಮಾತಿಲ್ಲ.

ಯಾಕೆಂದರೆ ದ್ರಾವಿಡ್ ರವರ ಮಾರ್ಗ ದರ್ಶನ ದೊರೆತರೆ ಅಂತಾರಾಷ್ಟ್ರೀಯವಾಗಿ ಭಾರತ ತಂಡ ಮತ್ತಷ್ಟು ಬಲಿಷ್ಠವಾಗಲಿದೆ. ಇದೀಗ ಅದೇ ರೀತಿಯ ಒಂದು ವಿದ್ಯಮಾನ ನಡೆಯುತ್ತಿದಿದ್ದು, ಭಾರತ ತಂಡ ಇಂಗ್ಲೆಂಡ್ ದೇಶಕ್ಕೆ ತೆರಳುವ ಸಮಯದಲ್ಲಿ ಯುವ ಆಟಗಾರರ ಮತ್ತೊಂದು ತಂಡವನ್ನು ರಚಿಸಿ ಶ್ರೀಲಂಕಾ ದೇಶಕ್ಕೆ ಕ್ರಿಕೆಟ್ ಆಡಲು ಕಳುಹಿಸಲಾಗುತ್ತಿದೆ. ಹೌದು ಒಮ್ಮೆಲೇ ಎರಡು ಭಾರತ ತಂಡಗಳು ಅಂತಾರಾಷ್ಟ್ರೀಯ ಸರಣಿಗಳನ್ನು ಆಡಲಿದೆ. ಇದೀಗ ಈ ಕುರಿತು ಗಂಗೂಲಿ ರವರು ಹೊಸ ಆದೇಶ ಹೊರಡಿಸಲು ಸಿದ್ದವಾಗಿದ್ದು, ಶ್ರೀಲಂಕಾ ದೇಶಕ್ಕೆ ತೆರಳುವ ಭಾರತ ತಂಡದ ಜೊತೆ ದ್ರಾವಿಡ್ ಕೂಡ ಕೋಚ್ ಆಗಿ ಇರಲಿದ್ದಾರೆ ಎಂಬುದು ಖಚಿತ ವಾಗಿದೆ. ಈ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ದ್ರಾವಿಡ್ ರವರ ಅಂತಾರಾಷ್ಟ್ರೀಯ ತಂಡದ ಕೋಚ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

Post Author: Ravi Yadav