ಕಾಯಿಲೆಗಳಿಗೆ ದುಬಾರಿ ಔಷಧಿಗಳ ಮೊರೆ ಹೋಗುವ ಮೊದಲು ಈ ಗಿಡದ ಉಪಯೋಗವನ್ನು ತಿಳಿದುಕೊಳ್ಳಿ..!

ಕಾಯಿಲೆಗಳಿಗೆ ದುಬಾರಿ ಔಷಧಿಗಳ ಮೊರೆ ಹೋಗುವ ಮೊದಲು ಈ ಗಿಡದ ಉಪಯೋಗವನ್ನು ತಿಳಿದುಕೊಳ್ಳಿ..!

ನಮಸ್ಕಾರ ಸ್ನೇಹಿತರೇ, ದಕ್ಷಿಣ ಭಾರತದ ಎಲ್ಲಾ ಹಳ್ಳಿಗಳಲ್ಲು ಕಾಣಿಸಿಕೊಳ್ಳುವಂತಹ ಒಂದು ಅಪರೂಪದ ಸಸ್ಯದ ಬಗ್ಗೆ ನಾವು ಇವತ್ತು ನಿಮಗೆ ತಿಳಿಸುತ್ತೇವೆ. ಈ ಸಸ್ಯದ ಹೆಸರು ಸೊಗದೇಬೇರು, ಸಾಮಾನ್ಯವಾಗಿ ಈ ಗಿಡದ ಬಗ್ಗೆ ಹಳ್ಳಿಯ ಜನರಿಗೆ ತೀರ ಪರಿಚಯವಿರುತ್ತದೆ. ಈ ಗಿಡದ ಎಲೆಗಳು ದಾಳಿಂಬೆ ಗಿಡದ ಎಲೆಯಂತೆ ಕಾಣುತ್ತೆ, ಮತ್ತು ಸ್ವಲ್ಪ ಉದ್ದವಾಗಿರುತ್ತದೆ. ಪ್ರತಿ ಎಲೆಯ ಮಧ್ಯದಲ್ಲಿ ಒಂದು ಬಿಳಿಯ ನಾಮದ ರೀತಿ ಇರುತ್ತದೆ, ಆದ್ದರಿಂದ ಇದನ್ನು ನಾಮದ ಬಳ್ಳಿ ಎಂದು ಸಹ ಕರೆಯುತ್ತಾರೆ.

ಅಷ್ಟೇ ಅಲ್ಲದೆ ಈ ಬಳ್ಳಿಯ ಬೇರುಗಳು ಸುಗಂಧ ವಾಸನೆ ಬೀರುವುದರಿಂದ, ಸುಗಂಧದ ಬೇರು ಎಂದು ಸಹ ಕರೆಯುವುದುಂಟು. ಇನ್ನು ಆಯುರ್ವೇದದ ಗ್ರಂಥದಲ್ಲಿ ಸೊಗದೇಬೇರಿನ ಗುಣ ಮತ್ತು ಉಪಯೋಗಗಳ ಬಗ್ಗೆ ದೀರ್ಘವಾಗಿ ವಿವರಣೆ ಮಾಡಲಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಚರ್ಮರೋಗ ವಿದ್ದರೆ ರೋಗಿಯ ಪ್ರಕೃತಿಯನ್ನು ಅನುಸರಿಸಿ ಕಷಾಯ ಚೂರ್ಣ ಪಾನಕ ಮುಂತಾದವುಗಳನ್ನು ವೈದ್ಯರು ನಿಯೋಜನೆ ಮಾಡುತ್ತಾರೆ. ಹಾಗೂ ಪಿತ್ತದಿಂದ ಚರ್ಮದ ರೋಗ ಅಥವಾ ಚರ್ಮದ ಉರಿ ಇದ್ದರೆ ಬೆಚ್ಚಗಿನ ನೀರಿಗೆ ಗಿಡದ ಬೇರಿನ ಪುಡಿಯನ್ನು ಹಾಕಿ ಸೇವನೆ ಮಾಡುವುದರಿಂದ ಚರ್ಮದ ಸಮಸ್ಯೆ ಹಂತಹಂತವಾಗಿ ನಿವಾರಣೆಯಾಗುತ್ತದೆ.

ಇನ್ನು ಮಂಡಿಗಳು ಕೆಂಪಾಗಿ ಊದಿಕೊಂಡಿದ್ದರೆ, ಈ ಗಿಡದ ಬೇರಿನ ಪುಡಿಯನ್ನು ನೀರಿನಲ್ಲಿ ಕಲಸಿ ಮಂಡಿಗಳಿಗೆ ಲೇಪಿಸಿದರೆ, ಯಾವುದೇ ರೀತಿಯ ಮಂಡಿ ನೋವು ಶಮನವಾಗುತ್ತದೆ. ಇನ್ನೂ ಹಲ್ಲು ನೋವಿದ್ದರೆ ಈ ಗಿಡದ ಬೇರಿನ ಪುಡಿಯನ್ನು ಹಲ್ಲುಗಳ ಮಧ್ಯೆ ಇಟ್ಟುಕೊಂಡರೆ ಹಲ್ಲು ನೋವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಕೂದಲು ಉದ್ದವಾಗಿ ಬೆಳೆಯಲು ಮತ್ತು ಕೇಶ ವೃದ್ಧಿಯಾಗಿ ಸೊಂಪಾಗಿ ಬೆಳೆಯಲು ಈ ಗಿಡದ ಬೇರಿನ ತೊಗಟೆಯನ್ನು ಚೂರ್ಣ ಮಾಡಿ ಅದನ್ನು ಒಂದು ಭರಣಿಯಲ್ಲಿ ಶೇಕರಣೆ ಮಾಡಬೇಕು, 5 ಗ್ರಾಂ ನಷ್ಟು ಅದನ್ನು ಸಂಗ್ರಹಿಸಿ ಪ್ರತಿದಿನ ಸೇವನೆ ಮಾಡಬೇಕು.

ಹಾಗೆಯೇ ದೇಹದಲ್ಲಿ ಯಾರಿಗೆ ರೋಗನಿರೋಧಕ ಶಕ್ತಿ ಇರುವುದಿಲ್ಲವೋ ಅಂತವರು ಗಿಡದ ಬೇರನ್ನು ಪುಡಿ ಮಾಡಿ ಜೇನುತುಪ್ಪದೊಂದಿಗೆ ಕಲಸಿ ಸೇವನೆ ಮಾಡುವುದರಿಂದ ಶಕ್ತಿ ಹೆಚ್ಚಿಸುತ್ತದೆ ಮತ್ತು ಶರೀರದ ದೃಢತೆಯನ್ನು ಸಹ ಹೆಚ್ಚಿಸುತ್ತದೆ. ಇದರ ಚೂರ್ಣವನ್ನು ಎಳ ನೀರಿನೊಂದಿಗೆ ಸೇವನೆ ಮಾಡುವುದರಿಂದ ಮೂತ್ರ ತಡೆ ಉಂಟಾಗುವುದು ಮತ್ತು ಉರಿಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೂ ಈ ಚೂರ್ಣದ ಕಷಾಯವನ್ನು ಸೇವನೆ ಮಾಡುವುದರಿಂದ ಬಾಯಾರಿಕೆ ದಾಹದಂತ ಸಮಸ್ಯೆಯೂ ಕೂಡ ಕಡಿಮೆಯಾಗುತ್ತದೆ.