ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ಬಾಸ್ ನಿಲ್ಲಿಸಲು ಅಧಿಕೃತ ಆದೇಶ ಹೊರಡಿಸಿದ ಕಲರ್ಸ್ ವಾಹಿನಿ, ಯಾವಾಗ ಕೊನೆಯ ದಿನ ಗೊತ್ತಾ??

2

ನಮಸ್ಕಾರ ಸ್ನೇಹಿತರೇ ಇಷ್ಟು ದಿವಸ ಕೋರೋಣ ಕಾರಣದಿಂದ ಮನೆಯಲ್ಲಿ ಎಲ್ಲರೂ ಇರ ಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಕೂಡ ಯಾರು ಮನರಂಜನೆಯ ಕುರಿತು ಹೆಚ್ಚಿನ ಆಲೋಚನೆ ಮಾಡುವ ಅಗತ್ಯವಿರಲಿಲ್ಲ. ಯಾಕೆಂದರೆ ಒಂದು ಕಡೆ ದಾರವಾಹಿಗಳು ಹಾಗೂ ಬಿಗ್ ಬಾಸ್ ಕಾರ್ಯಕ್ರಮವಾದರೆ ಮತ್ತೊಂದು ಕಡೆ ಐಪಿಎಲ್ ಟೂರ್ನಿಯು ಜನರಿಗೆ ಮನರಂಜನೆ ನೀಡುವುದರಲ್ಲಿ ಯಶಸ್ವಿಯಾಗುತ್ತಿತ್ತು.

ಆದರೆ ಇದೀಗ ಐಪಿಎಲ್ ಟೂರ್ನಿಯ ಕೊರೋನಾ ಕಾರಣದಿಂದ ನಿಂತು ಹೋಗಿರುವುದು ಬಹುಶಹ ನಮಗೆಲ್ಲರಿಗೂ ತಿಳಿದಿದೆ. ಇನ್ನು ಉಳಿದಿರುವುದು ಧಾರವಾಹಿ ಮತ್ತು ಬಿಗ್ ಬಾಸ್ ಕಾರ್ಯಕ್ರಮ ಮಾತ್ರ

ಇದೀಗ ಕರ್ನಾಟಕ ದೇಶದಲ್ಲಿ ಅಧಿಕೃತ ಆದೇಶ ಹೊರಡಿಸಿರುವ ಕಾರಣ ಯಾವುದೇ ಚಿತ್ರೀಕರಣಕ್ಕೆ ಅವಕಾಶವಿಲ್ಲ ಎಂಬುದು ತಿಳಿದು ಬಂದಿದೆ. ಆದ ಕಾರಣ ಇನ್ನು ಮುಂದೆ ಯಾವುದೇ ಧಾರವಾಹಿಗಳು ಚಿತ್ರೀಕರಣ ನಡೆಯುವುದಿಲ್ಲ ಇನ್ನು ಅಷ್ಟೇ ಅಲ್ಲದೆ ಹೊರಗಿನ ಪ್ರಪಂಚದ ಕುರಿತು ಯಾವುದೇ ಅರಿವಿಲ್ಲದೆ ಮನೆಯೊಳಗಡೆ ಆರಾಮ್ ಆಗಿರುವ ಬಿಗ್ ಬಾಸ್ ಮನೆಯನ್ನು ಕೂಡ ನಿಲ್ಲಿಸಲು ಸಿದ್ಧತೆ ನಡೆಸಲಾಗಿತ್ತು ಇದೇ ಭಾನುವಾರ ಅಂದರೆ ನಾಳೆ ಬಿಗ್ ಬಾಸ್ ಕಾರ್ಯಕ್ರಮ ಅಂತ್ಯವಾಗುವುದು ಖಚಿತ. ಈ ಕುರಿತು ಕಲರ್ಸ್ ಕನ್ನಡ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಅಧಿಕೃತ ಆದೇಶ ಹೊರಡಿಸಿದ್ದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ