ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸಾಹಸಸಿಂಹನ ಜೀವನ ಹೇಗಿತ್ತು ಗೊತ್ತಾ.? ವಿಷ್ಣುವರ್ಧನ್ ಎಂದೂ ಮರೆಯಲಾಗದ ಮಾಣಿಕ್ಯ…! ಇಲ್ಲಿದೆ ನೋಡಿ ನೀವರಿಯದ ದಾದಾ ನ ಮಾಹಿತಿ.

1

ನಮಸ್ಕಾರ ಸ್ನೇಹಿತರೇ, ಸಾಹಸಸಿಂಹ ಎಂದೆ ಅಸಂಖ್ಯಾತ ಅಭಿಮಾನಿಗಳ ಹೃದಯ ಮಾನಸದಲ್ಲಿ ವಿರಾಜಿಸಿದರು ನಟ ಶ್ರೇಷ್ಠ ಡಾ.ವಿಷ್ಣುವರ್ಧನ್ ರವರು. 70ನೇ ದಶಕದಲ್ಲಿ ಕನ್ನಡ ಚಲನಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನು ಎಬ್ಬಿಸಿದ ಈ ಮಹಾ ಕಲಾವಿದ ಅಂದಿನ ಯಂಗ್ ಆಂಗ್ರಿ ಮ್ಯಾನ್ ಎಂದೇ ಹೆಸರಾದವರು. ವಿಷ್ಣುವರ್ಧನ್ ರವರ ಜೀವನದ ಕೆಲವೊಂದು ಸ್ವಾರಸ್ಯಕರವಾದ ಮಾಹಿತಿಗಳನ್ನು ನಾವಿವತ್ತು ತಿಳಿಯೋಣ, ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಟ ವಿಷ್ಣುವರ್ಧನ್ ರವರ ಮೂಲನಾಮ ಸಂಪತ್ ಕುಮಾರ್ 1950 ಸೆಪ್ಟಂಬರ್ 18ರಂದು ಎಚ್ಎಲ್ ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಗಳಿಗೆ ಜನಿಸಿದ್ದ. ವಿಷ್ಣುವರ್ಧನ್ ಅವರ ಜನ್ಮಸ್ಥಳ ಮೈಸೂರು ಜಿಲ್ಲೆ. ವಿಷ್ಣುವರ್ಧನ್ ರವರ ತಂದೆ ನಾರಾಯಣರಾವ್ ಓರ್ವ ಸಂಗೀತ ಸಂಯೋಜಕರು, ವಾದಕರು ಮತ್ತು ನಾಟಕಗಳಿಗೆ ಕಥೆಯನ್ನು ಬರೆಯುತ್ತಿದ್ದ ಸಾಹಿ ತಿ, ಕೂಡ ಆಗಿದ್ದರು. ಇವರಿಗೆ ಒಟ್ಟು ಆರು ಜನ ಮಕ್ಕಳು, ಇಬ್ಬರು ಗಂಡು ಮಕ್ಕಳಾದರೆ, ಉಳಿದ ನಾಲ್ಕು ಹೆಣ್ಣು ಮಕ್ಕಳು. ಅದರಲ್ಲಿ ಎರಡನೆಯವರು ವಿಷ್ಣುವರ್ಧನ್.

ಒಂದು ವೇಳೆ ವಿಷ್ಣುವರ್ಧನ್ ರವರು ಚಿತ್ರರಂಗಕ್ಕೆ ಏನಾದರೂ ಬರೆದೆ ಇದ್ದಿದ್ರೆ ಸೈನ್ಯಕ್ಕೆ ಸೇರುತ್ತಿದ್ದರಂತೆ, ಯಾಕೆಂದರೆ ನನಗೆ ಸಾಹಸ ಮತ್ತು ಚಾಲೆಂಜ್ ಗಳೆಂದರೆ ತುಂಬಾನೇ ಇಷ್ಟ ಎಂದು ಸ್ವತಹ ಅವರೇ ಹೇಳಿದ್ದುಂಟು. ವಿಷ್ಣುವರ್ಧನ್ ರವರು ಮೊದಲ ಬಾರಿಗೆ ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ನಂತರ ಬೆಂಗಳೂರಿನ ಕನ್ನಡ ಮಾಡಲ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮುಗಿಸಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪಡೆದುಕೊಂಡರು.

ಇನ್ನು ವಿಷ್ಣುವರ್ಧನ್ ರವರ ಸಿನಿ ಜರ್ನಿಯ ಬಗ್ಗೆ ನೋಡುವುದಾದರೆ, ನಮಗೆಲ್ಲಾ ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಚಿತ್ರ ನಾಗರಹಾವು ಗೊತ್ತೇ ಇದೆ ಆದರೆ ಇದಕ್ಕೂ ಮುನ್ನವೇ 1971 ರಲ್ಲಿ ವಂಶವೃಕ್ಷ ಎಂಬ ಹೆಸರಿನ ಗಿರೀಶ್ ಕಾರ್ನಾಡ್ ರವರ ನಿರ್ದೇಶನದ ಬ್ಲಾಕ್ ಅಂಡ್ ವೈಟ್ ಕನ್ನಡ ಚಿತ್ರದಲ್ಲಿ ವಿಷ್ಣು ನಟಿಸಿದ್ದರು. ಇದೆ ಅವರ ಅಭಿನಯದ ಮೊದಲ ಚಿತ್ರ. ಇದಾದ ಮರುವರ್ಷ ಅಂದರೆ 1972 ಪುಟ್ಟಣ್ಣ ಕಣಗಾಲ್ ರವರ ನಾಗರಹಾವು ಚಿತ್ರಕ್ಕೆ ವಿಷ್ಣು ಆಯ್ಕೆಯಾದರು. ಆ ಕಾಲಕ್ಕೆ ವಿಶಿಷ್ಟ ಕಥೆಯ ಮಾಸ್ ಹಂದರವನ್ನು ಹೊಂದಿದ್ದ ಈ ಚಿತ್ರ ಕರ್ನಾಟಕದ ಲ್ಲೀ, ಎಂತಹ ಸದ್ದು ಮಾಡಿತು.

ನಟಿಸಿದ ಎರಡನೇ ಚಿತ್ರದಿಂದಲೇ ನಟ ವಿಷ್ಣುವರ್ಧನ್ ಕರ್ನಾಟಕದ ಮನೆಮಾತಾಗಿ ಹೋದರು. ಕನ್ನಡದ ನೂತನ ಆಂಗ್ರಿ ಯಂಗ್ ಮ್ಯಾನ್ ಎಂದೆ ಹಲವಾರು ಪ್ರತ್ರಿಕೆಗಳು ಅವರನ್ನು ಬಿಂಬಿಸಿ ಬರೆದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರ್ ಆಗಿದ್ದ ವಿಷ್ಣು ಅವರಿಗೆ ವಿಷ್ಣುವರ್ಧನ್ ಎಂದು ಹೆಸರು ಕೊಟ್ಟರು. ಇದಾದ ಬಳಿಕ 1973ರಲ್ಲಿ ಸೀತೆಯಲ್ಲ ಸಾವಿತ್ರಿ, ಮನೆ ಬೆಳಗಿದ ಸೊಸೆ ಹಾಗೂ ಗಂಧದಗುಡಿ ಸಿನಿಮಾಗಳಲ್ಲಿ ನಟಿಸಿದ್ದ ವಿಷ್ಣು 1974 ರಲ್ಲಿ ಅವಾರ್ಡ್ ಸಿನಿಮಾವಾದ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸಿದ್ದರು.ಇಲ್ಲಿಂದ ಶುರುವಾದ ವಿಷ್ಣುರವರ ಸಿನಿಪಯಣ ಮುಂದೆ ಆನೆ ನಡೆದದ್ದೇ ದಾರಿ ಎಂಬಂತೆ ವೈಭವವಾಗಿ ಸಾಗಿತ್ತು. 

ವಿಷ್ಣುವರ್ಧನ್ ಹಾಗೂ ನಟಿ ಸುವಾಸಿನಿ ಅವರ ಜೋಡಿ ಎಂಬತ್ತರ ದಶಕದ ಕನ್ನಡದ ಜನಪ್ರಿಯ ಜೋಡಿ ಎನಿಸಿಕೊಂಡಿತ್ತು.1984 ರಲ್ಲಿ ತೆರೆಕಂಡ ಸೂಪರ್ ಹಿಟ್ ಬಂಧನ ಸಿನಿಮಾವೇ ಇದಕ್ಕೆ ಸಾಕ್ಷಿ. 1985 ರಲ್ಲಿ ಜೋಸೈಮನ್ ರವರ ನಿರ್ದೇಶನದಲ್ಲಿ ತೆರೆಕಂಡ ಸಾಹಸಸಿಂಹ ಚಿತ್ರದಿಂದ ಇವರಿಗೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಎಂಬ ಬಿರುದನ್ನು ತಂದುಕೊಟ್ಟಿತು. ಹಲವಾರು ಸಾಮಾಜಿಕ ಕಾರ್ಯ ಮತ್ತು ಕರ್ನಾಟಕದ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದ ನಟ ವಿಷ್ಣುವರ್ಧನ್ ಒಬ್ಬ ಸಮಾಜಮುಖಿ ಮತ್ತು ಕರ್ನಾಟಕಕ್ಕೆ ದೊರೆತಂತ ಆಸ್ತಿ ಆಗಿದ್ದರು.

2003ರಲ್ಲಿ ಅವರ ಸಾ’ವಿನ ಬಳಿಕ ಅವರ ಚಿತ್ರವುಳ್ಳ ಸ್ಟ್ಯಾಂಪ್ ಅನ್ನು ಸ’ರ್ಕಾರವೇ ಹೊರಡಿಸಿತ್ತು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸಮಾ’ಧಿ ಇದೆ. ಈಗಲೂ ಸಹ ಡಾ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗದೆ ಇರುವುದು ಸರ್ಕಾರ ಅವರ ಸಾಧನೆಯೆಡೆಗೆ ತೋರುತ್ತಿರುವ ದಿವ್ಯ ಅಸಡ್ಡೆ ಯಾಗಿದೆ. ಕೇವಲ ಬೆಂಗಳೂರು ಅಲ್ಲದೆ ಕರ್ನಾಟಕದಾದ್ಯಂತ ವಿಷ್ಣುವರ್ಧನ್ ರವರ ಪೂರ್ಣ ಮತ್ತು ಹರೇ ವಿಗ್ರಹಗಳನ್ನು ರಚಿಸಲಾಗಿದೆ. ಯಶಸ್ವಿ ಪಂಚಭಾಷಾ ನಟರಾಗಿದ್ದ ವಿಷ್ಣು ನಿಜಕ್ಕೂ ಅತ್ಯಂತ ಮಹೋನ್ನತ ಕಲಾವಿದನಾಗಿ ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿರುವ ಅಪರೂಪದ ಕಲಾವಿದ.