ಕಡಿಮೆ ಎಣ್ಣೆಯಿಂದ ರುಚಿಯಾದ ಹೊಸ ರೀತಿಯ ತಿಂಡಿ ಹೇಗೆ ಮಾಡುವುದು ಗೊತ್ತೇ?? ಹೀಗೆ ಟ್ರೈ ಮಾಡಿ.

ಕಡಿಮೆ ಎಣ್ಣೆಯಿಂದ ರುಚಿಯಾದ ಹೊಸ ರೀತಿಯ ತಿಂಡಿ ಹೇಗೆ ಮಾಡುವುದು ಗೊತ್ತೇ?? ಹೀಗೆ ಟ್ರೈ ಮಾಡಿ.

ನಮಸ್ಕಾರ ಸ್ನೇಹಿತರೇ, ಕೇವಲ 2 ಚಮಚ ಎಣ್ಣೆಯನ್ನು ಉಪಯೋಗಿಸಿಕೊಂಡು ಮಾಡುವ ಹೊಸ ರೀತಿಯ ತಿಂಡಿಯನ್ನು ಇಂದು ನಿಮಗೆ ತಿಳಿಸಲಾಗಿದೆ. ಇದನ್ನು ಬೆಳಗಿನ ತಿಂಡಿಗೆ ಹಾಗೂ ಸಂಜೆಯ ಹೊತ್ತು ಸ್ಯಾಕ್ಸ್ ರೀತಿಯು ಸಹ ತಿನ್ನಬಹುದು. ತಿಂಡಿ ಮಾಡಲು ಬೇಕಾಗುವ ಸಾಮಗ್ರಿಗಳು: ಎಣ್ಣೆ, 1 ಚಮಚ ಜೀರಿಗೆ, 2 ಹಸಿ ಮೆಣಸಿನಕಾಯಿ, 2 – 3 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಬಟ್ಟಲು ಹಸಿಬಟಾಣಿ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಅಚ್ಚ ಕಾರದ ಪುಡಿ, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಗರಂ ಮಸಾಲ, 1 ಚಮಚ ರೆಡ್ ಚಿಲ್ಲಿ ಸಾಸ್,1 ಬಟ್ಟಲು ಗೋದಿ ಹಿಟ್ಟು, ಸ್ವಲ್ಪ ಕೊಬ್ಬರಿ ಎಣ್ಣೆ.

ತಿಂಡಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ಎರಡು ಚಮಚದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ 1 ಚಮಚ ಜೀರಿಗೆ, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ ಅರ್ಧ ನಿಮಿಷಗಳಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಒಂದು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಸಿ ಬಟಾಣಿ, ಅಚ್ಚಕಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಗರಂ ಮಸಾಲ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ರೆಡ್ ಚಿಲ್ಲಿ ಸಾಸ್ ಹಾಕಿ ಮಿಕ್ಸ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮತ್ತೊಂದು ಕಡೆ ಒಂದು ಬಟ್ಟಲು ತೆಗೆದುಕೊಂಡು ಅದಕ್ಕೆ ಒಂದು ಬಟ್ಟಲಿನಷ್ಟು ಗೋಧಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರನ್ನು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.

ನಂತರ ಗೋಧಿ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಒಂದು ಉಂಡೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಲಟ್ಟಿಸಿಕೊಂಡು ಅದಕ್ಕೆ ಫ್ರೈ ಮಾಡಿದ ಮಿಶ್ರಣವನ್ನು ಹಾಕಿ ಗೋಧಿ ಹಿಟ್ಟಿನಿಂದ ಮುಚ್ಚಿಕೊಂಡು ವೃತ್ತಾಕಾರದ ಉಂಡೆಗಳಾಗಿ ಮಾಡಿಕೊಳ್ಳಿ. ನಂತರ ಎಲ್ಲಾ ಉಂಡೆಗಳನ್ನು ಇದೇ ರೀತಿ ಮಾಡಿಕೊಂಡು ಒಂದು ಪ್ಲೇಟಿನಲ್ಲಿ ಇಟ್ಟುಕೊಳ್ಳಿ. ನಂತರ ಇಡ್ಲಿ ಕುಕ್ಕರ್ ನನ್ನು ತೆಗೆದುಕೊಂಡು, ಅದರ ಪ್ಲೇಟ್ ನ ಮೇಲೆ ಎಣ್ಣೆಯನ್ನು ಸವರಿಕೊಳ್ಳಿ.ನಂತರ ಗೋಧಿ ಹಿಟ್ಟಿನಿಂದ ಮಾಡಿದ ಉಂಡೆಗಳನ್ನು ಇಟ್ಟು ಅದರ ಮೇಲೆ ಮತ್ತೆ ಎಣ್ಣೆಯನ್ನು ಸವರಿ ಹಬೆಯಲ್ಲಿ ಬೇಯಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ತವಾವನ್ನು ಇಟ್ಟು ಅದರ ಮೇಲೆ ಕೊಬ್ಬರಿ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಹಬೆಯಲ್ಲಿ ಬೇಯಿಸಿಕೊಂಡ ಉಂಡೆಗಳನ್ನು ಇಟ್ಟು ಎರಡು ಬದಿಯಲ್ಲಿ ಫ್ರೈ ಮಾಡಿಕೊಂಡರೆ ತಿಂಡಿ ಸವಿಯಲು ಸಿದ್ಧ.