ಕೊನೆಗೂ ಟೆನ್ನಿಸ್ ಕೃಷ್ಣರವರಿಗೆ ಖುಲಾಯಿಸಿದ ಅದೃಷ್ಟ ! ಅಭಿಮಾನಿಗಳಿಗೆ ಸಿಹಿ ಸುದ್ದಿ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಕಂಡ ಅತ್ಯಂತ ಖ್ಯಾತ ಹಾಸ್ಯ ನಟರಲ್ಲಿ ಒಬ್ಬರಾಗಿರುವ ಟೆನ್ನಿಸ್ ಕೃಷ್ಣರವರ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಹಾಸ್ಯ ಎಂದರೆ ಕೇವಲ ಡಬಲ್ ಮೀನಿಂಗ್ ಡೈಲಾಗ್ ಆಗಿರುವ ಸಮಯದಲ್ಲಿ ಖಂಡಿತ ನಾವು ನೀವು ಎಲ್ಲರೂ ಕೂಡ ಯಾವುದೇ ಡಬಲ್ ಮೀನಿಂಗ್ ಇಲ್ಲದೆ ನಮ್ಮನ್ನು ನಕ್ಕು ನಲಿಸಿದ ಕಲಾವಿದರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ.

ಹೀಗೆ ಯಾವುದೇ ಡಬಲ್ ಮೀನಿಂಗ್ ಡೈಲಾಗ್ ಗಳಿಲ್ಲದೆ ನಮ್ಮನ್ನು ನಕ್ಕು ನಲಿಸಿದ ಹಾಸ್ಯ ನಟರಲ್ಲಿ ಟೆನ್ನಿಸ್ ಕೃಷ್ಣರವರ ಕೂಡ ಒಬ್ಬರು. ಕನ್ನಡದ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿರುವ ಟೆನ್ನಿಸ್ ಕೃಷ್ಣರವರ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ವಿಪರ್ಯಾಸವೆಂಬಂತೆ ಇದೀಗ ಟೆನ್ನಿಸ್ ಕೃಷ್ಣರವರ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಅವಕಾಶಗಳು ಇವರಿಗೆ ಸಿಗುತ್ತಿಲ್ಲ ಎಂಬುದನ್ನು ನೆನಪಿಸಿಕೊಂಡರೆ ನಿಜಕ್ಕೂ ಒಂದು ಕ್ಷಣ ಬೇಜಾರಾಗುತ್ತದೆ.

ಕನಿಷ್ಠಪಕ್ಷ ಚಿತ್ರಗಳಲ್ಲಿ ಬೇಡ, ಯಾವುದಾದರೂ ಕಾಮಿಡಿ ಶೋಗಳಿಗೆ ಇವರನ್ನು ತೀರ್ಪುಗಾರರಾಗಿ ಮಾಡಬಹುದಾಗಿತ್ತು. ಆದರೆ ಯಾರೂ ಕೂಡ ಆ ಕುರಿತು ಗಮನ ಹರಿಸಿಲ್ಲ. ಆದರೆ ಇದೀಗ ಕೊನೆಗೂ ಟೆನ್ನಿಸ್ ಕೃಷ್ಣರವರಿಗೆ ಅದೃಷ್ಟ ಖುಲಾಯಿಸಿದಂತೆ ಕಾಣುತ್ತಿದೆ, ಹೌದು ಸ್ನೇಹಿತರೇ ಇದೀಗ ಬಂದಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ ಇನ್ನು ಕೆಲವೇ ಕೆಲವು ದಿನಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಹಾಸ್ಯ ನಟ ಟೆನ್ನಿಸ್ ಕೃಷ್ಣ ರವರಿಗೆ ಆಹ್ವಾನ ನೀಡಲಾಗಿದೆ ಎಂಬುದು ಕಿರು ತೆರೆಯ ಮೂಲ ಮಾಹಿತಿಗಳಿಂದ ತಿಳಿದುಬಂದಿದೆ. ಎಲ್ಲಾ ಅಂದುಕೊಂಡಂತೆ ಆದಲ್ಲಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ನಾವು ನಮ್ಮ ನೆಚ್ಚಿನ ನಟರಾದ ಟೆನ್ನಿಸ್ ಕೃಷ್ಣ ರವರನ್ನು ತೆರೆಯಮೇಲೆ ನೋಡುವುದು ಖಚಿತ.‌

Post Author: Ravi Yadav