ಮಗಳು ಜಾನಕಿ ಧಾರಾವಾಹಿ ನಿಂತಮೇಲೆ ನಟಿ ಗಾನವಿ ಏನು ಮಾಡುತ್ತಿದ್ದಾರೆ ಗೊತ್ತಾ??

ಮಗಳು ಜಾನಕಿ ಧಾರಾವಾಹಿ ನಿಂತಮೇಲೆ ನಟಿ ಗಾನವಿ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಹಲವಾರು ಅತ್ಯುತ್ತಮ ಧಾರವಾಹಿಗಳನ್ನು ನೀಡಿರುವ ಟಿಎನ್ ಸೀತಾರಾಮನ್ ರವರು ಯಾರಿಗೆ ತಿಳಿದಿಲ್ಲ ಹೇಳಿ. ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಟಿಎನ್ ಸೀತಾರಾಮನ್ ರವರು ಇತ್ತೀಚೆಗೆ ಮತ್ತೊಮ್ಮೆ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೌದು ಮಗಳು ಜಾನಕಿ ಎಂಬ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದರು, ಈ ಧಾರವಾಹಿ ಜನರ ಅಚ್ಚ್ಚು ಮೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿತ್ತು. ಧಾರವಾಹಿಯಲ್ಲಿ ನಾಯಕಿಯ ಪಾತ್ರವನ್ನು ಗಾನವಿ ಲಕ್ಷ್ಮಣ್ ರವರು ನಟನೆ ಮಾಡಿದ್ದರು.

ಈ ಮಗಳು ಜಾನಕೀ ಧಾರವಾಹಿಯ ಮೂಲಕ ನಟಿ ಗಾನವಿ ರವರು ಕನ್ನಡದ ಜನತೆಯ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಧಾರಾವಾಹಿ ಇವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. ಧಾರವಾಹಿಗೆ ಜನರು ಕೂಡ ಉತ್ತಮ ಪ್ರತಿಕ್ರಿಯೆ ನೀಡಲು ಆರಂಭಿಸಿದರು, ಹೀಗೆ ಯಶಸ್ಸಿನ ಹಾದಿಯ ನಂತರ ಮಗಳು ಜಾನಕಿ ಧಾರಾವಾಹಿ ಕಳೆದ ವರ್ಷದಲ್ಲಿ ಲೊಕ್ಡೌನ್ ಸಂದರ್ಭದಲ್ಲಿ ಕಾರಣಾಂತರಗಳಿಂದ ಅಂತ್ಯವಾಗಿದೆ. ಹೀಗೆ ಧಾರಾವಾಹಿ ಮುಗಿದ ಬಳಿಕ ಜಾನಕಿ ಪಾತ್ರದಾರಿ ನಟಿ ಗಾನವಿ ಲಕ್ಷ್ಮಣ್ ರವರು ಎಲ್ಲಿದ್ದಾರೆ ಹಾಗೂ ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತೆ ಬನ್ನಿ ಈ ಕುರಿತು ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಮಗಳು ಜಾನಕಿ ಧಾರಾವಾಹಿ ಯಶಸ್ವಿಗೊಂಡ ಸಮಯದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶಗಳು ಇವರನ್ನು ಹುಡುಕಿ ಬಂದಿದ್ದವು. ಆದರೆ ಗಾನವಿ ರವರು ಧಾರಾವಾಹಿ ಮುಗಿಯುವ ವರೆಗೂ, ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಧಾರವಾಹಿ ಮುಗಿದ ಮೇಲೆ ಕನ್ನಡದ ಯುವ ನಿರ್ದೇಶಕ ರಿಷಬ್ ಶೆಟ್ಟಿ ಅವರು ನಟನೆ ಮಾಡುತ್ತಿರುವವರು ಮತ್ತೊಂದು ಸಿನಿಮಾಗೆ ಇವರಿಗೆ ಆಫರ್ ಬಂದಿತು. ಇದೀಗ ರಿಷಬ್ ಶೆಟ್ಟಿ ರವರ ಜೊತೆ ನಟನೆ ಮಾಡಲು ಗಾನವಿ ರವರು ಒಪ್ಪಿಕೊಂಡಿದ್ದು ರಿಷಬ್ ಶೆಟ್ಟಿ ರವರು ಮತ್ತು ಅವರ ತಂಡ ಲಾಕ್ ಡೌನ್ ಸಂದರ್ಭದಲ್ಲಿ ತ್ರಿಲ್ಲರ್ ಹಾಗೂ ಕಾಮಿಡಿ ಇರುವ ಒಂದು ಕಥೆಯನ್ನು ರಚಿಸಿ ಹೀರೋ ಎಂಬ ಟೈಟಲ್ ನೊಂದಿಗೆ ಚಿತ್ರೀಕರಣ ಆರಂಭಿಸಿದೆ. ಇದೀಗ ನಟಿ ಗಾನವಿ ರವರು ಮುಖ್ಯ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮೂಲಗಳ ಪ್ರಕಾರ ಗಾನವಿ ರವರಿಗೆ ಮತ್ತಷ್ಟು ಧಾರವಾಹಿಗಳಿಗೆ ಹಾಗೂ ಸಿನಿಮಾಗಳಲ್ಲಿ ನಟಿಸುವಂತೆ ಆಫರ್ ಗಳು ಸಿಗುತ್ತವೆ.