ಸುಲಭವಾಗಿ ಟಿವಿ ಯಲ್ಲಿ ತೋರಿಸುವಂತೆ ಪೂರಿಯಂತೆ ಉಬ್ಬುವ ಚಪಾತಿ ಮಾಡುವುದು ಹೇಗೆ ಗೊತ್ತೇ??

ಸುಲಭವಾಗಿ ಟಿವಿ ಯಲ್ಲಿ ತೋರಿಸುವಂತೆ ಪೂರಿಯಂತೆ ಉಬ್ಬುವ ಚಪಾತಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಮನೆಯಲ್ಲಿ ಪ್ರತಿಬಾರಿಯೂ ಚಪಾತಿ ಮಾಡುವ ಮುನ್ನ ಅಂದುಕೊಳ್ಳುವುದು ಒಂದೇ ಚಪಾತಿಯನ್ನು ಟಿವಿಯಲ್ಲಿ ತೋರಿಸಿದಂತೆ ಉಬ್ಬುವಂತೆ ಮಾಡಬೇಕು, ಚಪಾತಿ ಉಬ್ಬಿದರೇ ಎಲ್ಲರಿಗೂ ಇಷ್ಟವಾಗುತ್ತದೆ ನೋಡಲು ಚೆಂದ ಕಾಣುತ್ತದೆ. ಬಹುಶಃ ಟಿವಿಯಲ್ಲಿ ಬಳಸಿದ ಗೋಧಿ ಹಿಟ್ಟು ಬಳಸಿದರೆ ಮಾತ್ರ ಹೀಗೆ ಬರುತ್ತದೆ ಇರಬೇಕು ಆದಕಾರಣ ಅದೇ ಹಿಟ್ಟನ್ನು ಮುಂದಿನ ಬಾರಿ ತರೋಣ ಎಂದು ಅಂದುಕೊಂಡು ಇರುತ್ತೇವೆ. ಆದರೆ ಸ್ನೇಹಿತರೇ ಇದರಿಂದ ಯಾವುದೇ ಗೋಧಿಹಿಟ್ಟಿನ ಗುಟ್ಟಿಲ್ಲ, ಬದಲಾಗಿ ನೀವು ಮಾಡುವ ವಿಧಾನವನ್ನು ಬದಲಾಯಿಸಿ ಕೊಂಡಾಗ ನಿಮ್ಮ ಮನೆಯಲ್ಲಿರುವ ಚಪಾತಿ ಕೂಡ ಪೂರಿಯಂತೆ ಉಬ್ಬುತ್ತದೆ. ಬನ್ನಿ ಆಗಿದ್ದರೆ ಪೂರಿಯಂತೆ ಉಬ್ಬುವ ಚಪಾತಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಮೊದಲಿಗೆ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದುವರೆ ಬಟ್ಟಲಿನಷ್ಟು ಗೋಧಿಹಿಟ್ಟು, ಕಾಲು ಚಮಚ ಉಪ್ಪು, 1 ಚಮಚ ಎಣ್ಣೆಯನ್ನು ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಹಿಟ್ಟನ್ನು ಮೃದುವಾಗಿ ಕಲಸಿಕೊಳ್ಳಿ. ನಂತರ ಇದರ ಮೇಲೆ 1 ಚಮಚದಷ್ಟು ಎಣ್ಣೆಯನ್ನು ಸವರಿಕೊಳ್ಳಿ. ನಂತರ 1 ಕಾಟನ್ ಬಟ್ಟೆಯಿಂದ ಹಿಟ್ಟನ್ನು ಮುಚ್ಚಿ 15 ನಿಮಿಷಗಳ ಕಾಲ ನೆನೆಯಲು ಬಿಡಿ. 15 ನಿಮಿಷಗಳ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಒಣ ಗೋಧಿಹಿಟ್ಟನ್ನು ಬಳಸಿಕೊಂಡು ಚಪಾತಿಯನ್ನು ಲಟ್ಟಿಸಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಹೆಂಚನ್ನು ಇಟ್ಟು ಚೆನ್ನಾಗಿ ಕಾಯಲು ಬಿಡಿ. ಹೆಂಚು ಚೆನ್ನಾಗಿ ಕಾದ ನಂತರ ಚಪಾತಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಹಾಗೆಯೇ ಬಿಡಿ. ಚಪಾತಿಯು ಸ್ವಲ್ಪ ಉಬ್ಬುವುದಕ್ಕೆ ಪ್ರಾರಂಭವಾಗುತ್ತದೆ. ನಂತರ ಚಪಾತಿಯನ್ನು ತಿರುಗಿಸಿ ಹಾಕಿ ಮತ್ತೆ 30 ಸೆಕೆಂಡುಗಳ ಕಾಲ ಹಾಗೆಯೇ ಬಿಡಿ. ಒಂದು ವೇಳೆ ಚಪಾತಿ ಪೂರಿಯ ರೀತಿಯಲ್ಲಿ ಹುಬ್ಬಿ ಬರದಿದ್ದರೆ, ಒಂದು ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಚಪಾತಿ ಒತ್ತಿದರೆ ಚಪಾತಿಯು ಪೂರಿ ರೀತಿಯಲ್ಲಿ ಉಬ್ಬುತ್ತದೆ. ನಂತರ ಎರಡು ಬದಿಯಲ್ಲಿ ಎಣ್ಣೆಯನ್ನು ಸವರಿದರೆ ಪುರಿ ತರ ಉಬ್ಬಿರುವ ಮೆತ್ತನೆಯ ಚಪಾತಿ ರೆಡಿಯಾಗುತ್ತದೆ.