ಉತ್ತಮ TRP ಪಡೆದುಕೊಂಡರೂ, ಡಾನ್ಸ್ ಕರ್ನಾಟಕ ಡಾನ್ಸ್ ಗೆ ಹೊಸ ಬೇಡಿಕೆ ಇಟ್ಟು, ತರಾಟೆಗೆ ತೆಗೆದುಕೊಂಡ ಜನ. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ವಾರ ಆರಂಭವಾಗಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ನೋಡುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಉತ್ತಮ ಟಿಆರ್ಪಿ ಪಡೆದುಕೊಂಡು ಭರ್ಜರಿ ಆರಂಭವನ್ನು ಪಡೆದುಕೊಂಡಿದ್ದರೂ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಮೇಲೆ ಹಲವಾರು ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಂದಿನಂತೆ ಜೀ ಕನ್ನಡ ವಾಹಿನಿಯು ಕೇವಲ ಟಿಆರ್ಪಿ ಗಿಮಿಕ್ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಅಷ್ಟೇ ಅಲ್ಲದೇ ಮೊದಲನೇ ವಾರದಲ್ಲಿಯೇ ಆಯ್ಕೆಯಾಗಿರುವ ಸ್ಪರ್ಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ಕೇಳಿ ಬಂದಿವೆ. ಹೌದು ಸ್ನೇಹಿತರೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ವಿರುದ್ಧ ಹಲವಾರು ವಿಧದ ಅಭಿಪ್ರಾಯಗಳು ಕೇಳಿ ಬಂದಿದ್ದು, ಪ್ರತಿಕ್ರಿಯೆಗಳ ಆಧಾರದ ಮೇರೆಗೆ ಈ ಲೇಖನ ಬರೆಯುತ್ತಿದ್ದೇನೆ.

ಈ ಕಾರ್ಯಕ್ರಮದಲ್ಲಿ ಒಂದೆಡೆ ಸ್ಪರ್ಧಿಗಳು ಡ್ಯಾನ್ಸ್ ಮಾಡದೆ ಜಿಮ್ನಾಸ್ಟಿಕ್ ಹಾಗೂ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ, ಮತ್ತೊಂದೆಡೆ ಕುರಿತು ಗಂಧಗಾಳಿ ಗೊತ್ತಿರದ ಜನರನ್ನು ತೀ’ರ್ಪುದಾರರಾಗಿ ಮಾಡಲಾಗಿದೆ, ಡ್ಯಾನ್ಸ್ ಕುರಿತು ತಿಳಿಯಬೇಕು ಎಂದರೇ ಈಗಾಗಲೇ ಚಿತ್ರರಂಗದಿಂದ ದೂರ ಉಳಿದಿರುವ ವಿನೋದ್ ರಾಜ್ ಹಾಗೂ ಕನ್ನಡದ ಟಾಪ್ ಡ್ಯಾನ್ಸರ್ ಗಳಲ್ಲಿ ಒಂದಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದ ಶಶಿಕುಮಾರ್ ರವರನ್ನು ತೀ’ರ್ಪುದಾರರಾಗಿ ಆಯ್ಕೆಮಾಡಿ, ಆಗ ಸ್ಪರ್ಧಿಗಳು ಡ್ಯಾನ್ಸ್ ಮಾಡುತ್ತಾರೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಟಿಆರ್ಪಿ ಯಲ್ಲಿ ಆಗ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತದೆ. ಜನರು ಕೂಡ ವಿನೋದ್ ರಾಜ್ ಹಾಗೂ ಶಶಿಕುಮಾರ್ ರವರನ್ನು ಕಿರುತೆರೆಯ ಮೇಲೆ ನೋಡಲು ಕಾದು ಕುಳಿತಿದ್ದಾರೆ, ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೇಲಿನ ಫೋಟೋದಲ್ಲಿ ಜನರು ಅಭಿಪ್ರಾಯ ತಿಳಿಸಿರುವ ಕೆಲವೊಂದು ಕಮೆಂಟ್ಗಳನ್ನು ಲಗತ್ತಿಸಲಾಗಿದೆ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ

Post Author: Ravi Yadav